IPL 2021: ಹ್ಯಾಟ್ರಿಕ್ ಟ್ರೋಫಿಗೆ ಮುಂಬೈ ಇಂಡಿಯನ್ಸ್​ ‘ಮಾಸ್ಟರ್ ಬ್ಲಾಸ್ಟರ್’ ಪ್ಲ್ಯಾನ್

| Updated By: ಝಾಹಿರ್ ಯೂಸುಫ್

Updated on: Sep 12, 2021 | 6:58 PM

Mumbai indians: 2019, 2020 ರಲ್ಲಿ ಸತತ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಮುಂಬೈ ಇಂಡಿಯನ್ಸ್​ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಹ್ಯಾಟ್ರಿಕ್ ಟ್ರೋಫಿ ಗೆದ್ದ ದಾಖಲೆ ಬರೆಯುವ ವಿಶ್ವಾಸದಲ್ಲಿದೆ.

1 / 5
ಇನ್ನು ಟಾಪ್​-4ನಲ್ಲಿ ಕಾಣಿಸಿಕೊಳ್ಳಲಿರುವ ಮತ್ತೊಂದು ತಂಡವೆಂದರೆ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್​. ಮುಂಬೈ ಕೂಡ ಪ್ಲೇ ಆಫ್​ ಆಡಲಿದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

2 / 5
ಪ್ರಸ್ತುತ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್​ ಗೆಲುವಿನೊಂದಿಗೆ ದ್ವಿತಿಯಾರ್ಧ ಆರಂಭಿಸುವ ಇರಾದೆಯಲ್ಲಿದೆ. ಇದಕ್ಕಾಗಿ ತಂಡಕ್ಕೆ ಮಾಸ್ಟರ್ ಬ್ಲಾಸ್ಟರ್​ ಅನ್ನು ಸಹ ಕರೆಸಿಕೊಂಡಿದೆ.

3 / 5
 ಹೌದು, ಮುಂಬೈ ಇಂಡಿಯನ್ಸ್​ ಬಳಗದಲ್ಲಿ ಈ ಬಾರಿ ಸಚಿನ್ ತೆಂಡೂಲ್ಕರ್ ಕೂಡ ಇರಲಿರುವುದು ವಿಶೇಷ. 2008 ರಿಂದ 2011 ರವರೆಗೆ ತಂಡದ ನಾಯಕರಾಗಿದ್ದ  2013 ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಾಗ ತಂಡದ ಭಾಗವಾಗಿದ್ದರು. ಆ ಬಳಿಕ ಸಚಿನ್ ಮುಂಬೈ ಇಂಡಿಯನ್ಸ್​ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು.

4 / 5
ಇದಾಗ್ಯೂ ಕಳೆದ ಸೀಸನ್​ನಲ್ಲಿ ಸಚಿನ್ ತೆಂಡೂಲ್ಕರ್ ತಂಡದ ಜೊತೆ ಕಾಣಿಸಿಕೊಂಡಿರಲಿಲ್ಲ. ಹಾಗೆಯೇ ಮೊದಲಾರ್ಧದಿಂದಲೂ ಸಚಿನ್ ದೂರವೇ ಉಳಿದಿದ್ದರು. ಇದೀಗ ಯುಎಇನಲ್ಲಿ ನಡೆಯಲಿರುವ ದ್ವಿತಿಯಾರ್ಧದ ವೇಳೆ ಮಾಸ್ಟರ್ ಬ್ಲಾಸ್ಟರ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸ್ಪಷ್ಟಪಡಿಸಿದೆ.

5 / 5
ಸಚಿನ್ ತೆಂಡೂಲ್ಕರ್ ಅವರ ಲಗೇಜ್ ಬ್ಯಾಗ್​ನ ಚಿತ್ರವೊಂದನ್ನು ಮುಂಬೈ ಇಂಡಿಯನ್ಸ್​ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಸೈಟ್​ಗಳಲ್ಲಿ ಹಂಚಿಕೊಂಡಿದ್ದು, ಅದರಂತೆ ಯುಎಇನಲ್ಲಿ ಮಾಸ್ಟರ್ ಬ್ಲಾಸ್ಟರ್ ರೋಹಿತ್ ಪಡೆಯ ಮೆಂಟರ್ ಆಗಿರಲಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಇರುವುದು ವಿಶೇಷ. ಒಟ್ಟಿನಲ್ಲಿ 2019, 2020 ರಲ್ಲಿ ಸತತ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಮುಂಬೈ ಇಂಡಿಯನ್ಸ್​ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಹ್ಯಾಟ್ರಿಕ್ ಟ್ರೋಫಿ ಗೆದ್ದ ದಾಖಲೆ ಬರೆಯುವ ವಿಶ್ವಾಸದಲ್ಲಿದೆ.