Ravindra Jadeja: ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಇತಿಹಾಸ ಸೃಷ್ಟಿಸಿದ ರವೀಂದ್ರ ಜಡೇಜಾ: ನಂ. 1 ಆಲ್ರೌಂಡರ್​ನಿಂದ ವಿಶೇಷ ದಾಖಲೆ

|

Updated on: Jun 10, 2023 | 8:57 AM

WTC Final, IND vs AUS: ಎರಡು ವಿಕೆಟ್ ಪಡೆಯುವ ಮೂಲಕ ಜಡೇಜಾ ನೂತನ ದಾಖಲೆ ಸೃಷ್ಟಿಸಿದ್ದಾರೆ. ಲೆಫ್ಟ್ ಆರ್ಮ ಸ್ಪಿನ್ನರ್ ಆಗಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಏಕೈಕ ಆಟಗಾರ ಜಡೇಜಾ ಆಗಿದ್ದಾರೆ.

1 / 7
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವದ ನಂಬರ್ ಒನ್ ಆಲ್ರೌಂಡರ್ ಟೀಮ್ ಇಂಡಿಯಾದ ರವೀಂದ್ರ ಜಡೇಜಾ ಇತಿಹಾಸ ಸೃಷ್ಟಿಸಿದ್ದಾರೆ. ದಿಗ್ಗಜ ಆಟಗಾರ ಬಿಷನ್ ಸಿಂಗ್ ಬೇಡಿ ಅವರ ದಾಖಲೆಯನ್ನು ಪುಡಿಗಟ್ಟಿದ್ದಾರೆ.

2 / 7
51 ಎಸೆತಗಳಲ್ಲಿ 7 ಫೋರ್ ಮತ್ತು ಒಂದು ಸಿಕ್ಸರ್ ಸಿಡಿಸಿ 48 ರನ್ ಬಾರಿಸಿ ಬ್ಯಾಟಿಂಗ್​ನಲ್ಲಿ ತಂಡಕ್ಕೆ ಆಸರೆಯಾಗಿದ್ದ ಜಡೇಜಾ ಬೌಲಿಂಗ್​ನಲ್ಲಿ ಕೂಡ ನೆರವಾದರು. ಮೂರನೇ ದಿನ ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್​ರಂತಹ ಅಪಾಯಕಾರಿ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಅಟ್ಟಿದರು.

3 / 7
ಎರಡು ವಿಕೆಟ್ ಪಡೆಯುವ ಮೂಲಕ ಜಡೇಜಾ ನೂತನ ದಾಖಲೆ ಸೃಷ್ಟಿಸಿದ್ದಾರೆ. ಲೆಫ್ಟ್ ಆರ್ಮ ಸ್ಪಿನ್ನರ್ ಆಗಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಏಕೈಕ ಆಟಗಾರ ಜಡೇಜಾ ಆಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಬಿಷಪ್ ಹೆಸರಲ್ಲಿತ್ತು. ಸದ್ಯ ಜಡೇಜಾ 65 ಟೆಸ್ಟ್​ನಲ್ಲಿ 267 ವಿಕೆಟ್ ಪಡೆಯುವ ಮೂಲಕ ಈ ದಾಖಲೆ ಮುರಿದಿದ್ದಾರೆ.

4 / 7
ಒಟ್ಟಾರೆಯಾಗಿ ಜಡೇಜಾ 4ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ರಂಗನ ಹೆರತ್ (433 ವಿಕೆಟ್), ನ್ಯೂಜಿಲೆಂಡ್​ನ ಡೆನಿಯಲ್ ವೆಟೋರಿ (362) ದ್ವಿತೀಯ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್​ನ ಡೆರಕ್ ಅಂಡರ್​ವುಡ್ (297) ಇದ್ದಾರೆ.

5 / 7
ಇದರ ಜೊತೆಗೆ ಜಡೇಜಾ ಅವರು ಸ್ಮಿತ್ ಅವರನ್ನು 8 ಬಾರಿ ಔಟ್ ಮಾಡಿ ರವಿಚಂದ್ರನ್ ಅಶ್ವಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

6 / 7
ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ರೋಚಕ ಘಟ್ಟದತ್ತ ತಲುಪುತ್ತಿದೆ. ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ 469 ಆಲೌಟ್ ಮಾಡಿ ತನ್ನ ಪ್ರಥಮ ಇನ್ನಿಂಗ್ಸ್ ಆಡಿದ ಭಾರತ ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಆಟದ ನೆರವಿನಿಂದ 296 ರನ್ ಗಳಿಸಿತು.

7 / 7
173 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಕಾಂಗರೂ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ. 296 ರನ್​ಗಳ ಮುನ್ನಡೆಯಲ್ಲಿದೆ. ನಾಲ್ಕನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದ್ದು ಭಾರತ ಆದಷ್ಟು ಬೇಗ ಆಸೀಸ್ ವಿಕೆಟ್ ಕೀಳಬೇಕಿದೆ.