RCB vs PBKS, IPL 2023: ಆರ್ಸಿಬಿಗೆ ಇಂದು ಮೊಹಾಲಿಯಲ್ಲಿ ಕಠಿಣ ಪಂದ್ಯ: ಪಿಚ್ ಬಗ್ಗೆ ಕೇಳಿ ಶಾಕ್ ಆದ ಡುಪ್ಲೆಸಿಸ್ ಪಡೆ
Mohali Pitch Report: ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯ ನಡೆಯಲಿರುವ ಮೊಹಾಲಿಯ ಪಿಚ್ ವೇಗದ ಬೌಲರ್ಗಳಿಗೆ ಹೆಚ್ಚು ಸಹಕಾರ ನೀಡಲಿದೆ. ಮುಖ್ಯವಾಗಿ ಆರಂಭದ ಕೆಲವು ಓವರ್ಗಳಲ್ಲಿ ಇಲ್ಲಿ ವೇಗಿಗಳು ಹೆಚ್ಚು ಯಶಸ್ಸು ಸಾಧಿಸುತ್ತಾರೆ.
1 / 9
ಐಪಿಎಲ್ 2023 ರಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲದೆ. ಪಂಜಾಬ್ ಕ್ರಿಕೆಟ್ ಅಸೋಸೊಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ಆಯೋಜಿಸಲಾಗಿದೆ.
2 / 9
ಆರ್ಸಿಬಿ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಜಯ ಸಾಧಿಸಿದೆ. ಉಳಿದ ಮೂರು ಪಂದ್ಯದಲ್ಲಿ ಸೋಲುಂಡಿದೆ. ಇತ್ತ ಪಂಜಾಬ್ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿ ಎರಡು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದ್ದು ಗೆಲುವು ಅನಿವಾರ್ಯ.
3 / 9
ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಆರ್ಸಿಬಿಗೆ ಆಘಾತ ಉಂಟಾಗಿದೆ. ಡುಪ್ಲೆಸಿಸ್ ಪಡೆಯ ದೊಡ್ಡ ಹಿನ್ನಡೆ ಬೌಲಿಂಗ್. ಮೊಹಮ್ಮದ್ ಸಿರಾಜ್ ಬಿಟ್ಟರೆ ಮತ್ಯಾವ ಬೌಲರ್ಗಳು ಮಾರಕವಾಗಿ ಕಾಣಿಸುತ್ತಿಲ್ಲ. ಹೀಗಾಗಿ ಬೌಲಿಂಗ್ ಪಿಚ್ನಲ್ಲಿ ಆರ್ಸಿಬಿ ಅಗ್ನಿ ಪರೀಕ್ಷೆ ಎದುರಿಸಲಿದೆ.
4 / 9
ಮೊಹಾಲಿಯ ಪಿಚ್ ವೇಗದ ಬೌಲರ್ಗಳಿಗೆ ಹೆಚ್ಚು ಸಹಕಾರ ನೀಡಲಿದೆ. ಮುಖ್ಯವಾಗಿ ಆರಂಭದ ಕೆಲವು ಓವರ್ಗಳಲ್ಲಿ ಇಲ್ಲಿ ವೇಗಿಗಳು ಹೆಚ್ಚು ಯಶಸ್ಸು ಸಾಧಿಸುತ್ತಾರೆ. ಬೌನ್ಸ್ ಅನ್ನು ಇಲ್ಲಿ ನಿರೀಕ್ಷಿಸಬಹುದು. ಒಂದು ಬಾರಿ ಬ್ಯಾಟರ್ ಸೆಟ್ ಆದರೆ, ಇಲ್ಲಿ ಸುಲಭವಾಗಿ ರನ್ ಕಲೆಹಾಕಬಹುದು.
5 / 9
ಹೀಗಾಗಿ ಬ್ಯಾಟರ್ ಸೆಟ್ ಆಗುವ ಮುನ್ನವೇ ಬೌಲರ್ಗಳು ಅವರನ್ನು ಪೆವಿಲಿಯನ್ಗೆ ಅಟ್ಟಬೇಕಿದೆ. ಬೌಲಿಂಗ್ನಲ್ಲಿ ದುರ್ಬಲವಾಗಿರುವ ಆರ್ಸಿಬಿ ಎದುರಾಳಿಯನ್ನು ಹೇಗೆ ಮಟ್ಟುಹಾಕುತ್ತೆ ನೋಡಬೇಕಿದೆ.
6 / 9
ಇಂದಿನ ಪಂದ್ಯಕ್ಕೆ ಯಾವುದೇ ಮಳೆಯ ಸಾಧ್ಯತೆ ಇಲ್ಲ. 36-40 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಇರಲಿದೆ. 58 ಐಪಿಎಲ್ ಪಂದ್ಯಗಳು ಮೊಹಾಲಿಯಲ್ಲಿ ನಡೆದಿದ್ದು, 33 ಪಂದ್ಯವನ್ನು ಚೇಸಿಂಗ್ ಮಾಡಿದ ತಂಡ ಗೆದ್ದಿದೆ. ಹಾಗೆಯೆ 25 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಜಯ ಸಾಧಿಸಿದೆ.
7 / 9
ಪ್ರತಿ ಬಾರಿಯಂತೆ ಈ ಬಾರಿಕೂಡ ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದ್ದರೂ ಬೌಲಿಂಗ್ನಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿದೆ. ಮೊಹಮ್ಮದ್ ಸಿರಾಜ್ ಬಿಟ್ಟರೆ ಮತ್ಯಾವ ಬೌಲರ್ ಕೂಡ ಮಾರಕವಾಗಿ ಗೋಚರಿಸುತ್ತಿಲ್ಲ.
8 / 9
ಇಂದಿನ ಪಂದ್ಯಕ್ಕೆ ಆರ್ಸಿಬಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಖಚಿತ ಎಂದು ಹೇಳಬಹುದು. ಹರ್ಷಲ್ ಪಟೇಲ್ ಪದೇಪದೇ ದುಬಾರಿ ಆಗುತ್ತಿದ್ದಾರೆ. ವಿಜಯ್ಕುಮಾರ್ ವಿಶ್ಯಾಂಕ್ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದು ಬಿಟ್ಟರೆ ನಂತರದಲ್ಲಿ ರನ್ ಹರಿಬಿಟ್ಟಿದ್ದಾರೆ.
9 / 9
ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಆರ್ಸಿಬಿ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರ. ಮಹಿಪಾಲ್ ಲುಮ್ರೂರ್, ದಿನೇಶ್ ಕಾರ್ತಿಕ್, ಶಹ್ಬಾಜ್ ಅಹ್ಮಾದ್ ಕಡೆಯಿಂದ ಉತ್ತಮ ಆಟಬರಬೇಕಿದೆ. ಪಾಯಿಂಟ್ ಟೇಬಲ್ನಲ್ಲಿ ಮೇಲಕ್ಕೇರಲು ಇಂದಿನ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.