ಟೆಸ್ಟ್ ಕ್ರಿಕೆಟ್​ನಲ್ಲಿ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ ತ್ರಿಮೂರ್ತಿಗಳು

Updated on: Aug 10, 2025 | 8:05 AM

Zimbabwe vs New Zealand: ನ್ಯೂಝಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡವು ಪ್ರಥಮ ಇನಿಂಗ್ಸ್​ನಲ್ಲಿ ಕೇವಲ 125 ರನ್​ಗಳಿಗೆ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ 601 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು. ಆ ಬಳಿಕ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಝಿಂಬಾಬ್ವೆ ತಂಡವು 117 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ನ್ಯೂಝಿಲೆಂಡ್ ಇನಿಂಗ್ಸ್ ಹಾಗೂ 359 ರನ್​ಗಳ ಭರ್ಜರಿ ಜಯ ಸಾಧಿಸಿದೆ.

1 / 6
ಝಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ರಚಿನ್ ರವೀಂದ್ರ, ಡೆವೊನ್ ಕಾನ್ವೆ ಹಾಗೂ ಹೆನ್ರಿ ನಿಕೋಲ್ಸ್ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಈ ಹಿಂದೆ ಕೇವಲ 6 ಬ್ಯಾಟರ್​ಗಳು ಮಾತ್ರ ನಿರ್ಮಿಸಿದ್ದ ವರ್ಲ್ಡ್​ ರೆಕಾರ್ಡ್ ಅನ್ನು ಸರಿಗಟ್ಟುವ ಮೂಲಕ. ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 3 ಇನಿಂಗ್ಸ್​ನಲ್ಲಿ ಮಾತ್ರ ಮೂವರು ಬ್ಯಾಟರ್​ಗಳು 150+ ರನ್​ ಗಳಿಸಿದ್ದಾರೆ.

2 / 6
ಈ ಪಟ್ಟಿಗೆ ಹೊಸ ಸೇರ್ಪಡೆ ರಚಿನ್ ರವೀಂದ್ರ, ಡೆವೊನ್ ಕಾನ್ವೆ, ಹೆನ್ರಿ ನಿಕೋಲ್ಸ್. ಬುಲವಾಯೊದಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಡೆವೊನ್ ಕಾನ್ವೆ 153 ರನ್ ಬಾರಿಸಿದರೆ, ಆ ಬಳಿಕ ಬಂದ ಹೆನ್ರಿ ನಿಕೋಲ್ಸ್ 150 ರನ್​ ಚಚ್ಚಿದ್ದರು. ಇನ್ನು ರಚಿನ್ ರವೀಂದ್ರ ಕೇವಲ 139 ಎಸೆತಗಳಲ್ಲಿ 165 ರನ್​ ಬಾರಿಸಿದ್ದರು.

3 / 6
ಈ ಮೂಲಕ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್​ನಲ್ಲಿ 150+ ರನ್​ಗಳಿಸಿದ ನ್ಯೂಝಿಲೆಲೆಂಡ್​ನ ಮೊದಲ ತ್ರಿಮೂರ್ತಿಗಳೆನಿಸಿಕೊಂಡರು. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ ಮೂರನೇ ತ್ರಿಮೂರ್ತಿಗಳೆಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾ ದಾಂಡಿಗರು ಈ ಸಾಧನೆ ಮಾಡಿದ್ದರು.

4 / 6
1938 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​ ಬ್ಯಾಟರ್​ಗಳಾದ ಲಿಯನಾರ್ಡೊ ಹಟನ್ 364 ರನ್ ಬಾರಿಸಿದರೆ, ಮೌರಿಸ್ ಲೇಲ್ಯಾಂಡ್ 167 ರನ್​ಗಳಿಸಿದ್ದರು. ಇನ್ನು ಜೋ ಹಾರ್ಡ್​ಸ್ಟಾಪ್ ಅಜೇಯ 169 ರನ್​ ಗಳಿಸಿದ್ದರು. ಈ ಮೂಲಕ ಟೆಸ್ಟ್ ಇತಿಹಾಸದ ಒಂದೇ ಇನಿಂಗ್ಸ್​ನಲ್ಲಿ 150+ ರನ್​ಗಳಿಸಿದ ವಿಶ್ವದ ಮೊದಲ ಮೂವರು ಬ್ಯಾಟರ್​​ಗಳು ಎನಿಸಿಕೊಂಡಿದ್ದರು.

5 / 6
ಇದಾದ ಬಳಿಕ ಈ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾದ ತ್ರಿಮೂರ್ತಿಗಳು ಸರಿಗಟ್ಟಿದ್ದರು. 1986 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್​ ಪಂದ್ಯದಲ್ಲಿ ಭಾರತದ ಮೊಹಮ್ಮದ್ ಅಝರುದ್ದೀನ್ 199 ರನ್ ಬಾರಿಸಿದರೆ, ಸುನಿಲ್ ಗವಾಸ್ಕರ್ 176 ರನ್​ಗಳಿಸಿದ್ದರು. ಇನ್ನು ಕಪಿಲ್ ದೇವ್ 163 ರನ್​ಗಳಿಸಿ ಮಿಂಚಿದ್ದರು. ಈ ಮೂಲಕ ಇಂಗ್ಲೆಂಡ್ ದಾಂಡಿಗರು ನಿರ್ಮಿಸಿದ್ದ ವಿಶೇಷ ವಿಶ್ವ ದಾಖಲೆಯನ್ನು ಅಝರ್, ಗವಾಸ್ಕರ್, ಕಪಿಲ್ ದೇವ್ ಸರಿಗಟ್ಟಿದ್ದರು.

6 / 6
ಇದೀಗ ರಚಿನ್ ರವೀಂದ್ರ (165), ಡೆವೊನ್ ಕಾನ್ವೆ (153) ಹಾಗೂ ಹೆನ್ರಿ ನಿಕೋಲ್ಸ್ (150) ಝಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 150+ ರನ್​ಗಳಿಸುವ ಈ ವಿಶ್ವ ದಾಖಲೆಯನ್ನು  ಸರಿಗಟ್ಟಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್​​ನಲ್ಲಿ ಈ ಸಾಧನೆ ಮಾಡಿದ ನ್ಯೂಝಿಲೆಂಡ್​ನ ಮೊದಲ ತ್ರಿಮೂರ್ತಿಗಳೆಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.