Ranji Trophy: ಮುಂಬೈ ತಂಡದಲ್ಲಿ ಸಹೋದರರ ಸವಾಲ್..!

| Updated By: ಝಾಹಿರ್ ಯೂಸುಫ್

Updated on: Dec 28, 2022 | 4:09 PM

Sarfaraz Khan And Musheer Khan: ಮುಂಬೈ ರಣಜಿ ತಂಡದ ಸ್ಟಾರ್ ಬ್ಯಾಟ್ಸ್​​ಮನ್​ ಆಗಿ ಗುರುತಿಸಿಕೊಂಡಿರುವ ಸರ್ಫರಾಜ್ ಅವರ ಸಹೋದರ ಮುಶೀರ್ ಖಾನ್ ಯುವ ಆಲ್​ರೌಂಡರ್.

1 / 5
ಟೀಮ್ ಇಂಡಿಯಾದಲ್ಲಿ ಸಹೋದರರು ಜೊತೆಯಾಗಿ ಕಾಣಿಸಿಕೊಂಡಿದ್ದು ತುಂಬಾ ವಿರಳ. ಈ ಹಿಂದೆ ಮೊಹಿಂದರ್ ಅಮರನಾಥ್-ಸುರಿಂದರ್ ಅಮರನಾಥ್, ಇರ್ಫಾನ್ ಪಠಾಣ್-ಯೂಸುಫ್ ಪಠಾಣ್ ಜೊತೆಯಾಗಿ ಆಡಿದ್ದರೆ, ಆ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಕಾಣಿಸಿಕೊಂಡಿದ್ದರು. ಇದಾಗ್ಯೂ ಇತ್ತೀಚಿನ ದಿನಗಳಲ್ಲಿ ಭಾರತದ ಪರ ಅಣ್ಣ-ತಮ್ಮ ಜೊತೆಯಾಗಿ ಆಡಿದ ನಿದರ್ಶನವಿಲ್ಲ. ಆದರೆ ಇದೀಗ ದೇಶೀಯ ಅಂಗಳದಲ್ಲಿ ಸಹೋದರರು ಜೊತೆಯಾಗಿ ಕಣಕ್ಕಿಳಿದಿದ್ದಾರೆ. ಅದು ಕೂಡ ಬಲಿಷ್ಠ ಮುಂಬೈ ತಂಡದಲ್ಲಿ ಎಂಬುದು ವಿಶೇಷ.

2 / 5
ಹೌದು, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಮುಶೀರ್ ಖಾನ್ ಪದಾರ್ಪಣೆ ಮಾಡಿದ್ದಾರೆ. ತಮ್ಮ ಚೊಚ್ಚಲ ಪಂದ್ಯಕ್ಕಾಗಿ ಅಣ್ಣ ಸರ್ಫರಾಜ್ ಖಾನ್ ಅವರಿಂದಲೇ ಕ್ಯಾಪ್ ಪಡೆದಿದ್ದು ವಿಶೇಷ.

3 / 5
ಮುಂಬೈ ರಣಜಿ ತಂಡದ ಸ್ಟಾರ್ ಬ್ಯಾಟ್ಸ್​​ಮನ್​ ಆಗಿ ಗುರುತಿಸಿಕೊಂಡಿರುವ ಸರ್ಫರಾಜ್ ಅವರ ಸಹೋದರ ಮುಶೀರ್ ಖಾನ್ ಯುವ ಆಲ್​ರೌಂಡರ್. ಇದಾಗ್ಯೂ ಮೊದಲ ಇನಿಂಗ್ಸ್​ನಲ್ಲಿ 17 ವರ್ಷದ ಯುವ ಆಲ್​ರೌಂಡರ್​ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.

4 / 5
ತಮ್ಮ ಮೊದಲ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿರುವ ಮುಶೀರ್ ಖಾನ್ ಕಲೆಹಾಕಿದ್ದು ಕೇವಲ 12 ರನ್​ ಮಾತ್ರ. ಇನ್ನು ಬೌಲಿಂಗ್​ನಲ್ಲಿ 5 ಓವರ್​ ಮಾಡಿದ್ದರೂ ಯಾವುದೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಇದಾಗ್ಯೂ ಯುವ ಆಟಗಾರನಿಂದ 2ನೇ ಇನಿಂಗ್ಸ್​ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ.

5 / 5
2021-22ರ ರಣಜಿ ಟೂರ್ನಿಯ 9 ಇನಿಂಗ್ಸ್​ಗಳಲ್ಲಿ 4 ಶತಕ ಹಾಗೂ 2 ಅರ್ಧಶತಕದೊಂದಿಗೆ  982 ರನ್​ ಬಾರಿಸಿರುವ ಸರ್ಫರಾಜ್ ಖಾನ್ ಸದ್ಯ ಭಾರತ ಟೆಸ್ಟ್ ತಂಡದಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ 17 ವರ್ಷದ ತಮ್ಮ ಮುಶೀರ್ ಖಾನ್ ಕೂಡ ಆಲ್​ರೌಂಡರ್​ ಆಗಿ ಮುಂಬೈ ಪ್ಲೇಯಿಂಗ್ 11 ನಲ್ಲಿ ಅವಕಾಶ ಪಡೆದಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ  ಸಹೋದರರು ಟೀಮ್ ಇಂಡಿಯಾದಲ್ಲಿ ಜೊತೆಯಾಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.