Riyan Parag: ರಾಜಸ್ಥಾನ್ ಸೋಲಲು ನೀನೇ ಕಾರಣ: ಸಖತ್ ಟ್ರೋಲ್ ಆದ ರಿಯಾನ್ ಪರಾಗ್

|

Updated on: Apr 20, 2023 | 9:39 AM

RR vs LSG, IPL 2023: ಲಖನೌ ಸೂಪರ್ ಜೇಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೋತ ಬೆನ್ನಲ್ಲೇ ತಂಡದ ಬ್ಯಾಟರ್ ರಿಯಾನ್ ಪರಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗಿದ್ದಾರೆ.

1 / 8
ಬುಧವಾರ ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 10 ರನ್​ಗಳಿಂದ ಸೋಲು ಕಂಡಿತು. ದೊಡ್ಡ ಮೊತ್ತದ ಟಾರ್ಗೆಟ್ ಇರದಿದ್ದರೂ ಆರ್​ಆರ್​ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ.

2 / 8
ರಾಜಸ್ಥಾನ್ ಸೋತ ಬೆನ್ನಲ್ಲೇ ತಂಡದ ಬ್ಯಾಟರ್ ರಿಯಾನ್ ಪರಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗಿದ್ದಾರೆ. ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಸಾಕಷ್ಟು ಬಾಲ್ ತಿಂದು ಪರಾಗ್ ಸೋಲಿಗೆ ಕಾರಣರಾದರು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

3 / 8
ಸತತ ಕಳಪೆ ಪ್ರದರ್ಶನ ತೋರುತ್ತಿದ್ದರೂ ಪರಾಗ್​ಗೆ ಯಾಕೆ ಇಷ್ಟೊಂದು ಅವಕಾಶ ನೀಡುತ್ತಿದ್ದೀರಿ ಎಂದು ಕೆಲವರು ಬರೆದುಕೊಂಡಿದ್ದಾರೆ. ಪರಾಗ್ 36 ಐಪಿಎಲ್ ಪಂದ್ಯಗಳಲ್ಲಿ ಗಳಿಸಿರುವುದು ಕೇವಲ 401 ರನ್ ಗಳನ್ನು ಮಾತ್ರ.

4 / 8
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಲಖನೌ ತಂಡದ ಪರ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರೂ ನಾಯಕ ಕೆಎಲ್. ರಾಹುಲ್ (39) ಹಾಗೂ ಕೈಲ್ ಮೇಯರ್ಸ್ (51) ಉತ್ತಮ ಆರಂಭ ನೀಡಿದರು. ಬಳಿಕ ಬಂದ ಆಯುಶ್ ಬದೋನಿ(1), ದೀಪಕ್ ಹೂಡಾ(2) ನಿರಾಸೆ ಮೂಡಿಸಿದರು. ಹೀಗಾಗಿ, ಬೃಹತ್ ಮೊತ್ತ ಪೇರಿಸಲು ಲಖನೌ ತಂಡಕ್ಕೆ ಸಾಧ್ಯವಾಗಲಿಲ್ಲ.

5 / 8
ಎಲ್​ಎಸ್​ಜಿ ಪರ ಮಾರ್ಕಸ್ ಸ್ಟೋಯ್ನಿಸ್(21), ನಿಕೋಲಸ್ ಪೂರನ್(29) ತಂಡದ ಗೌರವಾನ್ವಿತ ಮೊತ್ತಕ್ಕೆ ಕಾರಣರಾದರು. ಲಖನೌ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. 4 ಓವರ್‌ಗಳಲ್ಲಿ 23 ರನ್ ನೀಡಿ ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದರು.

6 / 8
ಟಾರ್ಗೆಟ್ ಬೆನ್ನಟ್ಟಿದ ಆರ್​ಆರ್​ ಪರ ಇನ್ನಿಂಗ್ಸ್​ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಉತ್ತಮ ಆರಂಭವನ್ನೇ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 87 ರನ್ ಜೊತೆಯಾಟ ನೀಡಿತು.

7 / 8
35 ಬಾಲ್​ಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ ಸಮೇತ ಜೈಸ್ವಾಲ್ 44 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ ಕೇವಲ 2 ರನ್​ಗೆ ರನೌಟ್‌ ಬಲಿಗೆ ಸಿಲುಕಿದರು. ಜೋಸ್​ ಬಟ್ಲರ್ 41 ಎಸೆತಗಳಲ್ಲಿ ನಾಲ್ಕು ಬೌಂಡರಿ, ಒಂದು ಸಿಕ್ಸರ್​ 40 ರನ್ ಸಿಡಿಸಿ ನಿರ್ಗಮಿಸಿದರು.

8 / 8
ನಂತರ ದೇವದತ್ ಪಡಿಕ್ಕಲ್ (26) ಜವಾಬ್ದಾರಿಯುತ ಆಟ ಆಡಿದರೂ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ. ಕೊನೆಯ ಓವರ್​ನಲ್ಲಿ 19 ರನ್​ಗಳ ಅಗತ್ಯವಿತ್ತು. ಆದರೆ, ಹೆಟ್ಮೆಯರ್ ಕೇವಲ 2 ರನ್​ಗೆ ವಿಕೆಟ್​ ಒಪ್ಪಿಸಿದರು. ಧ್ರುವ್ ಜುರೆಲ್ 0 ಸುತ್ತಿದರು. ಆರ್​ಆರ್​ 144 ರನ್​ ಗಳಿಸಲಷ್ಟೆ ಸಾಧ್ಯವಾಯಿತು.

Published On - 9:39 am, Thu, 20 April 23