Prithvi Shaw: 33 ಫೋರ್, 1 ಸಿಕ್ಸ್: ಪೃಥ್ವಿ ಶಾ ಬ್ಯಾಟ್​ನಿಂದ ಸ್ಪೋಟಕ ದ್ವಿಶತಕ

| Updated By: ಝಾಹಿರ್ ಯೂಸುಫ್

Updated on: Jan 10, 2023 | 10:09 PM

Prithvi Shaw Double Century: ಈ ಬಾರಿಯ ರಣಜಿ ಟ್ರೋಫಿಯಲ್ಲಿ ಇದು ಅಸ್ಸಾಂ ವಿರುದ್ಧದ ಪೃಥ್ವಿ ಶಾ ಅವರ ಮೊದಲ ದ್ವಿಶತಕವಾಗಿದೆ. ಅಲ್ಲದೆ ರಣಜಿ ಕ್ರಿಕೆಟ್​ನಲ್ಲಿ 72 ಇನ್ನಿಂಗ್ಸ್‌ಗಳಲ್ಲಿ ಶಾ 12 ಶತಕ ಹಾಗೂ 15 ಅರ್ಧಶತಕಗಳನ್ನೂ ಬಾರಿಸಿದ್ದಾರೆ.

1 / 5
ಗುವಾಹಟಿಯ ಅಮಿಂಗ್‌ವಾನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಅಸ್ಸಾಂ ವಿರುದ್ಧ ರಣಜಿ ಪಂದ್ಯದಲ್ಲಿ ಮುಂಬೈ ಆಟಗಾರ ಪೃಥ್ವಿ ಶಾ ಭರ್ಜರಿ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಸ್ಸಾಂ ತಂಡವು ಬೌಲಿಂಗ್ ಆಯ್ದುಕೊಂಡಿತು.

2 / 5
ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡಕ್ಕೆ ಪೃಥ್ವಿ ಶಾ ಹಾಗೂ ಮುಶೀರ್ ಖಾನ್ ಅತ್ಯುತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ ಈ ಜೋಡಿಯು 123 ರನ್​ ಕಲೆಹಾಕಿತು. ಈ ಹಂತದಲ್ಲಿ ಮುಶೀರ್ (42) ಔಟಾದರು. ಇದಾಗ್ಯೂ ಮತ್ತೊಂದೆಡೆ ಪೃಥ್ವಿ ಶಾ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರೆಸಿದರು.

3 / 5
ಬಿರುಸಿನ ಬ್ಯಾಟಿಂಗ್​ ಮೂಲಕ ಗಮನ ಸೆಳೆದ ಪೃಥ್ವಿ ಶಾ 107 ಎಸೆತಗಳಲ್ಲಿ ಶತಕ ಪೂರೈಸಿದರು. ಸೆಂಚುರಿ ಪೂರ್ಣಗೊಳ್ಳುತ್ತಿದ್ದಂತೆ ರನ್​ಗಳಿಕೆಯ ವೇಗವನ್ನು ಹೆಚ್ಚಿಸಿಕೊಂಡ ಯುವ ಆಟಗಾರ ಅಸ್ಸಾಂ ಬೌಲರ್​ಗಳನ್ನು ಬೆಂಡೆತ್ತಿದರು.

4 / 5
ಪರಿಣಾಮ ಪೃಥ್ವಿ ಶಾ ಬ್ಯಾಟ್​ನಿಂದ ಬರೋಬ್ಬರಿ 33 ಫೋರ್​ಗಳು ಹಾಗೂ 1 ಭರ್ಜರಿ ಸಿಕ್ಸರ್ ಚಚ್ಚಿದರು. ಪರಿಣಾಮ ಶತಕದ ಬೆನ್ನಲ್ಲೇ ದ್ವಿಶತಕ ಕೂಡ ಮೂಡಿಬಂತು. ಅಲ್ಲದೆ ಮೊದಲ ದಿನದಾಟದ ಅಂತ್ಯಕ್ಕೆ ಮುಂಬೈ ತಂಡವು 2 ವಿಕೆಟ್ ನಷ್ಟಕ್ಕೆ 397 ರನ್​ ಕಲೆಹಾಕಿದೆ. 283 ಎಸೆತಗಳಲ್ಲಿ ಅಜೇಯ 240 ರನ್​ ಬಾರಿಸಿರುವ ಪೃಥ್ವಿ 2ನೇ ದಿನಕ್ಕೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

5 / 5
ಈ ಬಾರಿಯ ರಣಜಿ ಟ್ರೋಫಿಯಲ್ಲಿ ಇದು ಅಸ್ಸಾಂ ವಿರುದ್ಧದ ಪೃಥ್ವಿ ಶಾ ಅವರ ಮೊದಲ ದ್ವಿಶತಕವಾಗಿದೆ. ಅಲ್ಲದೆ ರಣಜಿ ಕ್ರಿಕೆಟ್​ನಲ್ಲಿ 72 ಇನ್ನಿಂಗ್ಸ್‌ಗಳಲ್ಲಿ ಶಾ 12 ಶತಕ ಹಾಗೂ 15 ಅರ್ಧಶತಕಗಳನ್ನೂ ಬಾರಿಸಿದ್ದಾರೆ.

Published On - 10:08 pm, Tue, 10 January 23