IND vs SL, ICC World Cup: ಭಾರತದ ಪ್ಲೇಯಿಂಗ್ XI ಬಗ್ಗೆ ದೊಡ್ಡ ಹಿಂಟ್ ಕೊಟ್ಟ ರೋಹಿತ್ ಶರ್ಮಾ: ಹೊಸ ಆಟಗಾರ?
India Playing XI vs Sri Lanka, ICC ODI World Cup : ಇಂದು ವಿಶ್ವಕಪ್ನಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿ ಆಗಲಿದೆ. ಈ ಬಾರಿಯ ಟೂರ್ನಿಯಲ್ಲಿ ಆಡಿರುವ ಆರು ಪಂದ್ಯಗಳ ಪೈಕಿ ಎಲ್ಲ ಆರು ಮ್ಯಾಚ್ಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಏಳನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಈ ಪಂದ್ಯಕ್ಕೂ ಮುನ್ನ ರೋಹಿತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
1 / 7
ಐಸಿಸಿ ಏಕದಿನ ವಿಶ್ವಕಪ್ನಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ 33ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಕುಸಲ್ ಮೆಂಡಿಸ್ ನೇತೃತ್ವದ ಶ್ರೀಲಂಕಾ (India vs Sri Lanka) ಮುಖಾಮುಖಿ ಆಗಲಿದೆ.
2 / 7
ಈ ಬಾರಿಯ ಟೂರ್ನಿಯಲ್ಲಿ ಆಡಿರುವ ಆರು ಪಂದ್ಯಗಳ ಪೈಕಿ ಎಲ್ಲ ಆರು ಮ್ಯಾಚ್ಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಏಳನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇಂದಿನ ಮ್ಯಾಚ್ ಗೆದ್ದರೆ ಅಧಿಕೃತವಾಗಿ ಸೆಮಿ ಫೈನಲ್ಗೆ ಏರಲಿದೆ. ಈ ಪಂದ್ಯಕ್ಕೂ ಮುನ್ನ ರೋಹಿತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
3 / 7
ಪತ್ರಿಕಾಗೋಷ್ಠಿಯಲ್ಲಿ, ಲಂಕಾ ವಿರುದ್ಧ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಡುತ್ತಾರ ಅಥವಾ ಇಲ್ಲವೇ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಭಾರತೀಯ ನಾಯಕ ರೋಹಿತ್ ಶರ್ಮಾ “ಎಲ್ಲಾ ರೀತಿಯ ಸಂಯೋಜನೆ ಸಾಧ್ಯವಿದೆ. ಅಗತ್ಯವಿದ್ದರೆ ಮೂವರು ಸ್ಪಿನ್ನರ್‌ಗಳು ಮತ್ತು ಇಬ್ಬರು ಸೀಮರ್‌ಗಳೊಂದಿಗೆ ಆಡುತ್ತೇವೆ ಎಂದು ಹೇಳಿದ್ದಾರೆ.
4 / 7
ಮೂರು ಸ್ಪಿನ್ನರ್‌ಗಳನ್ನು ಆಡಿಸಿದರೆ ಪ್ಲೇಯಿಂಗ್ XI ನಲ್ಲಿ ಹಾರ್ದಿಕ್ ಪಾಂಡ್ಯ ಅಗತ್ಯವಿದೆಯೇ ಎಂದು ರೋಹಿತ್‌ಗೆ ಕೇಳಲಾಗಿದೆ. ಇದಕ್ಕೆ ರೋಹಿತ್ ತನ್ನ ಆಯ್ಕೆಗಳನ್ನು ಮುಕ್ತವಾಗಿರಿಸುತ್ತೇನೆ. ಶ್ರೀಲಂಕಾ ವಿರುದ್ಧ ಮೂರು ಸ್ಪಿನ್ನರ್‌ಗಳನ್ನು ಆಡುವ ಸಾಧ್ಯತೆ ಇದೆ ಎಂದು ಹೇಳಿದರು.
5 / 7
ವಿಶ್ವಕಪ್‌ನ ಸೆಮಿಫೈನಲ್‌ಗೆ ಬಹುತೇಕ ತಲುಪಿರುವುದರಿಂದ ತಂಡವು ಕೆಲವು ಆಟಗಾರರಿಗೆ ವಿಶ್ರಾಂತಿ ನೀಡುತ್ತಿದೆಯೇ ಎಂದು ಕೇಳಿದಾಗ, “ ಈ ಸಮಯದಲ್ಲಿ ಅವರು ಉತ್ತಮ ಲಯದಲ್ಲಿದ್ದಾರೆ. ಅವರು ವಿಶ್ರಾಂತಿ ಪಡೆಯಲು ಬಯಸುವುದಿಲ್ಲ. ದೇಹ ಚೆನ್ನಾಗಿದೆ. ಇದು ನಾನು ಎಲ್ಲಾ ಬೌಲರ್‌ಗಳಿಂದ ಪಡೆದ ಪ್ರತಿಕ್ರಿಯೆಯಾಗಿದೆ. ಅವರು ಕಣಕ್ಕಿಳಿಯಲು ಬಯಸಿದ್ದಾರೆ,'' ಎಂದು ರೋಹಿತ್ ಹೇಳಿದ್ದಾರೆ.
6 / 7
ಹಾರ್ದಿಕ್ ಪಾಂಡ್ಯ ಇಂಜುರಿ ಬಗ್ಗೆ ಮಾಹಿತಿ ನೀಡಿರುವ ರೋಹಿತ್, ಅವರು ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಲಭ್ಯವಿಲ್ಲ. ಆದರೆ ನಾವು ಪ್ರತಿದಿನ ಅವರನ್ನು ಗಮನಿಸುತ್ತಿದ್ದೇವೆ. ಆದಷ್ಟು ಬೇಗ ಅವರು ಫೀಲ್ಡ್ಗೆ ಬರುತ್ತಾರೆ ಎಂದು ಭಾವಿಸುತ್ತೇವೆ. ಸದ್ಯಕ್ಕೆ ಇಷ್ಟೇ ಹೇಳಬಲ್ಲೆ'' ಎಂದು ರೋಹಿತ್ ಹೇಳಿದ್ದಾರೆ.
7 / 7
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್. , ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.