T20 Record: 11 ಸಿಕ್ಸ್​, 4 ಫೋರ್: ಟಿ20 ಬ್ಲಾಸ್ಟ್​ನಲ್ಲಿ ಅತೀ ವೇಗದ ಶತಕದ ದಾಖಲೆ

Edited By:

Updated on: May 27, 2023 | 3:57 PM

Sean Abbott Century: ಕೇನ್ ರಿಚರ್ಡ್ಸನ್ ಅವರ ಓವರ್​ಗಳಲ್ಲಿ ಮೂರು ಸಿಕ್ಸ್ ಹಾಗೂ ಮೂರು ಫೋರ್​ ಬಾರಿಸುವ ಮೂಲಕ ಒಟ್ಟು 30 ರನ್​ ಚಚ್ಚಿದರು.

1 / 7
T20 Blast 2023: ಲಂಡನ್​​ನ ಓವಲ್​ ಮೈದಾನದಲ್ಲಿ ನಡೆದ ಟಿ20 ಬ್ಲಾಸ್ಟ್​ ಲೀಗ್​ನಲ್ಲಿ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಶಾನ್ ಅಬಾಟ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಂಟ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು.

T20 Blast 2023: ಲಂಡನ್​​ನ ಓವಲ್​ ಮೈದಾನದಲ್ಲಿ ನಡೆದ ಟಿ20 ಬ್ಲಾಸ್ಟ್​ ಲೀಗ್​ನಲ್ಲಿ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಶಾನ್ ಅಬಾಟ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಂಟ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು.

2 / 7

ಅದರಂತೆ ಮೊದಲು ಬ್ಯಾಟ್ ಮಾಡಿದ ಸರ್ರೆ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ವಿಲ್ ಜಾಕ್ಸ್ (17), ಲೌರಿ ಇವನ್ಸ್ (11) ಬೇಗನೆ ಔಟಾದರೆ, ಇದರ ಬೆನ್ನಲ್ಲೇ ಸ್ಯಾಮ್ ಕರನ್ (15) ಹಾಗೂ ಟಾಮ್ ಕರನ್ (16) ಕೂಡ ವಿಕೆಟ್ ಒಪ್ಪಿಸಿದ್ದರು.

3 / 7

ಈ ಹಂತದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾನ್ ಅಬಾಟ್ ಅಕ್ಷರಶಃ ಅಬ್ಬರಿಸಿದರು. ಕ್ರೀಸ್​ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ಆಟಗಾರ ಕೆಂಟ್ ಬೌಲರ್​ಗಳ ಬೆಂಡೆತ್ತಿದ್ದರು.

4 / 7

ಅದರಲ್ಲೂ ಕೇನ್ ರಿಚರ್ಡ್ಸನ್ ಅವರ ಓವರ್​ಗಳಲ್ಲಿ ಮೂರು ಸಿಕ್ಸ್ ಹಾಗೂ ಮೂರು ಫೋರ್​ ಬಾರಿಸುವ ಮೂಲಕ ಒಟ್ಟು 30 ರನ್​ ಚಚ್ಚಿದರು. ಅಲ್ಲದೆ 11 ಸಿಕ್ಸ್ ಹಾಗೂ 4 ಫೋರ್​ನೊಂದಿಗೆ ತೂಫಾನ್ ಬ್ಯಾಟಿಂಗ್ ನಡೆಸಿ ಕೇವಲ 34 ಎಸೆತಗಳಲ್ಲಿ ಶಾನ್ ಅಬಾಟ್ ಭರ್ಜರಿ ಶತಕ ಪೂರೈಸಿದರು.

5 / 7

ಈ ಸಿಡಿಲಬ್ಬರದ ಶತಕದೊಂದಿಗೆ ಟಿ20 ಬ್ಲಾಸ್ಟ್​​ನಲ್ಲಿ ಅತೀ ವೇಗದ ಶತಕ ಬಾರಿಸಿದ ದಾಖಲೆಯನ್ನು ಶಾನ್ ಅಬಾಟ್ ತಮ್ಮದಾಗಿಸಿಕೊಂಡರು. ವಿಶೇಷ ಎಂದರೆ 19 ವರ್ಷಗಳ ಹಿಂದೆ ಕೆಂಟ್ ತಂಡದ ಪರ ಕಣಕ್ಕಿಳಿದ ಆ್ಯಂಡ್ರೊ ಸೈಮಂಡ್ಸ್ ಕೇವಲ 34 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಆಸ್ಟ್ರೇಲಿಯಾ ಆಟಗಾರನೇ ಈ ದಾಖಲೆಯನ್ನು ಸರಿಗಟ್ಟಿ ಟಿ20 ಬ್ಲಾಸ್ಟ್​​ನಲ್ಲಿ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.

6 / 7

ಇನ್ನು ಈ ಪಂದ್ಯದಲ್ಲಿ ಒಟ್ಟು 41 ಎಸೆತಗಳನ್ನು ಎದುರಿಸಿದ ಶಾನ್ ಅಬಾಟ್ ಅಜೇಯ 110 ರನ್ ಬಾರಿಸಿದರು. ಈ ಶತಕದ ನೆರವಿನಿಂದ ಸರ್ರೆ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 223 ರನ್​ ಕಲೆಹಾಕಿತು.

7 / 7

224 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಕೆಂಟ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಸರ್ರೆ ತಂಡವು 41 ರನ್​ಗಳ ಭರ್ಜರಿ ಜಯ ಸಾಧಿಸಿತು. ಇತ್ತ ತೂಫಾನ್ ಶತಕದೊಂದಿಗೆ ಮಿಂಚಿದ್ದ ಶಾನ್ ಅಬಾಟ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Loading...
Unable to load recommendations.
Follow Us