Australia Cricket Team: ಚಾಂಪಿಯನ್ ಆಸ್ಟ್ರೇಲಿಯಾ: WTC ಟ್ರೋಫಿ ಎತ್ತಿ ಹಿಡಿದ ಕಾಂಗರೂ ಪಡೆ

|

Updated on: Jun 12, 2023 | 8:13 AM

IND vs AUS, WTC Final: ಎರಡನೇ ಆವೃತ್ತಿಯ ಡಬ್ಲ್ಯೂಟಿಸಿ ಪ್ರಶಸ್ತಿಯನ್ನು ಕಾಂಗರೂ ಪಡೆ ಎತ್ತಿ ಹಿಡಿದಿದೆ. ಈ ಮೂಲಕ ಐಸಿಸಿ ನಡೆಸುವ ಎಲ್ಲಾ ಪ್ರತಿಷ್ಠಿತ ಕಪ್​ಗಳನ್ನು ಗೆದ್ದ ತಂಡ ಎಂಬ ಖ್ಯಾತಿಗೆ ಆಸಿಸ್​ ತಂಡ ಭಾಜನವಾಗಿದೆ.

1 / 7
ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final) ಪಂದ್ಯ ಮುಕ್ತಾಯಗೊಂಡಿದೆ. ಗುರಿ ಬೆನ್ನಟ್ಟಲು ಸಾಧ್ಯವಾಗದೆ, ದ್ವಿತೀಯ ಇನ್ನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ನಿಂದ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ.

2 / 7
ಎರಡನೇ ಆವೃತ್ತಿಯ ಡಬ್ಲ್ಯೂಟಿಸಿ ಪ್ರಶಸ್ತಿಯನ್ನು ಕಾಂಗರೂ ಪಡೆ ಎತ್ತಿ ಹಿಡಿದಿದೆ. ಈ ಮೂಲಕ ಐಸಿಸಿ ನಡೆಸುವ ಎಲ್ಲಾ ಪ್ರತಿಷ್ಠಿತ ಕಪ್​ಗಳನ್ನು ಗೆದ್ದ ತಂಡ ಎಂಬ ಖ್ಯಾತಿಗೆ ಆಸಿಸ್​ ತಂಡ ಭಾಜನವಾಗಿದೆ.

3 / 7
ಅಂತಿಮ ಐದನೇ ದಿನ ಭಾರತದ ಗೆಲುವಿಗೆ 280 ರನ್​ ಬೇಕಾಗಿತ್ತು. ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಬೇಕಿತ್ತು. ಇದರಲ್ಲಿ ಆಸೀಸ್ ಯಶಸ್ಸು ಸಾಧಿಸಿ ಮೊದಲ ಸೆಷನ್​ನಲ್ಲೇ ಗೆದ್ದುಕೊಂಡಿತು.

4 / 7
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕಾಂಗರೂ ಪಡೆ ಮೊದಲ ಇನಿಂಗ್ಸ್‌ನಲ್ಲಿ 469 ರನ್ಸ್​ಗೆ ಆಲೌಟ್ ಆಯಿತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 296 ರನ್​ ಗಳಿಸಿತು.

5 / 7
ಎರಡನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿ ಭಾರತಕ್ಕೆ 444 ರನ್​ಗಳ ಟಾರ್ಗೆಟ್ ನೀಡಿತು. ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್​ನಲ್ಲಿ  234ಕ್ಕೆ ಆಲೌಟ್ ಆಯಿತು. ಆಸ್ಟ್ರೇಲಿಯಾದ ನೇಥನ್​ ಲಿಯಾನ್​ 4, ಸ್ಕಾಟ್​ ಬೋಲ್ಯಾಂಡ್​ 3, ಮಿಚೆಲ್​ ಸ್ಟಾರ್ಕ್​ 2 ವಿಕೆಟ್ ಕಿತ್ತರು.

6 / 7
ಈ ಮೂಲಕ ಸತತ ಎರಡು ವರ್ಷಗಳ ಕಾಲ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ನ ಪಂದ್ಯಗಳಿಗೆ ತೆರೆ ಬಿದ್ದದ್ದು, ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.

7 / 7
ಇದರಿಂದ ಭಾರತದ 10 ವರ್ಷಗಳ ಐಸಿಸಿ ಕಪ್​ ಬರ ಮುಂದುವರೆದಿದೆ. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಟೆಸ್ಟ್ ಚಾಂಪಿಯನ್​ಶಿಪ್​ನ ಚಾಂಪಿಯನ್ ತಂಡವನ್ನು ಕೇವಲ ಒಂದು ಪಂದ್ಯದಿಂದ ನಿರ್ಧರಿಸಬಾರದು. ಅದರ ಬದಲಿಗೆ 3 ಪಂದ್ಯಗಳ ಸರಣಿ ಮೂಲಕ ಚಾಂಪಿಯನ್ ತಂಡವನ್ನು ನಿರ್ಧರಿಸಬೇಕು ಎಂದಿದ್ದಾರೆ.