SA vs IND: ‘ಈತ ಅಬ್ಬರಿಸಿದರೆ ಆಫ್ರಿಕಾ ನೆಲದಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲುವುದು ಖಚಿತ’; ಜಾಕ್ವೆಸ್ ಕಾಲಿಸ್

Updated on: Dec 11, 2023 | 10:53 AM

SA vs IND: ಟೆಸ್ಟ್ ಸರಣಿ ಗೆಲುವಿಗೆ ಸಂಬಂದಿಸಿದಂತೆ ದೊಡ್ಡ ಹೇಳಿಕೆ ನೀಡಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಲ್​ರೌಂಡರ್ ಜಾಕ್ವೆಸ್ ಕಾಲಿಸ್, ಭಾರತ ನಮ್ಮ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆಂದರೆ ಅದು ವಿರಾಟ್ ಕೊಹ್ಲಿ ಆಟದ ಮೇಲೆ ನಿಂತಿದೆ ಎಂದಿದ್ದಾರೆ.

1 / 8
ಭಾರತ ಕ್ರಿಕೆಟ್ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಇಲ್ಲಿ ಉಭಯ ತಂಡಗಳ ನಡುವೆ ಟಿ20 ಮತ್ತು ಏಕದಿನ ಸರಣಿಯ ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲ್ಲಿದೆ. ಈ ಸರಣಿ ಟೀಂ ಇಂಡಿಯಾಕ್ಕೆ ಬಹಳ ಮುಖ್ಯವಾಗಿದೆ. ಅದಕ್ಕೆ ಕಾರಣವೂ ಇದೆ.

ಭಾರತ ಕ್ರಿಕೆಟ್ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಇಲ್ಲಿ ಉಭಯ ತಂಡಗಳ ನಡುವೆ ಟಿ20 ಮತ್ತು ಏಕದಿನ ಸರಣಿಯ ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲ್ಲಿದೆ. ಈ ಸರಣಿ ಟೀಂ ಇಂಡಿಯಾಕ್ಕೆ ಬಹಳ ಮುಖ್ಯವಾಗಿದೆ. ಅದಕ್ಕೆ ಕಾರಣವೂ ಇದೆ.

2 / 8

ವಾಸ್ತವವಾಗಿ ಟೀಂ ಇಂಡಿಯಾ ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾದ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರೋಹಿತ್ ಶರ್ಮಾ ನಾಯಕತ್ವದ ಟೆಸ್ಟ್ ಪಡೆ ಈ ಬಾರಿ ಈ ಹಳೆಯ ಇತಿಹಾಸವನ್ನು ಬದಲಾಯಿಸಲು ಪ್ರಯತ್ನಿಸಲಿದೆ.

3 / 8

ಟೆಸ್ಟ್ ಸರಣಿ ಗೆಲುವಿಗೆ ಸಂಬಂದಿಸಿದಂತೆ ದೊಡ್ಡ ಹೇಳಿಕೆ ನೀಡಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಲ್​ರೌಂಡರ್ ಜಾಕ್ವೆಸ್ ಕಾಲಿಸ್, ಭಾರತ ನಮ್ಮ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆಂದರೆ ಅದು ವಿರಾಟ್ ಕೊಹ್ಲಿ ಆಟದ ಮೇಲೆ ನಿಂತಿದೆ ಎಂದಿದ್ದಾರೆ.

4 / 8

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಈ ಬಗ್ಗೆ ಮಾತನಾಡಿದ ಕಾಲಿಸ್, ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರ ಆಟ ಭಾರತದ ಸರಣಿ ಗೆಲುವಿನ ಕನಸಿನಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಭಾರತವು ದಕ್ಷಿಣ ಆಫ್ರಿಕಾವನ್ನು ಸೋಲಿಸಲು ಬಯಸಿದರೆ, ವಿರಾಟ್ ಕೊಹ್ಲಿ ಈ ಟೆಸ್ಟ್ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಮತ್ತು ರನ್ ಗಳಿಸಬೇಕು ಎಂದು ಕಾಲಿಸ್ ಅಭಿಪ್ರಾಯಪಟ್ಟಿದ್ದಾರೆ.

5 / 8

ವಿರಾಟ್ ಕೊಹ್ಲಿ ದೊಡ್ಡ ಆಟಗಾರ ಮತ್ತು ಅವರು ಇಡೀ ವಿಶ್ವದ ಯಾವುದೇ ಪಿಚ್‌ನಲ್ಲಿ ರನ್ ಗಳಿಸಬಹುದು ಎಂದು ಜಾಕ್ವೆಸ್ ಕಾಲಿಸ್ ಹೇಳಿದ್ದಾರೆ. ‘ಕೊಹ್ಲಿ ಇಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ ಮತ್ತು ಇಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿಯೂ ಯಶಸ್ವಿ ಕೂಡ ಆಗಿದ್ದಾರೆ.

6 / 8

ವಿರಾಟ್ ಅವರ ಅನುಭವ ಯುವ ಆಟಗಾರರಿಗೆ ಸಾಕಷ್ಟು ಸಹಾಯ ಮಾಡಬಹುದಾಗಿದೆ. ತಮ್ಮ ಅನುಭವದ ಆಧಾರದ ಮೇಲೆ ಆಟಗಾರರಿಗೆ ಇಲ್ಲಿನ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎಂದು ಅವರು ಮನವರಿಕೆ ಮಾಡಿಕೊಡಬಹುದಾಗಿದೆ ಎಂದಿದ್ದಾರೆ.

7 / 8

ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. 2023 ರ ಏಕದಿನ ವಿಶ್ವಕಪ್‌ನಲ್ಲಿ ಆಡಿದ 11 ಇನ್ನಿಂಗ್ಸ್‌ಗಳಲ್ಲಿ 765 ರನ್ ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು ಮತ್ತು ಏಕದಿನ ವಿಶ್ವಕಪ್‌ನ ಒಂದೇ ಸೀಸನ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸಹ ಸೃಷ್ಟಿಸಿದರು.

8 / 8

ವಿರಾಟ್‌ನ ಈ ಫಾರ್ಮ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಹೆಚ್ಚು ಉಪಯುಕ್ತವಾಗಲಿದೆ. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ನಲ್ಲಿ ಕೊಹ್ಲಿ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಅವರು ಆಫ್ರಿಕಾ ನೆಲದಲ್ಲಿ ಆಡಿರುವ 14 ಇನ್ನಿಂಗ್ಸ್‌ಗಳಲ್ಲಿ 51.36 ಸರಾಸರಿಯಲ್ಲಿ 719 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 3 ಅರ್ಧ ಶತಕಗಳು ಸೇರಿವೆ.

Loading...
Unable to load recommendations.
Follow Us