Ranji Trophy: 49 ಬೌಂಡರಿ, 4 ಸಿಕ್ಸರ್, ದಾಖಲೆಯ 379 ರನ್ ಚಚ್ಚಿದ ಪೃಥ್ವಿ ಶಾ..!
TV9 Web | Updated By: ಪೃಥ್ವಿಶಂಕರ
Updated on:
Jan 11, 2023 | 1:16 PM
Ranji Trophy: ತಮ್ಮ ಸುದೀರ್ಘ ಇನ್ನಿಂಗ್ಸ್ನಲ್ಲಿ 383 ಎಸೆತಗಳನ್ನು ಎದುರಿಸಿದ ಪೃಥ್ವಿ, 49 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ದಾಖಲೆಯ 379 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
1 / 5
ಪ್ರಸ್ತುತ ಮುಂಬೈ ಮತ್ತು ಅಸ್ಸಾಂ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ, ಮುಂಬೈ ತಂಡದ ಸ್ಟಾರ್ ಓಪನರ್ ಪೃಥ್ವಿ ಶಾ ಸಿಡಿಲಬ್ಬರದ ತ್ರಿಶತಕ ಸಿಡಿಸಿ ಮಿಂಚಿದ್ದಾರೆ.
2 / 5
ತಮ್ಮ ಸುದೀರ್ಘ ಇನ್ನಿಂಗ್ಸ್ನಲ್ಲಿ 383 ಎಸೆತಗಳನ್ನು ಎದುರಿಸಿದ ಪೃಥ್ವಿ, 49 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ದಾಖಲೆಯ 379 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
3 / 5
ಈ ಟ್ರಿಪಲ್ ಸೆಂಚುರಿ ಗಳಿಸುವ ಮೂಲಕ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದ ಅತಿದೊಡ್ಡ ಸ್ಕೋರ್ ಮಾಡಿದ ಪೃಥ್ವಿ, ಕಳೆದ 6 ವರ್ಷಗಳಲ್ಲಿ ರಣಜಿ ಟ್ರೋಫಿಯಲ್ಲಿ ಮೊದಲ ತ್ರಿಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದಿದ್ದಾರೆ.
4 / 5
ಅಸ್ಸಾಂ ವಿರುದ್ಧ 107 ಎಸೆತಗಳಲ್ಲಿ ಶತಕ ಪೂರೈಸಿದ ಪೃಥ್ವಿ ಶಾ, ಇದಾದ ಬಳಿಕ 128 ಎಸೆತಗಳಲ್ಲಿ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರು. ಅಂದರೆ 235 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ನಂತರ ಕೇವಲ 91 ಎಸೆತಗಳಲ್ಲಿ ತ್ರಿಶತಕ ಸಿಡಿಸಿಸಿದರು. ಅಂದರೆ ಪೃಥ್ವಿ ಶಾ ಅವರ ತ್ರಿಶತಕ 326 ಎಸೆತಗಳಲ್ಲಿ ಪೂರ್ಣಗೊಂಡಿತು.
5 / 5
ಸದ್ಯ ಪಂದ್ಯದ ಎರಡನೇ ದಿನದಾಟವನ್ನು ಆಡುತ್ತಿರುವ ಮುಂಬೈ ತಂಡ ಕೇವಲ 3 ವಿಕೆಟ್ ಕಳೆದುಕೊಂಡು 598 ರನ್ ಗಳಿಸಿದೆ. ತಂಡದ ಪರ ಪೃಥ್ವಿ ಶಾ ಹೊರತುಪಡಿಸಿ ನಾಯಕ ಅಜಿಂಕ್ಯಾ ರಹಾನೆ ಕೂಡ ಅಜೇಯ ಶತಕ ಸಿಡಿಸಿದ್ದಾರೆ.
Published On - 11:54 am, Wed, 11 January 23