Ranji Trophy 2024: 6 ವರ್ಷಗಳ ನಂತರ ರಣಜಿ ಅಂಗಳಕ್ಕಿಳಿದು 8 ವಿಕೆಟ್ ಕಬಳಿಸಿದ ಭುವನೇಶ್ವರ್..!
Ranji Trophy 2024, Bhuvneshwar Kumar: 6 ವರ್ಷಗಳ ನಂತರ ಪ್ರಥಮ ದರ್ಜೆ ಪಂದ್ಯದಲ್ಲಿ ಕಾಣಿಸಿಕೊಂಡಿರುವ ಭುವನೇಶ್ವರ್ ಮೊದಲ ಇನಿಂಗ್ಸ್‌ನಲ್ಲೇ 8 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ರಣಜಿ ಟ್ರೋಫಿಯಲ್ಲಿ ಬಂಗಾಳದ ವಿರುದ್ಧ ಉತ್ತರ ಪ್ರದೇಶದ ಬೌಲರೊಬ್ಬ ನೀಡಿದ ಅತ್ಯುತ್ತಮ ಪ್ರದರ್ಶನ ಇದಾಗಿದೆ.
1 / 8
2022 ರ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದಿಂದ ಹೊರಗುಳಿದಿರುವ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾವನ್ನು ಸೇರಿಕೊಳ್ಳುವ ಗುರಿ ಹೊಂದಿರುವ ಭುವಿಗೆ ಭಾಗ್ಯದ ಬಾಗಿಲು ತೆರೆದಿದೆ.
2 / 8
ವಾಸ್ತವವಾಗಿ ಉತ್ತರ ಪ್ರದೇಶ ಹಾಗೂ ಬಂಗಾಳ ನಡುವೆ ಎರಡನೇ ರಣಜಿ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿರುವ ಭುವನೇಶ್ವರ್ ಕುಮಾರ್, ಬಂಗಾಳದ ವಿರುದ್ಧ ತನ್ನ ಮಾರಕ ಬೌಲಿಂಗ್ ಪ್ರದರ್ಶಿಸಿ ಕೇವಲ 41 ರನ್ ನೀಡಿ 8 ವಿಕೆಟ್ ಕಬಳಿಸಿದ್ದಾರೆ.
3 / 8
6 ವರ್ಷಗಳ ನಂತರ ಪ್ರಥಮ ದರ್ಜೆ ಪಂದ್ಯದಲ್ಲಿ ಕಾಣಿಸಿಕೊಂಡಿರುವ ಭುವನೇಶ್ವರ್ ಮೊದಲ ಇನಿಂಗ್ಸ್‌ನಲ್ಲೇ 8 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ರಣಜಿ ಟ್ರೋಫಿಯಲ್ಲಿ ಬಂಗಾಳದ ವಿರುದ್ಧ ಉತ್ತರ ಪ್ರದೇಶದ ಬೌಲರೊಬ್ಬ ನೀಡಿದ ಅತ್ಯುತ್ತಮ ಪ್ರದರ್ಶನ ಇದಾಗಿದೆ.
4 / 8
ಭುವನೇಶ್ವರ್ ಕುಮಾರ್ ಕಬಳಿಸಿದ 8 ವಿಕೆಟ್‌ಗಳ ಪರಿಣಾಮದಿಂದಾಗಿ ಇಡೀ ಬಂಗಾಳ ತಂಡ ಮೊದಲ ಇನಿಂಗ್ಸ್‌ನಲ್ಲಿ 58.2 ಓವರ್‌ಗಳಷ್ಟೇ ಬ್ಯಾಟಿಂಗ್ ಮಾಡಿ 188 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ಉತ್ತರ ಪ್ರದೇಶ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 60 ರನ್‌ಗಳಿಗೆ ಆಲೌಟ್ ಆಗಿತ್ತು.
5 / 8
ಆದರೆ ಬೌಲಿಂಗ್ನ ತಂಡದ ಬೆನ್ನೆಲುಬಾದ ಭುವನೇಶ್ವರ್ ಅವರ ಮಾರಕ ಬೌಲಿಂಗ್‌ನಿಂದಾಗಿ ಬಂಗಾಳ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 128 ರನ್‌ಗಳ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭುವನೇಶ್ವರ್ ಹೊರತಾಗಿ ಯಶ್ ದಯಾಳ್ 2 ವಿಕೆಟ್ ಪಡೆದರು.
6 / 8
ಬಂಗಾಳ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ಭುವನೇಶ್ವರ್ 22 ಓವರ್ ಬೌಲ್ ಮಾಡಿ 41 ರನ್ ನೀಡಿ 8 ವಿಕೆಟ್ ಪಡೆದರು. ಅಲ್ಲದೆ ಅವರ ಸ್ಪೆಲ್‌ನಲ್ಲಿ 5 ಮೇಡನ್ ಓವರ್‌ಗಳನ್ನು ಬೌಲ್ ಮಾಡಿದರು.
7 / 8
ಮೊದಲ ಇನ್ನಿಂಗ್ಸ್‌ನಲ್ಲಿ ಭುವಿ ಬೌಲಿಂಗ್ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಬಂಗಾಳದ ಮೊದಲ 6 ವಿಕೆಟ್‌ಗಳು ಭುವಿ ದಾಳಿಗೆ ಉರುಳಿ ಹೋದವು. ಇದಕ್ಕೂ ಮೊದಲು, ಪ್ರಥಮ ದರ್ಜೆ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಅಂಕಿ ಅಂಶವೆಂದರೆ 77 ರನ್ ನೀಡಿ 6 ವಿಕೆಟ್ ಉರುಳಿಸಿದ್ದಾಗಿತ್ತು.
8 / 8
ಇನ್ನು 2018 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಪರ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ಭುವಿ ಜೋಹಾನ್ಸ್‌ಬರ್ಗ್ ನಡೆದ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ 4 ವಿಕೆಟ್ ಪಡೆದಿದ್ದರು. ಇದಲ್ಲದೇ ಎರಡೂ ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ನಲ್ಲಿ 30 ಮತ್ತು 33 ರನ್ ಕಲೆಹಾಕಿದ್ದರು. ಈ ಮೂಲಕ ಪಂದ್ಯದ ಆಟಗಾರ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.