RCB Retention List for IPL 2025: ಆರ್ಸಿಬಿಯ ಅಚ್ಚರಿಯ ಆಯ್ಕೆ; ಕೇವಲ 3 ಆಟಗಾರರನ್ನು ಉಳಿಸಿಕೊಂಡ ಫ್ರಾಂಚೈಸಿ
Royal Challengers Bangalore Retention Players List for IPL 2025: ಬಿಸಿಸಿಐ ನೀಡಿರುವ ಗಡುವಿನ ಒಳಗೆ ತಾನು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಆರ್ಸಿಬಿ ಹರಾಜಿಗೂ ಮುನ್ನ ತಂಡದಲ್ಲಿ ಕೇವಲ ಆಟಗಾರರನ್ನು ಉಳಿಸಿಕೊಳ್ಳಲು ತೀರ್ಮಾನಿಸಿದೆ. ಅವರುಗಳ ವಿವರ ಇಲ್ಲಿದೆ.
1 / 6
2025 ರ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಎಲ್ಲಾ ಐಪಿಎಲ್ ತಂಡಗಳಿಗೆ ತಮ್ಮ ತಮ್ಮ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಲು ಅಕ್ಟೋಬರ್ 31 ರ ಗಡುವು ನೀಡಿತ್ತು. ಇದರ ಜೊತೆಗೆ ಪ್ರತಿ ತಂಡವು ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿತ್ತು. ಇದರಲ್ಲಿ ಒಂದು ತಂಡವು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಎಷ್ಟು ಆಟಗಾರರ ಮೇಲೆ ರೈಟ್ ಟು ಮ್ಯಾಚ್ ಕಾರ್ಡ್ ಅನ್ನು ಬಳಸಬೇಕು ಎಂಬುದನ್ನು ನಿರ್ಧರಿಸಲು ಫ್ರಾಂಚೈಸಿಗೆ ಅವಕಾಶ ನೀಡಲಾಗಿತ್ತು.
2 / 6
ಆ ಪ್ರಕಾರ ಬಿಸಿಸಿಐ ನೀಡಿರುವ ಗಡುವಿನ ಒಳಗೆ ತಾನು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಆರ್ಸಿಬಿ ಹರಾಜಿಗೂ ಮುನ್ನ ತಂಡದಲ್ಲಿ ಕೇವಲ ಆಟಗಾರರನ್ನು ಉಳಿಸಿಕೊಳ್ಳಲು ತೀರ್ಮಾನಿಸಿದೆ. ಅವರುಗಳ ವಿವರ ಇಲ್ಲಿದೆ.
3 / 6
ಆರ್ಸಿಬಿ ತನ್ನ ಮೊದಲ ಆಯ್ಕೆಯಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಉಳಿಸಿಕೊಂಡಿದೆ. ಕೊಹ್ಲಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ಆರ್ಸಿಬಿ ಬರೋಬ್ಬರಿ 21 ಕೋಟಿ ರೂ. ನೀಡಿದೆ. ಈ ಮೊದಲೇ ವರದಿಯಾಗಿದ್ದಂತೆ ಕೊಹ್ಲಿ ತಂಡದಲ್ಲೇ ಉಳಿಯುವುದು ಖಚಿತವಾಗಿತ್ತು. ಆದರೆ ಅವರಿಗೆ ಇಷ್ಟು ಹಣ ವ್ಯಯಿಸಿರುವುದು ಅಚ್ಚರಿಯ ಸಂಗತಿಯಾಗಿದೆ.
4 / 6
ಆರ್ಸಿಬಿ ತನ್ನ ಎರಡನೇ ಆಯ್ಕೆಯಾಗಿ ಭಾರತದ ಯುವ ಸ್ಫೋಟಕ ಬ್ಯಾಟ್ಸ್‌ಮನ್ ರಜತ್ ಪಾಟಿದರ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಅವರಿಗೆ 11 ಕೋಟಿ ರೂಗಳನ್ನು ನೀಡಲು ಮುಂದಾಗಿದೆ. ರಜತ್ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದಲೇ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಇದಲ್ಲದೆ ರಜತ್ ಐಪಿಎಲ್ನಲ್ಲಿ ಆರ್ಸಿಬಿ ಪರ ಸ್ಫೋಟಕ ಶತಕವನ್ನು ಸಿಡಿಸಿದ್ದರು.
5 / 6
ಮೂರನೇ ಆಯ್ಕೆಯಾಗಿ ಆರ್ಸಿಬಿ ಯುವ ವೇಗದ ಬೌಲರ್ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಯಶ್ ದಯಾಳ್ ಮುಂದಿನ ಆವೃತ್ತಿಯಲ್ಲಿ ಆಡಲು 5 ಕೋಟಿ ರೂ. ವೇತನ ಪಡೆಯಲ್ಲಿದ್ದಾರೆ.
6 / 6
ಪ್ರಸ್ತುತ ಆರ್ಸಿಬಿ ಕೇವಲ 3 ಆಟಗಾರರನ್ನು ತಂಡದಲ್ಲಿ ಉಳಸಿಕೊಂಡಿರುವ ಕಾರಣ ಮೂವರು ಆಟಗಾರರ ಮೇಲೆ ಆರ್ಟಿಎಮ್ ಕಾರ್ಡ್ ಬಳಸುವ ಅವಕಾಶ ಹೊಂದಿದೆ. ಈ ನಿಯಮದಡಿಯಲ್ಲಿ ಆರ್ಸಿಬಿ, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್ ಹಾಗೂ ಫಾಫ್ ಡುಪ್ಲೆಸಿಸ್ ಅವರನ್ನು ಖರೀದಿಸುವ ಸಾಧ್ಯತೆಗಳಿವೆ.
Published On - 5:36 pm, Thu, 31 October 24