ಕೆಲವೇ ದಿನಗಳ ಅಂತರದಲ್ಲಿ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಭಾರತದ ಐವರು ಕ್ರಿಕೆಟಿಗರು..!

|

Updated on: Feb 19, 2024 | 10:53 PM

Ranji Trophy 2024: ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಇದುವರೆಗೆ 5 ಆಟಗಾರರು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರಲ್ಲಿ ಬಂಗಾಳದ ದಿಗ್ಗಜ ಮನೋಜ್ ತಿವಾರಿ, ಜಾರ್ಖಂಡ್ ಬ್ಯಾಟ್ಸ್‌ಮನ್ ಸೌರಭ್ ತಿವಾರಿ ಮತ್ತು ವೇಗದ ಬೌಲರ್ ವರುಣ್ ಆರೋನ್, ಮುಂಬೈನ ಧವಳ್ ಕುಲಕರ್ಣಿ ಮತ್ತು ವಿದರ್ಭದ ರಣಜಿ ಟ್ರೋಫಿ ವಿಜೇತ ನಾಯಕ ಫೈಜ್ ಫಜಲ್ ಸೇರಿದ್ದಾರೆ.

1 / 8
ಒಂದೆಡೆ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದ್ದರೆ, ಇನ್ನೊಂದೆಡೆ ದೇಶೀ ಟೂರ್ನಿ ರಣಜಿ ಕ್ರಿಕೆಟ್​ ಸೀಸನ್ ನಡೆಯುತ್ತಿದೆ. ಇದರಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಸ್ಟಾರ್ ಕ್ರಿಕೆಟಿಗರು ತಮ್ಮ ತಮ್ಮ ರಾಜ್ಯ ತಂಡಗಳ ಪರ ಕಣಕ್ಕಿಳಿಯುತ್ತಿದ್ದಾರೆ.

2 / 8
ಆದರೆ ಕೆಲವು ಸ್ಟಾರ್ ಕ್ರಿಕೆಟಿಗರಿಗೆ ಇದೇ ಕೊನೆಯ ಸೀಸನ್ ಆಗಿದೆ. ರಣಜಿ ಟ್ರೋಫಿಯಲ್ಲಿ ಇದುವರೆಗೆ 5 ಆಟಗಾರರು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರೆಲ್ಲರೂ ಭಾರತ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

3 / 8
ರಣಜಿ ಟ್ರೋಫಿ ಲೀಗ್ ಹಂತದ ಅಂತ್ಯದೊಂದಿಗೆ ನಿವೃತ್ತಿ ಘೋಷಿಸಿದ ಐವರು ಆಟಗಾರರಲ್ಲಿ ಬಂಗಾಳದ ದಿಗ್ಗಜ ಮನೋಜ್ ತಿವಾರಿ, ಜಾರ್ಖಂಡ್ ಬ್ಯಾಟ್ಸ್‌ಮನ್ ಸೌರಭ್ ತಿವಾರಿ ಮತ್ತು ವೇಗದ ಬೌಲರ್ ವರುಣ್ ಆರೋನ್, ಮುಂಬೈನ ಧವಳ್ ಕುಲಕರ್ಣಿ ಮತ್ತು ವಿದರ್ಭದ ರಣಜಿ ಟ್ರೋಫಿ ವಿಜೇತ ನಾಯಕ ಫೈಜ್ ಫಜಲ್ ಸೇರಿದ್ದಾರೆ.

