IND vs SA: 15 ರನ್‌ಗಳಿಗೆ 6 ವಿಕೆಟ್​..! ಸಿರಾಜ್‌ ದಾಳಿಗೆ ಶರಣಾದ ದಕ್ಷಿಣ ಆಫ್ರಿಕಾ

Updated on: Jan 03, 2024 | 4:54 PM

Mohammed Siraj: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಡೀ ದಕ್ಷಿಣ ಆಫ್ರಿಕಾ ತಂಡ ಕೇವಲ 55 ರನ್‌ಗಳಿಗೆ ಆಲೌಟ್ ಆಗಿದೆ. ಭಾರತದ ಪರ ಮಾರಕ ಬೌಲಿಂಗ್ ಮಾಡಿದ ಸಿರಾಜ್ 6 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.

1 / 7
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಡೀ ದಕ್ಷಿಣ ಆಫ್ರಿಕಾ ತಂಡ ಕೇವಲ 55 ರನ್‌ಗಳಿಗೆ ಆಲೌಟ್ ಆಗಿದೆ. ಭಾರತದ ಪರ ಮಾರಕ ಬೌಲಿಂಗ್ ಮಾಡಿದ ಸಿರಾಜ್ 6 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.

2 / 7
ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ತಂಡದ ಸ್ಕೋರ್ ಕೇವಲ 5 ರನ್ ಆಗಿದ್ದಾಗ ಆಡಮ್ ಮಾರ್ಕ್ರಾಮ್ ಎರಡು ರನ್ ಗಳಿಸಿ ಔಟಾದರು.

3 / 7
ನಾಯಕ ಡೀನ್ ಎಲ್ಗರ್ ಕೂಡ ನಾಲ್ಕು ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಆಗ ತಂಡದ ಸ್ಕೋರ್ ಕೇವಲ ಎಂಟು ರನ್ ಆಗಿತ್ತು. ಮೊಹಮ್ಮದ್ ಸಿರಾಜ್ ಈ ಇಬ್ಬರೂ ಆರಂಭಿಕರನ್ನು ಬಲಿಪಶುಗಳನ್ನಾಗಿ ಮಾಡಿದರು. ಇದರ ನಂತರ ಜಸ್ಪ್ರೀತ್ ಬುಮ್ರಾ ಮೂರನೇ ವಿಕೆಟ್‌ಗೆ ಮೂರು ರನ್‌ಗಳಿಗೆ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿದರು.

4 / 7
ಟೋನಿ ಡಿ ಜೋರ್ಜಿ ಅವರ ವಿಕೆಟ್ ಪಡೆಯುವ ಮೂಲಕ ತಮ್ಮ ಮೂರನೇ ವಿಕೆಟ್ ಪೂರೈಸಿದ ಸಿರಾಜ್ ಒಂದು ತುದಿಯಿಂದ ಸತತ ಒಂಬತ್ತು ಓವರ್ ಬೌಲ್ ಮಾಡಿ ಆರು ವಿಕೆಟ್ ಪಡೆದರು. ಈ ಅವಧಿಯಲ್ಲಿ ಅವರು ಕೇವಲ 15 ರನ್ ನೀಡಿದರು.

5 / 7
4ನೇ ವಿಕೆಟ್ ರೂಪದಲ್ಲಿ 12 ರನ್ ಗಳಿಸಿದ್ದ ಡೇವಿಡ್ ಬೆಡಿಂಗ್ಹ್ಯಾಮ್ ವಿಕೆಟ್ ಪಡೆದ ಸಿರಾಜ್, 5ನೇ ವಿಕೆಟ್ ರೂಪದಲ್ಲಿ  15 ರನ್ ಬಾರಿಸಿದ್ದ ಕೈಲ್ ವೆರ್ರೆನ್ನೆ ಅವರಿಗೆ ಪೆವಿಲಿಯನ್‌ ದಾರಿ ತೋರಿಸಿದರು. ನಂತರ ಬಂದ ಮಾರ್ಕೋ ಯಾನ್ಸನ್ ಖಾತೆಯನ್ನು ತೆರೆಯದೆ ಸಿರಾಜ್​ಗೆ ಬಲಿಯಾದರು.

6 / 7
ಮೊಹಮ್ಮದ್ ಸಿರಾಜ್ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದದ್ದು ಇದು ಮೂರನೇ ಬಾರಿ. ಈ ಹಿಂದೆ ಕೇವಲ ಐದು ವಿಕೆಟ್‌ಗಳನ್ನು ಪಡೆದಿದ್ದ ಅವರು ಈ ಬಾರಿ ನೇರವಾಗಿ ಆರಕ್ಕೆ ತಲುಪಿದ್ದಾರೆ. ಇದು ಸಿರಾಜ್ ಅವರ ಕಿರು ಟೆಸ್ಟ್ ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರದರ್ಶನವಾಗಿದೆ.

7 / 7
ಇದಕ್ಕೂ ಮೊದಲು, 2021 ರಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿರಾಜ್ 73 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದಿದ್ದರು. ಅದೇ ವರ್ಷ ಅಂದರೆ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 60 ರನ್ ಗಳಿಗೆ 5 ವಿಕೆಟ್ ಕಬಳಿಸಿದ್ದರು.