ಆಸ್ಟ್ರೇಲಿಯಾ ದಾಂಡಿಗರ ಸಿಡಿಲಬ್ಬರ… ಟಿ20 ದಾಖಲೆಗಳು ಧೂಳೀಪಟ

Updated on: Dec 20, 2025 | 8:54 AM

BBL 2025: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನ ಆರನೇ ಪಂದ್ಯವು ಬ್ಯಾಟರ್​ಗಳ ಸಿಡಿಲಬ್ಬರಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ತಂಡವು 257 ರನ್​​ ಕಲೆಹಾಕಿದರೆ. ಈ ಗುರಿಯನ್ನು ಬೆನ್ನತ್ತಿ ಬ್ರಿಸ್ಬೇನ್ ಹೀಟ್ ತಂಡವು 8 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

1 / 7
BBL 2025: ಬಿಗ್ ಬ್ಯಾಷ್​ ಲೀಗ್​ನ 6ನೇ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಅದು ಕೂಡ ಟಿ20 ಇತಿಹಾಸದಲ್ಲೇ ಚೇಸಿಂಗ್ ವೇಳೆ ಇಬ್ಬರು ಬ್ಯಾಟರ್​ಗಳು ಶತಕ ಸಿಡಿಸುವ ಮೂಲಕ. ಇದರೊಂದಿಗೆ ಬಿಗ್ ಬ್ಯಾಷ್​ ಲೀಗ್​ನ ಹಲವು ದಾಖಲೆಗಳು ಕೂಡ ಧೂಳೀಪಟವಾಗಿದೆ.

2 / 7
ಬ್ರಿಸ್ಬೇನ್​ನ ದಿ ಗಬ್ಬಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪರ್ತ್ ಸ್ಕಾಚರ್ಸ್ ಹಾಗೂ ಬ್ರಿಸ್ಬೇನ್ ಹೀಟ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಪರ್ತ್​ ಸ್ಕಾಚರ್ಸ್ ಪರ ಫಿನ್ ಅಲೆನ್ (79) ಹಾಗೂ ಕೂಪರ್ ಕೊನೊಲಿ (77) ಸ್ಫೋಟಕ ಅರ್ಧಶತಕಗಳನ್ನು ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಪರ್ತ್ ಸ್ಕಾಚರ್ಸ್ ತಂಡವು 20 ಓವರ್​ಗಳಲ್ಲಿ 257 ರನ್ ಕಲೆಹಾಕಿತು.

3 / 7
258 ರನ್​ಗಳ ಗುರಿ ಬೆನ್ನತ್ತಿದ ಬ್ರಿಸ್ಬೇನ್ ಹೀಟ್ ತಂಡವು ಮೊದಲ ಎಸೆತದಲ್ಲೇ ಕಾಲಿನ್ ಮನ್ರೊ (0) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿ ಜ್ಯಾಕ್ ವೈಲ್ಡರ್ಮತ್ (110) ಹಾಗೂ ಮ್ಯಾಟ್ ರೆನ್​ಶಾ (102) ಸ್ಫೋಟಕ ಸೆಂಚುರಿಗಳನ್ನು ಸಿಡಿಸಿದರು. ಈ ಶತಕಗಳ ನೆರವಿನೊಂದಿಗೆ ಬ್ರಿಸ್ಬೇನ್ ಹೀಟ್ 19.5 ಓವರ್​ಗಳಲ್ಲಿ 258 ರನ್​ಗಳಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

