Sachin Tendulkar Birthday: ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್ ಎಷ್ಟು ಕೋಟಿ ಒಡೆಯ ಗೊತ್ತಾ?

Updated on: Apr 24, 2023 | 5:07 PM

Sachin Tendulkar Birthday: ಭಾರತ ಕ್ರಿಕೆಟ್​ನ ಚಕ್ರವರ್ತಿ ಸಚಿನ್ ತೆಂಡೂಲ್ಕರ್ ಅವರ ಬಳಿ ಕೋಟಿಗಟ್ಟಲೆ ಸಂಪತ್ತು ಇದೆ. 16ನೇ ವಯಸ್ಸಿನಲ್ಲಿ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಅವರು ಇಂದು ಸುಮಾರು 1350 ಕೋಟಿ ಆಸ್ತಿ ಹೊಂದಿದ್ದಾರೆ.

1 / 5
ಇಂದು ಕ್ರಿಕೆಟ್ ಲೋಕದ ರಾಜ ಎಂದೇ ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜನ್ಮದಿನ. ವಿಶ್ವ ಕ್ರಿಕೆಟ್​ನಲ್ಲಿ ನೂರಾರು ದಾಖಲೆ ಸೃಷ್ಟಿಸಿರುವ ಸಚಿನ್, ಆದಾಯದ ವಿಚಾರದಲ್ಲೂ ಮುಂದಿದ್ದಾರೆ. ಸದ್ಯ ಕ್ರಿಕೆಟ್​ ಪ್ರಂಪಚಕ್ಕೆ ವಿದಾಯ ಹೇಳಿ ವರ್ಷಗಳೇ ಕಳೆದಿದ್ದರೂ ಸಚಿನ್ ಅವರ ಖಜಾನೆಯ ಗಾತ್ರ ಮಾತ್ರ ಹೆಚ್ಚುತ್ತಲೆ ಇದೆ.

ಇಂದು ಕ್ರಿಕೆಟ್ ಲೋಕದ ರಾಜ ಎಂದೇ ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜನ್ಮದಿನ. ವಿಶ್ವ ಕ್ರಿಕೆಟ್​ನಲ್ಲಿ ನೂರಾರು ದಾಖಲೆ ಸೃಷ್ಟಿಸಿರುವ ಸಚಿನ್, ಆದಾಯದ ವಿಚಾರದಲ್ಲೂ ಮುಂದಿದ್ದಾರೆ. ಸದ್ಯ ಕ್ರಿಕೆಟ್​ ಪ್ರಂಪಚಕ್ಕೆ ವಿದಾಯ ಹೇಳಿ ವರ್ಷಗಳೇ ಕಳೆದಿದ್ದರೂ ಸಚಿನ್ ಅವರ ಖಜಾನೆಯ ಗಾತ್ರ ಮಾತ್ರ ಹೆಚ್ಚುತ್ತಲೆ ಇದೆ.

2 / 5

ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಚಿನ್ ತೆಂಡೂಲ್ಕರ್​ಗೆ ದುಬಾರಿ ಕಾರುಗಳೆಂದರೆ ಬಲು ಅಚ್ಚುಮೆಚ್ಚು. ತಮ್ಮ ಗ್ಯಾರೇಜ್​ನಲ್ಲಿ ಬಹು ಐಷಾರಾಮಿ ವಾಹನಗಳನ್ನು ಹೊಂದಿರುವ ಸಚಿನ್ ಅವರ ಬಳಿ ಎಷ್ಟು ಆಸ್ತಿ ಇದೆ ಎಂಬುದನ್ನು ತಿಳಿದರೆ ನೀವೇ ಶಾಕ್ ಆಗ್ತೀರ..!

3 / 5

ಭಾರತ ಕ್ರಿಕೆಟ್​ನ ಚಕ್ರವರ್ತಿ ಸಚಿನ್ ತೆಂಡೂಲ್ಕರ್ ಅವರ ಬಳಿ ಕೋಟಿಗಟ್ಟಲೆ ಸಂಪತ್ತು ಇದೆ. 16ನೇ ವಯಸ್ಸಿನಲ್ಲಿ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಅವರು ಇಂದು ಸುಮಾರು 1350 ಕೋಟಿ ಆಸ್ತಿ ಹೊಂದಿದ್ದಾರೆ.

4 / 5

ಮುಂಬೈನ ಬಾಂದ್ರಾದಲ್ಲಿ ಸಚಿನ್ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. 2007 ರಲ್ಲಿ ಖರೀದಿಸಿದ ಈ ಬಂಗಲೆ ಮೌಲ್ಯ ಆಗಲೇ ಸುಮಾರು 39 ಕೋಟಿ ಇತ್ತು. ಸದ್ಯ ಅವರ ಬಂಗಲೆಯ ಬೆಲೆ ಸುಮಾರು 100 ಕೋಟಿ ರೂಪಾಯಿ. ಇದಲ್ಲದೆ, ಸಚಿನ್ ಕೇರಳದಲ್ಲಿ ಸುಮಾರು 78 ಕೋಟಿ ಮೌಲ್ಯದ ಮತ್ತೊಂದು ಅದ್ದೂರಿ ಬಂಗಲೆಯನ್ನು ಹೊಂದಿದ್ದಾರೆ.

5 / 5

ಸಚಿನ್ ಬಳಿ ಬಂಗಲೆಯಲ್ಲದೆ, ಹಲವು ಐಷಾರಾಮಿ ವಾಹನಗಳ ಇವೆ. ಸಚಿನ್ ಸದ್ಯ 20 ಕೋಟಿ ಬೆಲೆಯ ಕಾರನ್ನು ಹೆಚ್ಚಾಗಿ ಬಳಸುತ್ತಾರೆ. ಸಚಿನ್ ಅವರ ಐಷಾರಾಮಿ ವಾಹನಗಳಲ್ಲಿ ಫೆರಾರಿ 360 ಮಾಡೆನ್, ಬಿಎಂಡಬ್ಲ್ಯೂ ಐ8, ಬಿಎಂಡಬ್ಲ್ಯೂ 7 ಸಿರೀಸ್, 750Li M ಸ್ಪೋರ್ಟ್, ನಿಸ್ಸಾನ್ GT-R, ಆಡಿ ಕ್ಯೂ7, ಬಿಎಂಡಬ್ಲ್ಯೂ ಎಂ6 ಗ್ರ್ಯಾನ್ ಕೂಪೆ ಮತ್ತು ಬಿಎಂಡಬ್ಲ್ಯೂ ಎಂ5 30 ಜಹ್ರೆ ಸೇರಿವೆ.

Published On - 5:07 pm, Mon, 24 April 23

Loading...
Unable to load recommendations.
Follow Us