IND vs SA, ICC World Cup: ಕೊಹ್ಲಿಯನ್ನು ಸ್ವಾರ್ಥಿ ಎಂದವರಿಗೆ ಪಂದ್ಯದ ಬಳಿಕ ರೋಹಿತ್ ಶರ್ಮಾ ಕೊಟ್ಟ ಉತ್ತರವೇನು ನೋಡಿ

|

Updated on: Nov 06, 2023 | 7:13 AM

Rohit Sharma in post match presentation, India vs South Africa: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಟದ ಕುರಿತು ಕೆಲವು ಮಾತುಗಳನ್ನಾಡಿದ್ದಾರೆ. ಇಲ್ಲಿದೆ ನೋಡಿ ಹಿಟ್​ಮ್ಯಾನ್ ಕೊಟ್ಟ ಸ್ಟೇಟ್​ಮೆಂಟ್.

1 / 7
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾನುವಾರ ಆಯೋಜಿಸಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ರಣರೋಚಕವಾಗಿರುತ್ತೆ ಎಂದು ನಂಬಲಾಗಿತ್ತು. ಆದರೆ, ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಗಿದ್ದೇ ಬೇರೆ. ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಟೀಮ್ ಇಂಡಿಯಾ 326 ರನ್ ಕಲೆಹಾಕಿದರೆ, ಆಫ್ರಿಕಾ 83 ರನ್​ಗೆ ಸರ್ವಪತನ ಕಂಡಿತು.

2 / 7
ಈ ಪಂದ್ಯದಲ್ಲಿ ಕೊಹ್ಲಿ 121 ಎಸೆತಗಳಲ್ಲಿ 10 ಫೋರ್​ನೊಂದಿಗೆ ಅಜೇಯ 101 ರನ್ ಗಳಿಸಿದರು. ಈ ಮೂಲಕ ಹುಟ್ಟುಹಬ್ಬದ ದಿನ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದರು. ಜೊತೆಗೆ ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್ ಕಂಡು ನೆಟ್ಟಿಗರು ಸ್ವಾರ್ಥಿ, ತನ್ನ ಶತಕಕ್ಕಾಗಿ ಆಡಿದರು ಎಂದು ಹೇಳಿದರು. ಆದರೆ, ಇದಕ್ಕೆ ನಾಯಕ ರೋಹಿತ್ ಶರ್ಮಾ ಉತ್ತರ ನೀಡಿದ್ದಾರೆ.

3 / 7
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಪಿಚ್ ತುಂಬಾನೆ ವಿಭಿನ್ನವಾಗಿತ್ತು. ಬ್ಯಾಟಿಂಗ್ ಮಾಡಲು ತುಂಬಾ ಕಷ್ಟವಾಗುತ್ತಿತ್ತು. ಇಂತಹ ಪಿಚ್​ನಲ್ಲಿ ಆಡಲು ವಿರಾಟ್ ಕೊಹ್ಲಿ ಬೇಕಾಗಿತ್ತು. ರನ್ ಗಳಿಸಲು ಕಷ್ಟವಾದ ಪಿಚ್​ನಲ್ಲಿ ಕೊಹ್ಲಿ ಇಲ್ಲಿನ ಮರ್ಮವನ್ನು ಅರಿತು ಚೆನ್ನಾಗಿ ಆಡಿದರು ಎಂದು ರೋಹಿತ್ ಹೇಳಿದ್ದಾರೆ.

4 / 7
ಕಳೆದ ಮೂರು ಪಂದ್ಯಗಳಲ್ಲಿ ನಾವು ಹೇಗೆ ಆಡಿದ್ದೇವೆ ಎಂಬುದನ್ನು ನೋಡಿದರೆ, ನಾವು ಈ ಬಾರಿ ಇನ್ನಷ್ಟು ಉತ್ತಮವಾಗಿದ್ದೇವೆ. ಇಂಗ್ಲೆಂಡ್ ವಿರುದ್ಧ ನಾವು ಒತ್ತಡಕ್ಕೆ ಸಿಲುಕಿದ್ದೇವೆ. ಆದರೆ, ಈಗ ನಾವು ಒಳ್ಳೆಯ ಅಂಕಗಳನ್ನು ಪಡೆದುಕೊಂಡಿದ್ದೇವೆ. ನಮ್ಮ ಸೀಮರ್‌ಗಳು ಉತ್ತಮ ಕೆಲಸವನ್ನು ಮಾಡಿದರು ಎಂಬುದು ರೋಹಿತ್ ಶರ್ಮಾ ಮಾತು.

5 / 7
ಶ್ರೇಯಸ್ ಅಯ್ಯರ್ ತಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಅವರಿಂದ ಇನ್ನಷ್ಟು ಈರೀತಿಯ ಆಟ ಬರಬೇಕು. ಕಳೆದ ಎರಡು ಪಂದ್ಯಗಳು ಅಯ್ಯರ್ ಅವರ ಸಾಮರ್ಥ್ಯ ಏನೆಂಬುದನ್ನು ಕಂಡಿದ್ದೇವೆ. ಗಿಲ್ ಮತ್ತು ನಾನು ಈಗ ಹೆಚ್ಚಿನ ಸಮಯದಿಂದ ಒಟ್ಟಿಗೆ ಬ್ಯಾಟಿಂಗ್ ಮಾಡುತ್ತಿದ್ದೇವೆ. ನಾವು ಯಾವುದೇ ರೀತಿಯ ಪ್ಲಾನ್ ಮಾಡುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಆಡುತ್ತೇವೆ- ರೋಹಿತ್ ಶರ್ಮಾ.

6 / 7
ಜಡೇಜಾ ನಮ್ಮೊಂದಿಗೆ ಒಳ್ಳೆಯ ಬಾಂಡಿಂಗ್ ಹೊಂದಿದ್ದಾರೆ. ಇಂದು ಅವರು ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ಡೆತ್ ಓವರ್​ನಲ್ಲಿ ಬ್ಯಾಟಿಂಗ್ ಮಾಡಿ, ನಂತರ ವಿಕೆಟ್ ಪಡೆದರು. ಅವರಿಗೆ ತನ್ನ ಪಾತ್ರ ಏನು ಎಂಬುದು ತಿಳಿದಿದೆ. ನಾವು ಅವರಿಂದ ಏನನ್ನು ನಿರೀಕ್ಷಿಸುತ್ತೇವೆ ಎಂಬುದು ಅವರಿಗೆ ತಿಳಿದಿದೆ. ಒಂದೆರಡು ದೊಡ್ಡ ಆಟಗಳು ಬರಲಿವೆ. ಆದರೆ, ನಾವು ಏನನ್ನೂ ಬದಲಾಯಿಸಲು ಬಯಸುವುದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

7 / 7
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೊಹ್ಲಿ (101) ಹಾಗೂ ಶ್ರೇಯಸ್ ಅಯ್ಯರ್ (77) ಬ್ಯಾಟಿಂಗ್ ನೆರವಿನಿಂದ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಸಿಡಿಸಿತು. ಆದರೆ, ಆಫ್ರಿಕಾನ್ನರು ಕೇವಲ 83 ರನ್​ಗಳಿಗೆ ಆಲೌಟ್ ಆದರು. ರವೀಂದ್ರ ಜಡೇಜಾ 5 ವಿಕೆಟ್ ಕಿತ್ತು ಮಿಂಚಿದರು.