Ranji Trophy: ಒಂದೇ ಇನಿಂಗ್ಸ್​ನಲ್ಲಿ 9 ವಿಕೆಟ್: ದಾಖಲೆ ಬರೆದ ಜಲಜ್ ಸಕ್ಸೇನಾ

Edited By:

Updated on: Feb 11, 2024 | 2:08 PM

Ranji Trophy: ರಣಜಿ ಟ್ರೋಫಿ ಇತಿಹಾಸದಲ್ಲಿ ಇಬ್ಬರು ಬೌಲರ್​ಗಳು ಮಾತ್ರ ಒಂದೇ ಇನಿಂಗ್ಸ್​ನ 10 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದೀಗ 9 ವಿಕೆಟ್​ಗಳನ್ನು ಉರುಳಿಸುವ ಮೂಲಕ ಜಲಜ್ ಸಕ್ಸೇನಾ ಕೂಡ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಆ ದಾಖಲೆ ಯಾವುದು? 10 ವಿಕೆಟ್​ಗಳನ್ನು ಕಬಳಿಸಿದ ಬೌಲರ್​ಗಳು ಯಾರು ಎಂಬುದರ ಮಾಹಿತಿ ಈ ಕೆಳಗಿದೆ.

1 / 8
ತಿರುವನಂತಪುರಂನಲ್ಲಿ ನಡೆಯುತ್ತಿರುವ ಬೆಂಗಾಳ್ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್​ ಕಬಳಿಸುವ ಮೂಲಕ ಜಲಜ್ ಸಕ್ಸೇನಾ ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೇರಳ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 363 ರನ್ ಕಲೆಹಾಕಿತು.

ತಿರುವನಂತಪುರಂನಲ್ಲಿ ನಡೆಯುತ್ತಿರುವ ಬೆಂಗಾಳ್ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್​ ಕಬಳಿಸುವ ಮೂಲಕ ಜಲಜ್ ಸಕ್ಸೇನಾ ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೇರಳ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 363 ರನ್ ಕಲೆಹಾಕಿತು.

2 / 8

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್​ ಶುರು ಮಾಡಿದ ಬೆಂಗಾಳ್ ತಂಡದ ಮೊದಲ ವಿಕೆಟ್​ ಅನ್ನು ನಿದೇಶ್ ಪಡೆದರು. ಆದರೆ ಉಳಿದ 9 ವಿಕೆಟ್​ಗಳನ್ನು ಕಬಳಿಸುವ ಮೂಲಕ ಜಲಜ್​ ಸಕ್ಸೇನಾ ಬೆಂಗಾಳ್ ಪಾಲಿಗೆ ದುಸ್ವಪ್ನವಾದರು.

3 / 8

ಸ್ಪಿನ್ ಮೋಡಿ ಮಾಡಿದ ಜಲಜ್ ಸಕ್ಸೇನಾ ಮೊದಲು ಅಭಿಮನ್ಯು ಈಶ್ವರನ್ (72) ಅವರನ್ನು ಔಟ್ ಮಾಡಿದರು. ಇದಾದ ಬಳಿಕ ಹಿಂತಿರುಗಿ ನೋಡಿಲ್ಲ ಎಂದೇ ಹೇಳಬಹುದು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಾ ಸಾಗಿದ ಜಲಜ್ ಬೆಂಗಾಳ್ ತಂಡವನ್ನು 180 ರನ್​ಗಳಿಗೆ ಆಲೌಟ್ ಮಾಡಿದರು.

4 / 8

ಈ ಇನಿಂಗ್ಸ್​ನಲ್ಲಿ ಒಟ್ಟು 21.1 ಓವರ್​ಗಳನ್ನು ಎಸೆದಿದ್ದ ಜಲಜ್ ಕೇವಲ 68 ರನ್ ನೀಡುವ ಮೂಲಕ 9 ವಿಕೆಟ್ ಕಬಳಿಸಿದರು. ಈ ಮೂಲಕ ಕೇರಳ ಪರ ರಣಜಿ ಕ್ರಿಕೆಟ್​ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ 2ನೇ ಬೌಲರ್ ಎಂಬ ದಾಖಲೆಯನ್ನು ಬರೆದರು.

