SA20 Auction: ಅತ್ಯಧಿಕ ಮೊತ್ತಕ್ಕೆ ಹರಾಜಾಗಿ ಎಲ್ಲಾ ದಾಖಲೆಗಳನ್ನು ಮುರಿದ ಡೆವಾಲ್ಡ್ ಬ್ರೇವಿಸ್

Updated on: Sep 09, 2025 | 9:01 PM

SA20 Auction: ನಾಲ್ಕನೇ ಆವೃತ್ತಿಯ SA20 ಲೀಗ್ ಹರಾಜಿನಲ್ಲಿ ಡೆವಾಲ್ಡ್ ಬ್ರೆವಿಸ್ ಅವರನ್ನು ದಾಖಲೆಯ ಮೊತ್ತಕ್ಕೆ ಪ್ರಿಟೋರಿಯಾ ಕ್ಯಾಪಿಟಲ್ಸ್ ಖರೀದಿಸಿದೆ. ಐಡೆನ್ ಮಾರ್ಕ್ರಾಮ್ ಮತ್ತು ಕೇಶವ್ ಮಹಾರಾಜ್ ಅವರೂ ಭರ್ಜರಿ ಬೆಲೆಗೆ ಮಾರಾಟವಾದರು. ಬ್ರೆವಿಸ್ ಅವರ ಖರೀದಿ SA20 ಇತಿಹಾಸದಲ್ಲಿ ಅತಿ ದೊಡ್ಡ ಮಾರಾಟವಾಗಿದೆ. ಕ್ವಿಂಟನ್ ಡಿ ಕಾಕ್ ಕೂಡ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಸೇರಿದರು.

1 / 7
ನಾಲ್ಕನೇ ಆವೃತ್ತಿಯ ಎಸ್​ಎ20 ಲೀಗ್​ನ ಹರಾಜು ಇಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಿತು. ಈ ಹರಾಜಿನಲ್ಲೊ ನಿರೀಕ್ಷೆಯಂತೆಯೇ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರರ ಮೇಲೆ ಹಣದ ಮಳೆಯೇ ಸುರಿಯಿತು. ಅದರಲ್ಲೂ ಕೆಲವೇ ದಿನಗಳ ಹಿಂದೆ ಸಿಡಿಲಬ್ಬರದ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದ ಡೆವಾಲ್ಡ್ ಬ್ರೆವಿಸ್ ಅವರನ್ನು ದಾಖಲೆಯ ಮೊತ್ತಕ್ಕೆ ಖರೀದಿಸಲಾಗಿದೆ.

2 / 7
ಈ ಮೊದಲೇ ನಿರೀಕ್ಷಿಸಿದಂತೆ 22 ವರ್ಷದ ಡೆವಾಲ್ಡ್ ಬ್ರೆವಿಸ್‌ಗೆ ಹೆಚ್ಚಿನ ಬೇಡಿಕೆಯಿತ್ತು. ಬ್ರೆವಿಸ್ ಇತ್ತೀಚೆಗೆ ಐಪಿಎಲ್ ಮತ್ತು ಆಸ್ಟ್ರೇಲಿಯಾದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು, ಇದರಿಂದಾಗಿ ಎಲ್ಲಾ ಫ್ರಾಂಚೈಸಿಗಳು ಅವರ ಮೇಲೆ ಭಾರಿ ಬಿಡ್ ಮಾಡಿದ್ದವು. ಅಂತಿಮವಾಗಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಬ್ರೆವಿಸ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಡೆವಾಲ್ಡ್ ಬ್ರೆವಿಸ್ ಈ ಲೀಗ್‌ನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