4 / 8
ಬಂಗಾಳದ ಮನೋಜ್ ತಿವಾರಿ ಬಿಹಾರ ವಿರುದ್ಧ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ನಂತರ ವೃತ್ತಿ ಬದುಕಿಗೆ ವಿದಾಯ ಹೇಳಿದರು. 38 ವರ್ಷದ ಮನೋಜ್ ಅವರು 19 ವರ್ಷಗಳ ಕಾಲ ತಮ್ಮ ರಾಜ್ಯಕ್ಕಾಗಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10000ಕ್ಕೂ ಹೆಚ್ಚು ರನ್‌ ಕಲೆಹಾಕಿರುವ ಮನೋಜ್ ಕಳೆದ ಸೀಸನ್​ನಲ್ಲಿ ಬಂಗಾಳವನ್ನು ರಣಜಿ ಟ್ರೋಫಿ ಫೈನಲ್‌ಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

5 / 8
17 ವರ್ಷಗಳಿಂದ ಜಾರ್ಖಂಡ್ ತಂಡದಲ್ಲಿ ಆಡಿದ್ದ ಸೌರಭ್ ತಿವಾರಿ, 115 ಪ್ರಥಮ ದರ್ಜೆ ಪಂದ್ಯಗಳಲ್ಲಿ 8030 ರನ್ ಗಳಿಸಿದ್ದಾರೆ, ಇದರಲ್ಲಿ 22 ಶತಕಗಳು ಮತ್ತು 34 ಅರ್ಧ ಶತಕಗಳು ಸೇರಿವೆ. ತಮ್ಮ ನಿವೃತ್ತಿಯ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದ ಸೌರಭ್, ರಾಷ್ಟ್ರೀಯ ತಂಡ ಅಥವಾ ಐಪಿಎಲ್‌ನಲ್ಲಿ ಅವಕಾಶ ಸಿಗದಿದ್ದ ಮೇಲೆ ಯುವ ಆಟಗಾರರಿಗೆ ಅವಕಾಶ ಮಾಡಿಕೊಡಲು ಇದು ಸರಿಯಾದ ಸಮಯ ಎಂದು ನಾನು ನಂಬುತ್ತೇನೆ ಎಂದಿದ್ದರು.

6 / 8
ಒಂದು ಕಾಲದಲ್ಲಿ ಟೀಂ ಇಂಡಿಯಾದ ವೇಗದ ಬೌಲಿಂಗ್ ವಿಭಾಗದಲ್ಲಿ ಗುರುತಿಸಿಕೊಂಡಿದ್ದ ವರುಣ್ ಆರೋನ್ ತಮ್ಮ ವೃತ್ತಿಜೀವನದಲ್ಲಿ ಗಾಯಗಳಿಂದಾಗಿ ಹೆಚ್ಚಿನ ಸಮಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ವರುಣ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 66 ಪಂದ್ಯಗಳನ್ನು ಆಡಿದ್ದು, 173 ವಿಕೆಟ್‌ಗಳನ್ನು ಪಡೆದಿದ್ದಾರೆ.

7 / 8
ವಿದರ್ಭ ತಂಡಕ್ಕಾಗಿ 21 ವರ್ಷಗಳ ಕಾಲ ಆಡಿದ್ದ ಫೈಜ್ ಫಜಲ್ ಅವರ ನಾಯಕತ್ವದಲ್ಲಿ 2018 ರಲ್ಲಿ ತಂಡವನ್ನು ರಣಜಿ ಟ್ರೋಫಿ ಚಾಂಪಿಯನ್ ಮಾಡಿದ್ದರು. ಫೈಜ್ ಫಜಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9183 ರನ್ ಗಳಿಸಿದ್ದಾರೆ.

8 / 8
ಟೀಂ ಇಂಡಿಯಾ ಹಾಗೂ ಐಪಿಎಲ್ ಎರಡರಲ್ಲೂ ತಮ್ಮ ಸ್ವಿಂಗ್ ಬೌಲಿಂಗ್ ಕೌಶಲವನ್ನು ತೋರಿದ್ದ 35 ವರ್ಷದ ಧವಳ್ ಕುಲಕರ್ಣಿ ಇದೀಗ 17 ವರ್ಷಗಳ ದೇಶೀಯ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಧವಳ್ 95 ಪ್ರಥಮ ದರ್ಜೆ ಪಂದ್ಯಗಳಲ್ಲಿ 281 ವಿಕೆಟ್ ಪಡೆದಿದ್ದಾರೆ.

Published On - 10:50 pm, Mon, 19 February 24