‘ಮಿರ್ಜಾ ಮಲಿಕ್ ಶೋ’ ಪ್ರಚಾರಕ್ಕಾಗಿ ಡಿವೋರ್ಸ್​ ನಾಟಕವಾಡಿದ್ರಾ ಸಾನಿಯಾ- ಶೋಯೆಬ್..?

Edited By:

Updated on: Nov 13, 2022 | 1:02 PM

Sania Shoaib Divorce: ಈ ಕಾರ್ಯಕ್ರಮದ ಹೆಸರು 'ಮಿರ್ಜಾ ಮಲಿಕ್ ಶೋ' ಆಗಿದ್ದು, ಇದರಲ್ಲಿ ದಂಪತಿಗಳಿಬ್ಬರು ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಪಾಕಿಸ್ತಾನದ ಉರ್ದುಫ್ಲಿಕ್ಸ್‌ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್​ನಲ್ಲಿ ಪ್ರಸಾರವಾಗಲಿದೆ.

1 / 5
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವೈಯಕ್ತಿಕ ಬದುಕಿನಲ್ಲಿ ಬಿರುಕು ಉಂಟಾಗಿದ್ದು, ಈ ದಂಪತಿಗಳು ವಿಚ್ಛೇದನ ಪಡೆಯಲ್ಲಿದ್ದಾರೆ ಎಂಬ ಸುದ್ದಿ ಎರಡೂ ದೇಶಗಳಲ್ಲೂ ಸಖತ್ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ ಎರಡೂ ದೇಶಗಳ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುತ್ತಿವೆ. ಆದರೆ ಈ ನಡುವೆ ಈ ಜೋಡಿಗೆ ಸಂಬಂಧಿಸಿದ ಹೊಸ ಸುದ್ದಿಯೊಂದು ಹೊರಬಿದ್ದಿದೆ.

2 / 5

ವಿಚ್ಛೇದನದ ಸುದ್ದಿಯ ನಡುವೆ, ಈ ಜೋಡಿಯ ಹೊಸ ಶೋ ಪಾಕಿಸ್ತಾನದಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಹೆಸರು 'ಮಿರ್ಜಾ ಮಲಿಕ್ ಶೋ' ಆಗಿದ್ದು, ಇದರಲ್ಲಿ ದಂಪತಿಗಳಿಬ್ಬರು ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಪಾಕಿಸ್ತಾನದ ಉರ್ದುಫ್ಲಿಕ್ಸ್‌ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್​ನಲ್ಲಿ ಪ್ರಸಾರವಾಗಲಿದೆ.

3 / 5

ಈ ಶೋ ಬಗ್ಗೆ ಸುದ್ದಿ ಹರಿದಾಡಲಾರಂಭಿಸಿದ ನಂತರ ಅಭಿಮಾನಿಗಳು ದಂಪತಿಗಳಿಬ್ಬರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಈ ಕಾರ್ಯಕ್ರಮದ ಟಿಆರ್‌ಪಿ ಹೆಚ್ಚಿಸುವ ಸಲುವಾಗಿ ಉದ್ದೇಶಪೂರ್ವಕವಾಗಿಯೇ ಈ ದಂಪತಿಗಳು ವಿಚ್ಛೇದನದ ನಾಟಕವನ್ನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದರೆ ಸಾನಿಯಾ ಸದ್ಯ ಪಾಕಿಸ್ತಾನದಲ್ಲಿ ಇಲ್ಲ, ಹಾಗಾಗಿ ಕಾರ್ಯಕ್ರಮದ ಚಿತ್ರೀಕರಣ ಈಗಾಗಲೇ ಮುಗಿದಿದೆ ಎಂಬುದು ಸ್ಪಷ್ಟವಾಗಿದೆ.

4 / 5

ದಂಪತಿಗಳಿಬ್ಬರು ನಟಿಸಿರುವ ಕೆಲವು ಶೋಗಳು ಮತ್ತು ಬ್ರ್ಯಾಂಡ್‌ಗಳ ಕಾನೂನು ತೊಡಕುಗಳಿಂದಾಗಿ ಸಾನಿಯಾ ಮತ್ತು ಶೋಯೆಬ್ ವಿಚ್ಛೇದನವನ್ನು ಖಚಿತಪಡಿಸುತ್ತಿಲ್ಲ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ.

5 / 5

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010 ರಲ್ಲಿ ವಿವಾಹವಾಗಿದ್ದರು. ಆ ಸಮಯದಲ್ಲಿ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಸಾನಿಯಾ ಕೂಡ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈ ಜೋಡಿ ಕಳೆದ 12 ವರ್ಷಗಳಿಂದ ಒಟ್ಟಿಗೆ ಇದ್ದರು. ಹಾಗೆಯೇ 2018 ರಲ್ಲಿ ಇಬ್ಬರೂ ಗಂಡು ಮಗುವಿಗೆ ಪೋಷಕರಾದರು.

Published On - 1:02 pm, Sun, 13 November 22

Loading...
Unable to load recommendations.
Follow Us