Glenn Maxwell: ಐಪಿಎಲ್ ಮಿನಿ ಹರಾಜಿಗೂ ಮುನ್ನ ಆರ್​ಸಿಬಿ ತಂಡಕ್ಕೆ ಸಿಕ್ತು ಬಂಪರ್ ಸುದ್ದಿ: ಏನದು ನೋಡಿ

| Updated By: Vinay Bhat

Updated on: Nov 17, 2022 | 10:17 AM

RCB, IPL 2023: ಐಪಿಎಲ್ 2023 ಹರಾಜಿಗೂ ಮುನ್ನ ಆರ್​ಸಿಬಿ ತಂಡಕ್ಕೆ ಶುಭಸುದ್ದಿಯೊಂದು ಸಿಕ್ಕಿದೆ. ಗಾಯಕ್ಕೆ ತುತ್ತಾಗಿರುವ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್​ವೆಲ್ ಐಪಿಎಲ್ ಆರಂಭ ಆಗುವ ಮುನ್ನವೇ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

1 / 8
ಇಂಡಿಯನ್ ಪ್ರೀಮಿಯರ್ ಲೀಗ್ 2023 ಮಿನಿ ಹರಾಜು ಪ್ರಕ್ರಿಯೆ ಮುಂದಿನ ತಿಂಗಳು ಡಿಸೆಂಬರ್ 23 ರಂದು ಕೇರಳದ ಕೊಚ್ಚಿಯಲ್ಲಿ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಈಗಾಗಲೇ ಎಲ್ಲ 10 ಫ್ರಾಂಚೈಸಿಗಳು ತಮಗೆ ಅಗತ್ಯವಿಲ್ಲದ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ 5 ಆಟಗಾರರನ್ನು ರಿಲೀಸ್ ಮಾಡಿದೆ.

2 / 8
ಇದರ ಬೆನ್ನಲ್ಲೇ ಆರ್​ಸಿಬಿ ತಂಡಕ್ಕೆ ಶುಭಸುದ್ದಿಯೊಂದು ಸಿಕ್ಕಿದೆ. ಗಾಯಕ್ಕೆ ತುತ್ತಾಗಿ ರಾಷ್ಟ್ರೀಯ ತಂಡದಿಂದ ಹೊರಬಿದ್ದಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್, ಆರ್​ಸಿಬಿ ತಂಡದ ಪ್ಲೇಯರ್ ಗ್ಲೆನ್ ಮ್ಯಾಕ್ಸ್​ವೆಲ್ ಐಪಿಎಲ್ ಆರಂಭ ಆಗುವ ಮುನ್ನವೇ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

3 / 8
ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿ ಕಾಲು ಮುರಿದುಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಸುಮಾರು ಆರು ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕು ಎಂದು ಹೇಳಲಾಗಿದೆ. ಮ್ಯಾಕ್ಸಿ ಅವರ ಫೈಬುಲಾ ಮುರಿದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಗಾಯ ದೊಡ್ಡ ಮಟ್ಟದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಇವರು ಐಪಿಎಲ್​ನಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು.

4 / 8
ಆದರೀಗ ಆರ್‌ಸಿಬಿ ತಂಡದ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸ್ಸನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ಆವೃತ್ತಿಯ ಐಪಿಎಲ್ ಲೀಗ್‌ನ ಮೊದಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

5 / 8
“ಗ್ಲೆನ್ ಮ್ಯಾಕ್ಸ್‌ವೆಲ್ ಬಗ್ಗೆ ಅಪಾರ ಕಾಳಜಿ ಇದೆ. ಅವರು ಕಾಲು ನೋವಿನಿಂದ ಶೀಘ್ರ ಗುಣಮುಖರಾಗಲಿ ಎಂದು ನಾನು ಹಾರೈಸುತ್ತೇವೆ. ಮ್ಯಾಕ್ಸ್​ವೆಲ್ ಐಪಿಎಲ್‌ 2023 ಆರಂಭ ಆಗುವ ಮೊದಲು ಹಿಂತಿರುಗುತ್ತಾರೆ ಎಂಬ ಮಾಹಿತಿ ನಮಗೆ ಇದೆ'' - ಮೈಕ್ ಹೆಸ್ಸನ್.

6 / 8
ಗ್ಲೆನ್ ಮ್ಯಾಕ್ಸ್​ವೆಲ್ ಸದ್ಯ ಕಳಪೆ ಫಾರ್ಮ್​ನಿಂದ ತತ್ತರಿಸಿದ್ದಾರೆ. 19 ಪಂದ್ಯಗಳಲ್ಲಿ ಕೇವಲ 19.68 ಸರಾಸರಿಯಲ್ಲಿ 315 ರನ್ ಗಳಿಸಿದ್ದಾರಷ್ಟೆ. ಅವರ ಗರಿಷ್ಠ ಸ್ಕೋರ್ 50 ಆಗಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲೂ ಮ್ಯಾಕ್ಸಿ ಕಡೆಯಿಂದ ನಿರೀಕ್ಷೆಗೆ ತಕ್ಕಂತೆ ಆಡಬಂದಿಲ್ಲ. 161.64 ಸ್ಟ್ರೈಕ್ ರೇಟ್ ಮತ್ತು ಒಂದು ಅರ್ಧಶತಕದೊಂದಿಗೆ 39.33 ರ ಸರಾಸರಿಯಲ್ಲಿ 118 ರನ್ ಗಳನ್ನು ಗಳಿಸಿ ಮೂರು ವಿಕೆಟ್ ಪಡೆದಿದ್ದರಷ್ಟೆ.

7 / 8
ಮ್ಯಾಕ್ಸ್​ವೆಲ್ ಅವರು ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಿಂದ ಸಂಪೂರ್ಣ ಹೊರಗುಳಿದಿದ್ದಾರೆ. 2022-23ರ ಸಾಲಿನ ಬಿಗ್‌ ಬ್ಯಾಷ್‌ ಲೀಗ್‌ ಟೂರ್ನಿಯಿಂದಲೂ ಹಿಂದೆ ಸರಿದಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್‌, ಡೇವಿಡ್‌ ವಿಲ್ಲೀ ಹಾಗೂ ವನಿಂದು ಹಸರಂಗ ಸೇರಿ ಮೂವರು ವಿದೇಶಿ ಆಟಗಾರರನ್ನು ಬೆಂಗಳೂರು ಫ್ರಾಂಚೈಸಿ ಉಳಿಸಿಕೊಂಡಿದೆ.

8 / 8
ಮಿನಿ ಹರಾಜಿಗೂ ಮುನ್ನ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಳಿ 8.75 ಕೋಟಿ ರೂಪಾಯಿ ಇದೆ. ತಂಡದಲ್ಲಿರುವ ಆಟಗಾರರು ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹೇಜಲ್‌ವುಡ್ ಅವರನ್ನೊಳಗೊಂಡ ಬಲಿಷ್ಠ ತಂಡವನ್ನು ಉಳಿಸಿಕೊಳ್ಳಲಾಗಿದೆ.

Published On - 10:17 am, Thu, 17 November 22