ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಭಾರದ ಬ್ಯಾಟ್ ಬಳಸಿದ ಬ್ಯಾಟರ್ ಯಾರು ಗೊತ್ತಾ?
Heaviest Cricket Bat: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಭಾರದ ಬ್ಯಾಟ್ ಬಳಸಿದ ಬ್ಯಾಟರ್ಗಳು ಪಟ್ಟಿ ಈ ಕೆಳಗಿನಂತಿದೆ...
Updated on: Aug 03, 2023 | 9:23 PM

ಕ್ರಿಕೆಟ್‌ನಲ್ಲಿ ಪ್ರತಿ ರನ್‌ಗಳೂ ಕೂಡ ತುಂಬಾ ಮಹತ್ವದ್ದು. ಕೇವಲ ಒಂದು ರನ್ನಿಂದ ಪಂದ್ಯದ ಫಲಿತಾಂಶ ಬದಲಾದ ಹಲವು ನಿದರ್ಶನಗಳಿವೆ. ಹೀಗೆ ಒಂದೊಂದು ರನ್ ಕಲೆಹಾಕುವಲ್ಲಿ ಆಟಗಾರ ಬಳಸುವ ಬ್ಯಾಟ್ ಕೂಡ ಮಹತ್ವದ ಪ್ರಾತ್ರವಹಿಸುತ್ತದೆ. ಹೀಗಾಗಿಯೇ ಕೆಲವರು ಭಾರವಾದ ಬ್ಯಾಟ್ ಬಳಸಿದರೆ, ಮತ್ತೆ ಕೆಲವರು ಹಗುರವಾದ ಬ್ಯಾಟ್ ಹಿಡಿದು ಕಣಕ್ಕಿಳಿಯುತ್ತಾರೆ.

ಆದರೆ ಪ್ರಸ್ತುತ ಕ್ರಿಕೆಟ್‌ನಲ್ಲಿ ಭಾರಕ್ಕಿಂತ ಹಗುರದ ಬ್ಯಾಟ್ಗಳ ಮೊರೆ ಹೋಗುವವರೇ ಹೆಚ್ಚು. ಇದಕ್ಕೆ ಸಾಕ್ಷಿಯೇ ಅತ್ಯಂತ ಭಾರದ ಬ್ಯಾಟ್ ಹಿಡಿದ ದಾಖಲೆ ಈಗಲೂ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವುದು. ಹಾಗಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರದ ಬ್ಯಾಟ್ ಬಳಸಿದ ಬ್ಯಾಟರ್ಗಳು ಯಾರೆಂದು ನೋಡೋಣ...

ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸದಲ್ಲಿ 100 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಈ ಶತಕಗಳಲ್ಲಿ ಬಹುತೇಕ ಸೆಂಚುರಿಗಳು ಮೂಡಿಬಂದಿರುವುದು ಭಾರದ ಬ್ಯಾಟ್ನಿಂದ ಎಂಬುದು ವಿಶೇಷ. ಅಂದರೆ ಸಚಿನ್ ಒಂದು ಸಮಯದಲ್ಲಿ ಬರೋಬ್ಬರಿ 1.47 ಕೆಜಿ ತೂಕದ ಬ್ಯಾಟ್ ಬಳಸುತ್ತಿದ್ದರು. ಇದಕ್ಕಿಂತ ಹೆಚ್ಚಿನ ಭಾರದ ಬ್ಯಾಟ್ ಮತ್ಯಾವ ಕ್ರಿಕೆಟಿಗನು ಬಳಸಿಲ್ಲ ಎಂಬುದು ವಿಶೇಷ.

ಕ್ರಿಸ್ ಗೇಲ್: ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗೇಲ್ ಒಂದು ಹಂತದಲ್ಲಿ ಸ್ಪಾರ್ಟಾನ್ ಸಿಜಿ ಕಂಪನಿಯ 1.36 ಕೆಜಿಯ ಬ್ಯಾಟ್ ಬಳಸುತ್ತಿದ್ದರು.

ವೀರೇಂದ್ರ ಸೆಹ್ವಾಗ್: ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ 2008 ರಲ್ಲಿ 1.35 ಕೆಜಿಯ ಬ್ಯಾಟ್ನಿಂದ ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಬಾರಿಸಿದ್ದರು.

ಎಂಎಸ್ ಧೋನಿ: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ 1.27 ಕೆಜಿ ತೂಕದ ಬ್ಯಾಟ್ ಬಳಸಿದ್ದರು.

ಡೇವಿಡ್ ವಾರ್ನರ್: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 1.24 ಕೆಜಿ ಬ್ಯಾಟ್ನಲ್ಲಿ ಎದುರಾಳಿ ಬೌಲರ್ಗಳ ಬೆಂಡೆತ್ತಿದ್ದರು.
