4 / 7
ವಿಶೇಷ ಎಂದರೆ ಈ ಪಂದ್ಯದಲ್ಲಿ ಜ್ಯಾಕ್ ವೈಲ್ಡರ್ಮತ್ ಹಾಗೂ ಮ್ಯಾಟ್ ರೆನ್​ಶಾ ಬಾರಿಸಿದ ಶತಕವು ಟಿ20 ಕ್ರಿಕೆಟ್​ನ ಚೇಸಿಂಗ್ ವೇಳೆ ಮೊದಲ ಜೋಡಿ ಶತಕಗಳಾಗಿವೆ. ಅಂದರೆ ಇದೇ ಮೊದಲ ಬಾರಿಗೆ ಪಂದ್ಯವೊಂದರ ಚೇಸಿಂಗ್​ ವೇಳೆ ಇಬ್ಬರು ಬ್ಯಾಟರ್​ಗಳು ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

5 / 7
ಇನ್ನು 258 ರನ್​ಗಳ ಚೇಸಿಂಗ್ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಮೂಡಿಬಂದ ಮೂರನೇ ಯಶಸ್ವಿ ಚೇಸಿಂಗ್ ಎಂಬುದು ವಿಶೇಷ. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ 262 ರನ್​​ಗಳನ್ನು ಚೇಸ್ ಮಾಡಿ ಗೆದ್ದಿದ್ದರು. ಹಾಗೆಯೇ ಸೌತ್ ಆಫ್ರಿಕಾ ತಂಡ 259 ರನ್​ಗಳನ್ನು ಬೆನ್ನತ್ತಿ ಗೆಲುವು ದಾಖಲಿಸಿದ್ದಾರೆ. ಇದೀಗ ಬ್ರಿಸ್ಬೇನ್ ಹೀಟ್ ತಂಡವು 258 ರನ್​ಗಳನ್ನು ಚೇಸ್ ಮಾಡಿ ಈ ದಾಖಲೆ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.

6 / 7
ಹಾಗೆಯೇ ಈ ಪಂದ್ಯದಲ್ಲಿ ಮ್ಯಾಟ್ ರೆನ್​ಶಾ ಹಾಗೂ ಜ್ಯಾಕ್ ವೈಲ್ಡರ್ಮತ್ ನಡುವೆ 212 ರನ್​ಗಳ ಜೊತೆಯಾಟ ಮೂಡಿಬಂದಿತ್ತು. ಇದು ಬಿಗ್ ಬ್ಯಾಷ್ ಲೀಗ್ ಟೂರ್ನಿಯ ಇತಿಹಾಸದಲ್ಲೇ ಮೂಡಿಬಂದ ಗರಿಷ್ಠ ರನ್​ಗಳ ಜೊತೆಯಾಟ ಎಂಬುದು ವಿಶೇಷ.

7 / 7
ಇನ್ನು ಈ ಪಂದ್ಯದಲ್ಲಿ ಒಟ್ಟಿಉ 36 ಸಿಕ್ಸರ್​ಗಳು ಮೂಡಿಬಂದಿದ್ದವು. ಇದು ಸಹ ದಾಖಲೆಯಾಗಿದೆ. ಅಂದರೆ ಬಿಗ್ ಬ್ಯಾಷ್ ಲೀಗ್​ನಲ್ಲಿ ಇದೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ 30 ಕ್ಕಿಂತ ಹೆಚ್ಚಿನ ಸಿಕ್ಸ್​ಗಳನ್ನು ಬಾರಿಸಲಾಗಿದೆ. ಹಾಗೆಯೇ ಈ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ 515 ರನ್​ಗಳು. ಇದು ಬಿಗ್ ಬ್ಯಾಷ್ ಲೀಗ್​ನಲ್ಲಿ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಎಂಬುದು ವಿಶೇಷ. ಒಟ್ಟಿನಲ್ಲಿ ಬಿಗ್ ಬ್ಯಾಷ್ ಲೀಗ್​ನ 6ನೇ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಈ ದಾಖಲೆಯೊಂದಿಗೆ ಬ್ರಿಸ್ಬೇನ್ ಹೀಟ್ ಅಮೋಘ ಗೆಲುವು ದಾಖಲಿಸಿ ಹೊಸ ಇತಿಹಾಸವನ್ನು ಸಹ ನಿರ್ಮಿಸಿದ್ದಾರೆ.