Rohit Sharma: ರೋಹಿತ್ ಶರ್ಮಾ ನೂತನ ದಾಖಲೆ: ಅಫ್ರಿದಿ ದಾಖಲೆಯನ್ನು ಪುಡಿಗಟ್ಟಿದ ಹಿಟ್ಮ್ಯಾನ್
TV9 Web | Updated By: Vinay Bhat
Updated on:
Aug 07, 2022 | 11:00 AM
IND vs WI 4th T20: ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ರೋಹಿತ್ ಸಿಕ್ಸರ್ ಗಳ ಸಂಖ್ಯೆ ಇದೀಗ 477ಕ್ಕೆ ತಲುಪಿದೆ. ಅಫ್ರಿದಿ 476 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಮೂಲಕ ರೋಹಿತ್ ಅತಿ ಹೆಚ್ಚು ಸಿಕ್ಸರ್ ಗಳನ್ನು ಬಾರಿಸಿದ ವಿಶ್ವದ ಎರಡನೇ ಬ್ಯಾಟರ್ ಆಗಿದ್ದಾರೆ. ಮೊದಲ ಸ್ಥಾನದಲ್ಲಿ ಕ್ರಿಸ್ ಗೇಲ್ (553 ಸಿಕ್ಸರ್) ಇದ್ದಾರೆ.
1 / 7
ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ರೋಹಿತ್ ಪಡೆ 59 ರನ್ಗಳ ಅಮೋಘ ಗೆಲುವು ಕಾಣುವ ಮೂಲಕ 3-1 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿದೆ.
2 / 7
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆ ಬರೆದಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ಸ್ಟಾರ್ ಬ್ಯಾಟರ್ ಶಾಹಿದ್ ಅಫ್ರಿದಿ ಸಿಕ್ಸರ್ ಗಳ ದಾಖಲೆಯನ್ನು ಹಿಟ್ ಮ್ಯಾನ್ ಅಳಿಸಿ ಹಾಕಿದ್ದಾರೆ.
3 / 7
ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ರೋಹಿತ್ ಸಿಕ್ಸರ್ ಗಳ ಸಂಖ್ಯೆ ಇದೀಗ 477ಕ್ಕೆ ತಲುಪಿದೆ. ಅಫ್ರಿದಿ 476 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಮೂಲಕ ರೋಹಿತ್ ಅತಿ ಹೆಚ್ಚು ಸಿಕ್ಸರ್ ಗಳನ್ನು ಬಾರಿಸಿದ ವಿಶ್ವದ ಎರಡನೇ ಬ್ಯಾಟರ್ ಆಗಿದ್ದಾರೆ. ಮೊದಲ ಸ್ಥಾನದಲ್ಲಿ ಕ್ರಿಸ್ ಗೇಲ್ (553 ಸಿಕ್ಸರ್) ಇದ್ದಾರೆ.
4 / 7
ನಾಲ್ಕನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ ಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಪವರ್ ಪ್ಲೇಯಲ್ಲಿ ಮನಬಂದಂತೆ ಬ್ಯಾಟ್ ಬೀಸಿದರು. ಹಿಟ್ ಮ್ಯಾನ್ ಕೇವಲ 16 ಎಸೆತಗಳಲ್ಲಿ 2 ಫೋರ್, 3 ಸಿಕ್ಸರ್ ಸಿಡಿಸಿ 33 ರನ್ ಚಚ್ಚಿದರು.
5 / 7
ರಿಷಭ್ ಪಂತ್ ಕಡೆಯಿಂದ ಒಂದೊಳ್ಳೆ ಇನ್ನಿಂಗ್ಸ್ ಮೂಡಿಬಂತು. 31 ಎಸೆತಗಳಲ್ಲಿ 6 ಫೋರ್ ಬಾರಿಸಿ 30 ರನ್ ಗಳಿಸಿದರು. ಅಕ್ಷರ್ ಪಟೇಲ್ 8 ಎಸೆತಗಳಲ್ಲಿ ಅಜೇಯ 20 ರನ್ ಸಿಡಿಸಿದರು. ಪರಿಣಾಮ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿತು.
6 / 7
ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಈ ಬಾರಿ ಕೂಡ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ಕುಸಿಯಿತು. ತಂಡದ ಪರ ನಾಯಕ ನಿಕೋಲಸ್ ಪೂರನ್ ಹಾಗೂ ರೋಮನ್ ಪೋವೆಲ್ ತಲಾ 24 ರನ್ ಗಳಿಸಿದ್ದೇ ಹೆಚ್ಚು. 19.1 ಓವರ್ನಲ್ಲಿ 132 ರನ್ಗೆ ಕೆರಿಬಿಯನ್ನರು ಆಲೌಟ್ ಆದರು.ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಈ ಬಾರಿ ಕೂಡ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ಕುಸಿಯಿತು. ತಂಡದ ಪರ ನಾಯಕ ನಿಕೋಲಸ್ ಪೂರನ್ ಹಾಗೂ ರೋಮನ್ ಪೋವೆಲ್ ತಲಾ 24 ರನ್ ಗಳಿಸಿದ್ದೇ ಹೆಚ್ಚು. 19.1 ಓವರ್ನಲ್ಲಿ 132 ರನ್ಗೆ ಕೆರಿಬಿಯನ್ನರು ಆಲೌಟ್ ಆದರು.
7 / 7
ಭಾರತ ಪರ ಆವೇಶ್ ಖಾನ್ 4 ಓವರ್ ಗೆ 17 ರನ್ ನೀಡಿ 2 ವಿಕೆಟ್ ಕಿತ್ತರೆ, ಅರ್ಶ್ ದೀಪ್ ಸಿಂಗ್ 3.1 ಓವರ್ ನಲ್ಲಿ 12 ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಹಾಗೂ ರವಿ ಬಿಷ್ಟೋಯ್ ಕೂಡ ತಲಾ 2 ವಿಕೆಟ್ ಬಾಜಿಕೊಂಡರು.
Published On - 11:00 am, Sun, 7 August 22