3 / 7
ಡೆವಾಲ್ಡ್ ಬ್ರೆವಿಸ್‌ಗಾಗಿ ಹರಾಜಿನಲ್ಲಿ ಫ್ರಾಂಚೈಸಿಗಳ ನಡುವೆ ಭರ್ಜರಿ ಹೋರಾಟ ನಡೆಯಿತು. ಆದಾಗ್ಯೂ, ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಬಿಡ್ ಅನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಡೆವಾಲ್ಡ್ ಬ್ರೆವಿಸ್‌ರನ್ನು ತಮ್ಮ ತಂಡದ ಭಾಗವಾಗಿಸಲು ಪ್ರಿಟೋರಿಯಾ ಕ್ಯಾಪಿಟಲ್ಸ್ 16 ಮಿಲಿಯನ್ ರಾಂಡ್‌ಗಳನ್ನು ಅಂದರೆ 8.06 ಕೋಟಿ ರೂ.ಗಳನ್ನು ಖರ್ಚು ಮಾಡಿತು. ಇದರೊಂದಿಗೆ ಬ್ರೆವಿಸ್ ಈ ಲೀಗ್‌ನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲಲೆ ಬರೆದರು.

4 / 7
ಡೆವಾಲ್ಡ್ ಬ್ರೆವಿಸ್‌ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಟಿ20 ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಕೂಡ ಈ ಹರಾಜಿನಲ್ಲಿ ಇತಿಹಾಸ ನಿರ್ಮಿಸಿದರು. ಡರ್ಬನ್ ಸೂಪರ್ ಜೈಂಟ್ಸ್ ಅವರನ್ನು 7 ಕೋಟಿ ರೂ.ಗಳ ದಾಖಲೆಯ ಮೊತ್ತಕ್ಕೆ ಖರೀದಿಸಿತು, ಇದು SA20 ನಲ್ಲಿ ಇದುವರೆಗಿನ ಎರಡನೇ ಅತ್ಯಧಿಕ ಬಿಡ್ ಆಗಿದೆ.

5 / 7
 ಈ ಹಿಂದೆ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಪರ ಆಡಿದ ಮಾರ್ಕ್ರಾಮ್ ತಂಡವನ್ನು ಎರಡು ಬಾರಿ ಚಾಂಪಿಯನ್ ಮಾಡಿದ್ದರು. ಆದರೆ ಈ ಬಾರಿ ಹರಾಜಿನಲ್ಲಿ ಭಾಗವಹಿಸಲು ನಿರ್ಧರಿಸಿದ್ದ ಮಾರ್ಕ್ರಾಮ್ ಮುಂದಿನ ಆವೃತ್ತಿಯಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡದ ಪರ ಬ್ಯಾಟ್ ಬೀಸಲಿದ್ದಾರೆ.

6 / 7
ಏಕದಿನ ಕ್ರಿಕೆಟ್‌ನ ನಂಬರ್-1 ಬೌಲರ್ ಎನಿಸಿಕೊಂಡಿರುವ ಕೇಶವ್ ಮಹಾರಾಜ್ ಕೂಡ ಈ ಬಾರಿ ಪ್ರಿಟೋರಿಯಾ ಕ್ಯಾಪಿಟಲ್ಸ್‌ನ ಭಾಗವಾದರು. ಕೇಶವ್ ಮಹಾರಾಜ್ ಅವರನ್ನು ಪ್ರಿಟೋರಿಯಾ ಕ್ಯಾಪಿಟಲ್ಸ್ 1.7 ಮಿಲಿಯನ್ ರಾಂಡ್‌ಗೆ ಖರೀದಿಸಿತು.

7 / 7
ಇವರಂತೆಯೇ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್‌ಗಾಗಿ ಹರಾಜಿನಲ್ಲಿ ತಂಡಗಳ ನಡುವೆ ಸಾಕಷ್ಟು ಪೈಪೋಟಿ ನಡೆಯಿತು. ಅಂತಿಮವಾಗಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಅವರನ್ನು 2.4 ಮಿಲಿಯನ್ ರಾಂಡ್‌ಗೆ ಖರೀದಿಸಿತು.

Published On - 8:57 pm, Tue, 9 September 25