ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ; ತೂಕ ಇಳಿಸಲು ಮುಂದಾದ ರೋಹಿತ್ ಶರ್ಮಾ; ಫೋಟೋ ನೋಡಿ

Edited By:

Updated on: Nov 19, 2022 | 7:13 PM

Rohit Sharma: ಸದ್ಯ ವಿಶ್ರಾಂತಿಯಲ್ಲಿರುವ ರೋಹಿತ್ ಬಾಂಗ್ಲಾದೇಶ ಪ್ರವಾಸದೊಂದಿಗೆ ತಂಡಕ್ಕೆ ಮರಳಲಿದ್ದಾರೆ. ಅಲ್ಲಿ ಟೀಂ ಇಂಡಿಯಾ ಆತಿಥೇಯ ಬಾಂಗ್ಲಾದೇಶದೊಂದಿಗೆ 3 ಏಕದಿನ ಮತ್ತು 2 ಟೆಸ್ಟ್ ಸರಣಿಗಳನ್ನು ಆಡಲಿದೆ.

1 / 5
ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ ನಂತರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳೊಂದಿಗೆ ಪ್ರವಾಸಕ್ಕೆ ಹಾರಿದ್ದಾರೆ. ಈ ವೇಳೆ ರಾಹುಲ್ ಕೂಡ ಸಾಮಾಜಿಕ ಜಾಲತಾಣಗಳಿಂದ ದೂರ ಸರಿದಿದ್ದಾರೆ.

2 / 5

ಅದೇ ಸಮಯದಲ್ಲಿ, ರೋಹಿತ್ ಶರ್ಮಾ ಈ ದಿನಗಳಲ್ಲಿ ತಮ್ಮ ಫಿಟ್ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಬಲಿಷ್ಠ ಪುನರಾಗಮನಕ್ಕೆ ಸಿದ್ಧತೆ ನಡೆಸಿದ್ದಾರೆ.

3 / 5

ವಾಸ್ತವವಾಗಿ, ನವೆಂಬರ್ 10 ರಂದು ಟೀಂ ಇಂಡಿಯಾ ಇಂಗ್ಲೆಂಡ್ ಎದುರು 10 ವಿಕೆಟ್‌ಗಳಿಂದ ಸೋತು ವಿಶ್ವಕಪ್‌ನಿಂದ ಹೊರಹೋಗಿತ್ತು. ಇದಾದ ನಂತರ ತಂಡದ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಜೊತೆಗೆ ನಾಯಕ ರೋಹಿತ್ ತೂಕ ಹೆಚ್ಚಾದ ಕಾರಣ ಮಾಜಿ ಆಟಗಾರರು ಅವರನ್ನು ಟೀಕಿಸಿದ್ದರು.

4 / 5

5 / 5

ಸದ್ಯ ವಿಶ್ರಾಂತಿಯಲ್ಲಿರುವ ರೋಹಿತ್ ಬಾಂಗ್ಲಾದೇಶ ಪ್ರವಾಸದೊಂದಿಗೆ ತಂಡಕ್ಕೆ ಮರಳಲಿದ್ದಾರೆ. ಅಲ್ಲಿ ಟೀಂ ಇಂಡಿಯಾ ಆತಿಥೇಯ ಬಾಂಗ್ಲಾದೇಶದೊಂದಿಗೆ 3 ಏಕದಿನ ಮತ್ತು 2 ಟೆಸ್ಟ್ ಸರಣಿಗಳನ್ನು ಆಡಲಿದೆ.

Published On - 7:13 pm, Sat, 19 November 22

Loading...
Unable to load recommendations.
Follow Us