Rishabh Pant: ಕಾರು ಅಪಘಾತದ ಬಳಿಕ ತನ್ನ ಮೊದಲ ಫೋಟೋ ಹಂಚಿಕೊಂಡ ರಿಷಭ್ ಪಂತ್: ಇಲ್ಲಿದೆ ನೋಡಿ

| Updated By: Vinay Bhat

Updated on: Feb 11, 2023 | 9:09 AM

Rishabh Pant Car Accident: ಎರಡು ಫೋಟೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ರಿಷಭ್ ಪಂತ್ ಚೇತರಿಕೆಯೆಡೆಗೆ ಒಂದೊಂದೇ ಹೆಜ್ಜೆ ಇಡುತ್ತಿರುವುದಾಗಿ ಶುಭ ಸುದ್ದಿ ನೀಡಿದ್ದಾರೆ. ಊರುಗೋಲಿನ ಸಹಾಯದಿಂದ ನಡೆದಾಡುತ್ತಿರುವ ಚಿತ್ರಗಳನ್ನು ಅವರು ಟ್ವಿಟರ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

1 / 8
ಭಾರತ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಭೀಕರ ಕಾರು ಅಪಘಾತದ ಬಳಿಕ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರುವ ಪಂತ್ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2 / 8
ಎರಡು ಫೋಟೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಪಂತ್ ಚೇತರಿಕೆಯೆಡೆಗೆ ಒಂದೊಂದೇ ಹೆಜ್ಜೆ ಇಡುತ್ತಿರುವುದಾಗಿ ಶುಭ ಸುದ್ದಿ ನೀಡಿದ್ದಾರೆ. ಊರುಗೋಲಿನ ಸಹಾಯದಿಂದ ನಡೆದಾಡುತ್ತಿರುವ ಚಿತ್ರಗಳನ್ನು ಅವರು ಟ್ವಿಟರ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

3 / 8
ಮಂಡಿಗೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಕಿರುವುದರಿಂದ ನಡೆಯಲು ಊರುಗೋಲು ಬಳಸಿ ಒಂದೋಂದೇ ಹೆಜ್ಜೆ ಇಡುತ್ತಿರುವುದಾಗಿ ಪಂತ್‌ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. "ಒಂದೊಂದೇ ಹೆಜ್ಜೆ ಮುಂದೆ, ಚೇತರಿಕೆಯೆಡೆಗೆ ಒಂದು ಹೆಜ್ಜೆ, ಉತ್ತಮದ ಕಡೆಗೆ ಒಂದು ಹೆಜ್ಜೆ," ಎಂದು ಪಂತ್‌ ಫೋಟೋಗಳೊಂದಿಗೆ ಟ್ವೀಟ್‌ ಮಾಡಿದ್ದಾರೆ.

4 / 8
ಪಂತ್ ಅವರು ಕಳೆದ ವರ್ಷ ಡಿಸೆಂಬರ್‌ 30 ರಂದು ದಿಲ್ಲಿಯಿಂದ ಹರಿಯಾಣಕ್ಕೆ ತೆರಳುತ್ತಿದ್ದಾಗ ಹರಿದ್ವಾರ ಜಿಲ್ಲೆಯ ರೂರ್ಕಿ ಬಳಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ನಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹರಿಯಾಣದಲ್ಲಿ ಚಿಕಿತ್ಸೆ ನೀಡಿದ ಬಳಿಕ ಏರ್​ಲಿಫ್ಟ್​ ಮೂಲಕ ಮುಂಬೈನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

5 / 8
ಇದೀಗ ಪಂತ್ ತುಸು ಚೇತರಿಸಿಕೊಂಡಿದ್ದು ಒಂದೊಂದೆ ಹೆಜ್ಜೆ ಇಟ್ಟು ನಡೆದಾಡಲು ಆರಂಭಿಸಿದ್ದಾರೆ. ಆಗಿರುವ ಕಾರಣ ಪಂತ್‌ ಕ್ರಿಕೆಟ್‌ ಅಂಗಣಕ್ಕೆ ಮರಳಿದೆ, ಅವರ ಮಂಡಿ ಮೇಲೆ ಹೆಚ್ಚು ಒತ್ತಡ ಬೀಳುವುದು ಖಂಡಿತ. ಹೀಗಾಗಿ ಮಂಡಿನೋವಿನ ಸಮಸ್ಯೆ ಸಂಪೂರ್ಣ ಗುಣವಾಗದ ಹೊರತಾಗಿ ಅವರ ಕಮ್‌ಬ್ಯಾಕ್‌ ಸಾಧ್ಯವಿಲ್ಲ.

6 / 8
ಬಿಸಿಸಿಐ ವೈದ್ಯಾಧಿಕಾರಿಗಳ ಪ್ರಕಾರ ಪಂತ್‌ ಕನಿಷ್ಠ ಒಂದು ವರ್ಷ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಈಗಾಗಗಲೇ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯಿಂದ ಪಂತ್ ಹೊರಬಿದ್ದಿದ್ದು, ಐಪಿಎಲ್ 2023 ಹಾಗೂ ಏಷ್ಯಾಕಪ್​ನಲ್ಲೂ ಕಣಕ್ಕಿಳಿಯುವುದು ಅನುಮಾನ.

7 / 8
ಸದ್ಯ ಸಾಗುತ್ತಿರುವ ಆಸ್ಟ್ರೇಲಿಯ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಪಂತ್ ಅವರ ಅನುಪಸ್ಥಿತಿಯಲ್ಲಿ ಕೆ.ಎಸ್. ಭರತ್‌ಗೆ ಆಡುವ ಅವಕಾಶ ದೊರಕಿದೆ. ಆದರೆ, ಅವರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಪಂತ್ ಅಲಭ್ಯತೆ ಟೀಮ್ ಇಂಡಿಯಾದಲ್ಲಿ ಎದ್ದು ಕಾಣುತ್ತಿದೆ.

8 / 8
ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಪಂತ್ ಫಿಟ್ ಆಗಬಹುದೇ ಎಂದು ಕಾದು ನೋಡಬೇಕಾಗಿದೆ. ಸಂಪೂರ್ಣ ಗುಣಮುಖರಾಗಿ ಬೆಂಗಳೂರಿನ ಎನ್​ಸಿಎನಲ್ಲಿ ಫಿಟ್​ನೆಸ್ ಪರೀಕ್ಷೆ ಪಾಸ್ ಆದ ಬಳಿಕವಷ್ಟೆ ಪಂತ್ ತಂಡಕ್ಕೆ ಮರಳಬೇಕಿದೆ.

Published On - 9:09 am, Sat, 11 February 23