Sarfaraz Khan: 9 ಶತಕ, 5 ಅರ್ಧಶತಕ: ದೇಶೀಯ ಅಂಗಳದಲ್ಲಿ ಸರ್ಫರಾಜ್ ಕಿಂಗ್..!
TV9 Web | Updated By: ಝಾಹಿರ್ ಯೂಸುಫ್
Updated on:
Oct 02, 2022 | 12:05 PM
Sarfaraz Khan: ಯಾವುದೇ ತಂಡದ ನಿರ್ಣಾಯಕ ಪಂದ್ಯದಲ್ಲಿ ಸರ್ಫರಾಜ್ ಖಾನ್ ಮಹತ್ವದ ಪಾತ್ರವಹಿಸುತ್ತಿರುವುದು ಸ್ಪಷ್ಟ. ಹೀಗಾಗಿಯೇ ಭರ್ಜರಿ ಫಾರ್ಮ್ನಲ್ಲಿರುವ ಯುವ ಬ್ಯಾಟ್ಸ್ಮನ್ಗೆ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ನೀಡಬೇಕೆಂಬ ಕೂಗುಗಳು ಕೇಳಿ ಬರುತ್ತಿದೆ.
1 / 5
ಭಾರತದ ಯುವ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಸದ್ಯ ದೇಶೀಯ ಅಂಗಳದ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್. ಏಕೆಂದರೆ ಸರ್ಫರಾಜ್ ಬ್ಯಾಟ್ನಿಂದ ಬ್ಯಾಕ್ ಟು ಬ್ಯಾಕ್ ಶತಕಗಳು ಮೂಡಿಬರುತ್ತಿವೆ. ಶತಕ ಬರದಿದ್ದರೆ ಅರ್ಧಶತಕಗಳು ಸಿಡಿಯುತ್ತಿವೆ.
2 / 5
ಅಂದರೆ ಕಳೆದ 24 ಇನಿಂಗ್ಸ್ಗಳಲ್ಲಿ ಸರ್ಫರಾಜ್ ಖಾನ್ ಬರೋಬ್ಬರಿ 9 ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಮೂಲಕ ಬರೋಬ್ಬರಿ 2,200 ರನ್ ಕಲೆಹಾಕಿದ್ದಾರೆ.
3 / 5
ಅಷ್ಟೇ ಯಾಕೆ, ಕ್ರಿಕೆಟ್ ಪಿತಾಮಹಾ ಎಂದು ಕರೆಯಲ್ಪಡುವ ಡಾನ್ ಬ್ರಾಡ್ಮನ್ ಅವರ ನಂತರದ ಸ್ಥಾನವನ್ನೂ ಕೂಡ ಸರ್ಫರಾಜ್ ಅಲಂಕರಿಸಿದ್ದಾರೆ. ಅಂದರೆ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಕನಿಷ್ಠ 2 ಸಾವಿರ ರನ್ ಬಾರಿಸಿ ಅತ್ಯುತ್ತಮ ಬ್ಯಾಟಿಂಗ್ ಅವರೇಜ್ ಹೊಂದಿರುವ ಆಟಗಾರರಲ್ಲಿ ಆಸ್ಟ್ರೇಲಿಯಾದ ದಂತಕಥೆ ಬ್ರಾಡ್ಮನ್ 95.14 ಸರಾಸರಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 81.49* ಸರಾಸರಿಯೊಂದಿಗೆ ಸರ್ಫರಾಜ್ ಖಾನ್ 2ನೇ ಸ್ಥಾನಕ್ಕೇರಿದ್ದಾರೆ.
4 / 5
ಇಲ್ಲಿ ಮತ್ತೊಂದು ವಿಶೇಷ ಎಂದರೆ ನಿರ್ಣಾಯಕ ಪಂದ್ಯಗಳಲ್ಲಿ ಸರ್ಫರಾಜ್ ಖಾನ್ ಅವರ ಬ್ಯಾಟಿಂಗ್. ಅಂದರೆ ಈ ಬಾರಿಯ ರಣಜಿ ಫೈನಲ್ ಪಂದ್ಯದಲ್ಲಿ 134 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಇನ್ನು ದುಲೀಪ್ ಟ್ರೋಫಿ ಫೈನಲ್ನಲ್ಲೂ 127 ರನ್ ಬಾರಿಸಿ ವೆಸ್ಟ್ ಝೋನ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
5 / 5
ಇದೀಗ ಇರಾನಿ ಕಪ್ನಲ್ಲೂ 138 ರನ್ ಬಾರಿಸಿ ಅಬ್ಬರಿಸಿದ್ದಾರೆ. ಅಂದರೆ ಯಾವುದೇ ತಂಡದ ನಿರ್ಣಾಯಕ ಪಂದ್ಯದಲ್ಲಿ ಸರ್ಫರಾಜ್ ಖಾನ್ ಮಹತ್ವದ ಪಾತ್ರವಹಿಸುತ್ತಿರುವುದು ಸ್ಪಷ್ಟ. ಹೀಗಾಗಿಯೇ ಭರ್ಜರಿ ಫಾರ್ಮ್ನಲ್ಲಿರುವ ಯುವ ಬ್ಯಾಟ್ಸ್ಮನ್ಗೆ ಟೆಸ್ಟ್ನಲ್ಲಿ ಅವಕಾಶ ನೀಡಬೇಕೆಂಬ ಕೂಗುಗಳು ಕೇಳಿ ಬರುತ್ತಿದೆ. ಅದರಂತೆ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯಲಿದ್ದಾರಾ ಕಾದು ನೋಡಬೇಕಿದೆ.