Andy Flower RCB Coach: ಆರ್ಸಿಬಿ ಹೊಸ ಅಧ್ಯಾಯ: ಮಾಜಿ ಜಿಂಬಾಬ್ವೆ ಆಟಗಾರ ಆ್ಯಂಡಿ ಫ್ಲವರ್ ಆರ್ಸಿಬಿಯ ಹೆಡ್ ಕೋಚ್
RCB New Coach: ಆರ್ಸಿಬಿ ಫ್ರಾಂಚೈಸಿ ನೂತನ ಕೋಚ್ನ ಹುಡುಕಾಟದಲ್ಲಿತ್ತು. ಇದೀಗ ಬೆಂಗಳೂರು ಫ್ರಾಂಚೈಸಿಗೆ ಹೊಸ ಕೋಚ್ ಒಬ್ಬರು ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ಜಿಂಬಾಬ್ವೆ ತಂಡದ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಆರ್ಸಿಬಿಯ ನೂತನ ಕೋಚ್ ಎಂದು ಕ್ರಿಕ್ ಬುಜ್ ವರದಿ ಮಾಡಿದೆ.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಗೆ ಕೆಲ ತಂಡಗಳು ಈಗಾಗಲೇ ತಯಾರಿ ಆರಂಭಿಸಿದೆ. ಐಪಿಎಲ್ 2023 ಕ್ಕೆ ನಡೆದ ಮೆಗಾ ಹರಾಜು ಕೆಲ ಫ್ರಾಂಚೈಸಿಗೆ ಉಪಯೋಗ ಆಗಲಿಲ್ಲ. ಹೀಗಾಗಿ ಮೇಜರ್ ಸರ್ಜರಿಗೆ ಮುಂದಾಗಿದೆ.
2 / 7
ಇತ್ತೀಚೆಗಷ್ಟೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಐಪಿಎಲ್ 2024 ಕ್ಕೂ ಮುನ್ನ ಮಹತ್ವದ ನಿರ್ಧಾರವೊಂದು ತೆಗೆದುಕೊಂಡಿತು. ಆರ್ಸಿಬಿಯ ಮುಖ್ಯ ಕೋಚ್ ಸಂಜಯ್ ಬಂಗಾರ್ ಹಾಗೂ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಅವರನ್ನು ಕೈಬಿಟ್ಟು ಶಾಕ್ ನೀಡಿತ್ತು.
3 / 7
ಇದಾದ ಬಳಿಕ ಆರ್ಸಿಬಿ ಫ್ರಾಂಚೈಸಿ ನೂತನ ಕೋಚ್ನ ಹುಡುಕಾಟದಲ್ಲಿತ್ತು. ಇದೀಗ ಬೆಂಗಳೂರು ಫ್ರಾಂಚೈಸಿಗೆ ಹೊಸ ಕೋಚ್ ಒಬ್ಬರು ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ಜಿಂಬಾಬ್ವೆ ತಂಡದ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಆರ್ಸಿಬಿಯ ನೂತನ ಕೋಚ್ ಎಂದು ಕ್ರಿಕ್ ಬುಜ್ ವರದಿ ಮಾಡಿದೆ.
4 / 7
ಈ ಬಗ್ಗೆ ಆರ್ಸಿಬಿ ಫ್ರಾಂಚೈಸಿ ಇನ್ನಷ್ಟೆ ಖಚಿತ ಮಾಹಿತಿ ತಿಳಿಸಬೇಕಿದೆ. ಆದರೆ, ಆರ್ಸಿಬಿ ಫ್ರಾಂಚೈಸಿಯ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ ಎಬಿ ಡಿವಿಲಿಯರ್ಸ್ ಕೂಡ ಆ್ಯಂಡಿ ಫ್ಲವರ್ ಅವರೊಂದಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.
5 / 7
ಆ್ಯಂಡಿ ಫ್ಲವರ್ ಐಪಿಎಲ್ 2023 ರ ನಂತರ ಲಖನೌ ಸೂಪರ್ ಜೈಂಟ್ಸ್ ಜೊತೆಗಿನ ಎರಡು ವರ್ಷಗಳ ಒಪ್ಪಂದವು ಮುಕ್ತಾಯಗೊಂಡಿದೆ. ಹೀಗಾಗಿ ಇವರನ್ನು ಇದೀಗ ಆರ್ಸಿಬಿ ಫ್ರಾಂಚೈಸಿ ತಂಡದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದೆ.
6 / 7
ಆ್ಯಂಡಿ ಫ್ಲವರ್ ಅವರು CPL (2020), PSL (2021), ILT20 (2023) ಹೀಗೆ ಜಾಗತಿಕ ಮಟ್ಟದ T20 ತಂಡಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈಗಷ್ಟೇ ಪೂರ್ಣಗೊಂಡಿರುವ ಆ್ಯಶಸ್ ಸರಣಿಯ ಸಂದರ್ಭದಲ್ಲಿ ಅವರು ಆಸ್ಟ್ರೇಲಿಯಾ ತಂಡದ ಕೋಚಿಂಗ್ ಸಿಬ್ಬಂದಿಗೆ ಸಲಹೆಯನ್ನೂ ನೀಡಿದ್ದರು.
7 / 7
90ರ ದಶಕದಲ್ಲಿ ಜಿಂಬಾಬ್ವೆ ತಂಡದ ಪರ ಆಡಿದ್ದ ಆ್ಯಂಡಿ 63 ಟೆಸ್ಟ್ ಆಗೂ 213 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 4794 ರನ್ಸ್ ಮತ್ತು ಏಕದಿನದಲ್ಲಿ 6786 ರನ್ಸ್ ಗಳಿಸಿದ್ದಾರೆ. ಜಿಂಬಾಬ್ವೆ ತಂಡಕ್ಕೆ ಇವರು ಅಪಾರ ಕೊಡುಗೆ ಸಲ್ಲಿಸಿದ್ದಾರೆ.