Team India: ಮುಂದುವರೆಯಲು ದ್ರಾವಿಡ್ ನಕಾರ; ಲಕ್ಷ್ಮಣ್ಗೂ ಬೇಕಿಲ್ಲ ಮುಖ್ಯ ಕೋಚ್ ಹುದ್ದೆ..!
ಪೃಥ್ವಿಶಂಕರ | Updated By: Digi Tech Desk
Updated on:
May 17, 2024 | 12:46 PM
Team India Head Coach: ಮಾಧ್ಯಮ ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ವೈಯಕ್ತಿಕ ಕಾರಣಗಳಿಂದಾಗಿ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ. ಅಲ್ಲದೆ ಲಕ್ಷ್ಮಣ್ ಕೂಡ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ.
1 / 8
ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಹೀಗಾಗಿ ರಾಹುಲ್ ದ್ರಾವಿಡ್ ನಂತರ ಭಾರತ ತಂಡದ ಮುಖ್ಯ ಕೋಚ್ ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
2 / 8
ಈ ನಡುವೆ ಬಿಸಿಸಿಐ ಇತ್ತೀಚೆಗೆ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿ ಜಾಹೀರಾತು ಪ್ರಕಟಿಸಿತ್ತು. ಇದರ ಪ್ರಕಾರ, ಜುಲೈ 1, 2024 ರಿಂದ ಹೊಸ ಕೋಚ್ ಅಧಿಕಾರ ವಹಿಸಿಕೊಳ್ಳಲಿದ್ದು, ಅವರ ಅಧಿಕಾರಾವಧಿ 2027 ರ ಅಂತ್ಯದವರೆಗೆ ಇರಲಿದೆ.
3 / 8
ಮಾಧ್ಯಮ ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ವೈಯಕ್ತಿಕ ಕಾರಣಗಳಿಂದಾಗಿ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ. ಅಲ್ಲದೆ ಟೆಸ್ಟ್ ತಂಡದ ಕೋಚ್ ಆಗಿ ಉಳಿಯುವಂತೆ ಕೆಲವು ಹಿರಿಯ ಅಧಿಕಾರಿಗಳು ದ್ರಾವಿಡ್‌ಗೆ ಮನವಿ ಮಾಡಿದ್ದರು. ಆದರೆ ದ್ರಾವಿಡ್ ಅದಕ್ಕೆ ಸಿದ್ಧರಿರಲಿಲ್ಲ ಎಂದು ವರದಿ ಹೇಳಿದೆ.
4 / 8
ರಾಹುಲ್ ದ್ರಾವಿಡ್ ನಂತರ ಟೀಂ ಇಂಡಿಯಾಕ್ಕೆ ಭಾರತದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ಆಗಬಹುದು ಎಂದು ಹೇಳಲಾಗುತ್ತಿತ್ತು. ಪ್ರಸ್ತುತ ಲಕ್ಷ್ಮಣ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಕೆಲವೊಮ್ಮೆ ದ್ರಾವಿಡ್ ಅನುಪಸ್ಥಿತಿಯಲ್ಲಿ ಭಾರತ ತಂಡದಲ್ಲಿ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ. ಆದರೆ, ವರದಿ ಪ್ರಕಾರ ಲಕ್ಷ್ಮಣ್ ಕೂಡ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ.
5 / 8
ಹೀಗಾಗಿ ಟೀಂ ಇಂಡಿಯಾಗೆ ವಿದೇಶಿ ಆಟಗಾರರು ಮುಖ್ಯ ಕೋಚ್ ಆಗಬಹುದು ಎಂದು ಹೇಳಲಾಗುತ್ತಿದೆ. ಅದರಂತೆ ಈಗ ಕೋಚ್ ಹುದ್ದೆಗೆ ನ್ಯೂಜಿಲೆಂಡ್ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಹೆಸರು ಮುಂಚೂಣಿಯಲ್ಲಿದೆ. ಫ್ಲೆಮಿಂಗ್ ಪ್ರಸ್ತುತ ಸಿಎಸ್‌ಕೆ ತಂಡದ ಮುಖ್ಯ ಕೋಚ್ ಆಗಿದ್ದು, ಅವರ ಕೋಚಿಂಗ್ನಲ್ಲಿ ತಂಡ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ.
6 / 8
ವರದಿಯ ಪ್ರಕಾರ, ಫ್ಲೆಮೆಂಗ್ ಅವರ ಸಾಮರ್ಥ್ಯವನ್ನು ಪರಿಗಣಿಸಿ, ಮಂಡಳಿಯು ಅವರನ್ನು ದ್ರಾವಿಡ್ ಅವರ ಉತ್ತರಾಧಿಕಾರಿ ಎಂದು ಪರಿಗಣಿಸುತ್ತಿದೆ ಎಂದು ಹೇಳಲಾಗಿತ್ತು. ಆದರೆ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರು ಫ್ಲೆಮಿಂಗ್ ಕೋಚ್ ಆಗುವ ಸುದ್ದಿಯನ್ನು ತಿರಸ್ಕರಿಸಿದ್ದರು. ಇದುವರೆಗೂ ನಾನು ಈ ರೀತಿ ಏನನ್ನೂ ಕೇಳಿಲ್ಲ. ಸ್ಟೀಫನ್ ಫ್ಲೆಮಿಂಗ್ ಕೂಡ ಸಿಎಸ್‌ಕೆ ಜೊತೆ ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದಿದ್ದಾರೆ.
7 / 8
ಇನ್ನು ಟೀಂ ಇಂಡಿಯಾ ಕೋಚ್ ಆಗಲು ಬಯಸುವ ಆಸಕ್ತ ಅಭ್ಯರ್ಥಿಗಳು ಮೇ 27ರ ಸಂಜೆ 6ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ತಿಳಿಸಿದೆ. ಆಯ್ಕೆ ಪ್ರಕ್ರಿಯೆಯು ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಆ ನಂತರ ಸಂದರ್ಶನ ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ.
8 / 8
ಹೊಸ ಮುಖ್ಯ ಕೋಚ್‌ನ ಅಧಿಕಾರಾವಧಿ 3.5 ವರ್ಷಗಳಾಗಿದ್ದು, ಇದು ಜುಲೈ 1, 2024 ರಿಂದ ಪ್ರಾರಂಭವಾಗಿ ಡಿಸೆಂಬರ್ 31, 2027 ರಂದು ಕೊನೆಗೊಳ್ಳುತ್ತದೆ. ಅಂದರೆ, ಹೊಸ ಮುಖ್ಯ ಕೋಚ್ ಅಡಿಯಲ್ಲಿ, ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ 2025, 2025 ಮತ್ತು 2027 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, 2026 ರ ಟಿ20 ವಿಶ್ವಕಪ್ ಮತ್ತು 2027ರ ಏಕದಿನ ವಿಶ್ವಕಪ್ ಆಡಲಿದೆ.
Published On - 9:35 pm, Thu, 16 May 24