5 / 8

ಕೇರಳ ಪರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ದಾಖಲೆ ಅಮರ್ಜಿತ್ ಸಿಂಗ್ ಹೆಸರಿನಲ್ಲಿದೆ. 1972 ರಲ್ಲಿ ಆಂಧ್ರಪ್ರದೇಶ ವಿರುದ್ಧ 45 ರನ್ ನೀಡಿ 9 ವಿಕೆಟ್ ಕಬಳಿಸಿ ಅಮರ್ಜಿತ್ ಈ ದಾಖಲೆ ಬರೆದಿದ್ದರು. ಇದೀಗ 68 ರನ್​ಗಳಿಗೆ 9 ವಿಕೆಟ್ ಕಬಳಿಸುವ ಮೂಲಕ ಜಲಜ್ ಸಕ್ಸೇನಾ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

6 / 8

ಇನ್ನು ರಣಜಿ ಕ್ರಿಕೆಟ್​ನ ಅತ್ಯುತ್ತಮ ಬೌಲಿಂಗ್ ದಾಖಲೆ ಇರುವುದು ಪ್ರೇಮಾಂಗ್ಸು ಚಟರ್ಜಿ ಅವರ ಹೆಸರಿನಲ್ಲಿ. 1957 ರಲ್ಲಿ ಬೆಂಗಾಳ್ ಪರ ಕಣಕ್ಕಿಳಿದಿದ್ದ ಪ್ರೇಮಾಂಗ್ಸು, ಅಸ್ಸಾಂ ವಿರುದ್ಧ ಕೇವಲ 20 ರನ್ ನೀಡಿ 10 ವಿಕೆಟ್​ಗಳನ್ನು ಕಬಳಿಸಿದ್ದರು. ಈ ಮೂಲಕ ದೇಶೀಯ ಕ್ರಿಕೆಟ್​ನಲ್ಲಿ 10 ವಿಕೆಟ್​ಗಳನ್ನು ಕಬಳಿಸಿದ ಮೊದಲ ಬೌಲರ್ ಎಂಬ ದಾಖಲೆ ಬರೆದಿದ್ದರು.

7 / 8

ಇದಾದ ಬಳಿಕ 1986 ರಲ್ಲಿ ರಾಜಸ್ಥಾನ್ ಆಟಗಾರ ಪ್ರದೀಪ್ ಸುಂದರಂ ವಿದರ್ಭ ವಿರುದ್ಧದ ಪಂದ್ಯದಲ್ಲಿ 78 ರನ್ ನೀಡಿ 10 ವಿಕೆಟ್ ಪಡೆದಿದ್ದರು. ಈ ಮೂಲಕ ರಣಜಿ ಕ್ರಿಕೆಟ್​ ಇನಿಂಗ್ಸ್​ನಲ್ಲಿ ಎಲ್ಲಾ ಹತ್ತು ಬ್ಯಾಟರ್​ಗಳನ್ನು ಔಟ್ ಮಾಡಿದ 2ನೇ ಬೌಲರ್ ಎನಿಸಿಕೊಂಡಿದ್ದರು.

8 / 8

ಇದೀಗ 68 ರನ್​ಗಳಿಗೆ 9 ವಿಕೆಟ್ ಕಬಳಿಸುವ ಮೂಲಕ ಜಲಜ್ ಸಕ್ಸೇನಾ ರಣಜಿ ಟೂರ್ನಿಯ ಇನಿಂಗ್ಸ್​ವೊಂದರಲ್ಲಿ ಒಂಭತ್ತು ಬ್ಯಾಟರ್​ಗಳನ್ನು ಔಟ್ ಮಾಡಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

Loading...
Unable to load recommendations.
Follow Us