Rishabh Pant: ಗಿಲ್​ಕ್ರಿಸ್ಟ್ ಹಾದಿಯಲ್ಲಿ ರಿಷಭ್ ಪಂತ್

| Updated By: ಝಾಹಿರ್ ಯೂಸುಫ್

Updated on: Sep 22, 2024 | 11:08 AM

Rishabh Pant: ಚೆನ್ನೈನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್​ಗೆ ಮರಳಿದ್ದಾರೆ. ಇದರೊಂದಿಗೆ ಭಾರತದ ಪರ ಅತ್ಯಧಿಕ ಟೆಸ್ಟ್ ಶತಕ ಸಿಡಿಸಿದ ವಿಕೆಟ್ ಕೀಪರ್​ಗಳ ಪಟ್ಟಿಯಲ್ಲಿ ಧೋನಿಯ ದಾಖಲೆಯನ್ನು ಸರಿಗಟ್ಟಿದ್ದಾರೆ.

1 / 6
ಆ್ಯಡಂ ಗಿಲ್​ಕ್ರಿಸ್ಟ್​... ಆಸ್ಟ್ರೇಲಿಯಾ ಕ್ರಿಕೆಟ್ ಕಂಡಂತಹ ಸರ್ವಶ್ರೇಷ್ಠ ವಿಕೆಟ್ ಕೀಪರ್ ಬ್ಯಾಟರ್. ಫಾರ್ಮಾಟ್ ಯಾವುದೇ ಇರಲಿ, ಗಿಲ್​ಕ್ರಿಸ್ಟ್​ ಅಬ್ಬರ ಮಾತ್ರ ಒಂದೇ ರೀತಿಯಲ್ಲಿರುತ್ತಿತ್ತು. ಹೀಗಾಗಿಯೇ ಗಿಲ್ಲಿ ತಮ್ಮ ಕೆರಿಯರ್​ನ ಉದ್ದಕ್ಕೂ ಬೌಲರ್​ಗಳ ಪಾಲಿಗೆ ಗಿಲ್ಲಿ ಸಿಂಹಸ್ವಪ್ನವಾಗಿದ್ದರು. ಇದೀಗ ಆ್ಯಡಂ ಗಿಲ್​ಕ್ರಿಸ್ಟ್ ಹಾದಿಯಲ್ಲೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಸಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

2 / 6
ಈವರೆಗೆ 34 ಟೆಸ್ಟ್ ಪಂದ್ಯಗಳನ್ನಾಡಿರುವ ರಿಷಭ್ ಪಂತ್ 6 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಅತೀ ಕಡಿಮೆ ಇನಿಂಗ್ಸ್​ಗಳಲ್ಲಿ 6 ಶತಕ ಬಾರಿಸಿದ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಈ 34 ಟೆಸ್ಟ್ ಪಂದ್ಯಗಳಿಂದ 2,419 ರನ್ ಕಲೆಹಾಕಿದ್ದಾರೆ. ಅತ್ತ ಮೊದಲ 34 ಟೆಸ್ಟ್ ಪಂದ್ಯಗಳ ವೇಳೆ ಗಿಲ್​ಕ್ರಿಸ್ಟ್​ ಕೂಡ ಇದೇ ಮಾದರಿಯಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದ್ದರು ಎಂಬುದು ವಿಶೇಷ.

3 / 6
ಆ್ಯಡಂ ಗಿಲ್​ಕ್ರಿಸ್ಟ್ 34 ಟೆಸ್ಟ್ ಪಂದ್ಯಗಳ ಮುಕ್ತಾಯದ ವೇಳೆಗೆ ಒಟ್ಟು 48 ಇನಿಂಗ್ಸ್ ಆಡಿದ್ದರು. ಈ ವೇಳೆ 80.40ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ಅವರು 2,282 ರನ್ ಕಲೆಹಾಕಿದ್ದರು. ಇದೇ ವೇಳೆ 6 ಶತಕ ಹಾಗೂ 12 ಅರ್ಧಶತಕಗಳನ್ನೂ ಸಹ ಬಾರಿಸಿದ್ದರು.

4 / 6
ಇದೀಗ 34 ಟೆಸ್ಟ್ ಪಂದ್ಯಗಳಲ್ಲಿ 58 ಇನಿಂಗ್ಸ್ ಆಡಿರುವ ರಿಷಭ್ ಪಂತ್ 74.10 ಸ್ಟ್ರೈಕ್ ರೇಟ್​ನಲ್ಲಿ ಒಟ್ಟು 2,419 ರನ್ ಕಲೆಹಾಕಿದ್ದಾರೆ. ಈ ವೇಳೆ ಪಂತ್ ಬ್ಯಾಟ್​ನಿಂದ 6 ಶತಕ ಹಾಗೂ 11 ಅರ್ಧಶತಕಗಳು ಮೂಡಿಬಂದಿವೆ.

5 / 6
ಅತ್ತ 34 ಟೆಸ್ಟ್ ಪಂದ್ಯಗಳ ಮುಕ್ತಾಯದ ವೇಳೆಗೆ ಇಬ್ಬರ ರನ್​ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಹಾಗೂ ಶತಕ-ಅರ್ಧಶತಕಗಳ ಸಂಖ್ಯೆಗಳು ಅಸುಪಾಸಿನಲ್ಲಿವೆ. ಹೀಗಾಗಿಯೇ ರಿಷಭ್ ಪಂತ್ ಹೊಸ ಯುಗದ ಆ್ಯಡಂ ಗಿಲ್​ಕ್ರಿಸ್ಟ್ ಎಂದು ವರ್ಣಿಸಲಾಗುತ್ತಿದೆ. ಈ ವರ್ಣಿಕೆಯೊಂದಿಗೆ ಪಂತ್ ಗಿಲ್ಲಿಯನ್ನು ಮೀರಿಸಲಿದ್ದಾರಾ ಕಾದು ನೋಡಬೇಕಿದೆ.

6 / 6
ಅಂದಹಾಗೆ ಚೆನ್ನೈನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್​ಗೆ ಮರಳಿದ್ದಾರೆ. ಇದರೊಂದಿಗೆ ಭಾರತದ ಪರ ಅತ್ಯಧಿಕ ಟೆಸ್ಟ್ ಶತಕ ಸಿಡಿಸಿದ ವಿಕೆಟ್ ಕೀಪರ್​ಗಳ ಪಟ್ಟಿಯಲ್ಲಿ ಧೋನಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಎಂಎಸ್ ಧೋನಿ ಒಟ್ಟು 6 ಶತಕ ಬಾರಿಸಿದ್ದರೆ, ಇದೀಗ ಪಂತ್ ಕೂಡ ಆರರ ಸಂಖ್ಯೆಯನ್ನು ಮುಟ್ಟಿದ್ದಾರೆ. ಅಲ್ಲದೆ ಮುಂದಿನ ಪಂದ್ಯದಲ್ಲಿ ರಿಷಭ್ ಪಂತ್ ಒಂದು ಶತಕ ಬಾರಿಸಿದರೆ, ಟೀಮ್ ಇಂಡಿಯಾ ಪರ ಅತ್ಯಧಿಕ ಟೆಸ್ಟ್ ಸೆಂಚುರಿ ಸಿಡಿಸಿದ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರೆ.