IND vs SL, ICC World Cup: ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಎರಡು ಬದಲಾವಣೆ: ಇಲ್ಲಿದೆ ಭಾರತದ ಪ್ಲೇಯಿಂಗ್ XI
India Playing XI vs Sri Lanka, ICC Cricket World Cup: ಶ್ರೀಲಂಕಾ ವಿರುದ್ಧದ ಈ ಮಹತ್ವದ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಶ್ರೇಯಸ್ ಅಯ್ಯರ್ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟಬರುತ್ತಿಲ್ಲ. ಬಹುಮುಖ್ಯವಾಗಿರುವ ನಂಬರ್ 4 ಕ್ರಮಾಂಕದಲ್ಲಿ ಅಯ್ಯರ್ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಇವರನ್ನು ಕೈಬಿಡುವ ಸಂಭವವಿದೆ.
1 / 7
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ. ಲಂಕಾಕ್ಕೆ ಸೆಮಿ ಫೈನಲ್ಗೇರಲು ಕೂದಲೆಳೆಯಷ್ಟು ಅವಕಾಶವಿದೆ. ಅತ್ತ ಟೀಮ್ ಇಂಡಿಯಾ ಇಂದಿನ ಮ್ಯಾಚ್ ಗೆದ್ದರೆ ಸೆಮೀಸ್ ಪ್ರವೇಶಿಸಲಿದೆ.
2 / 7
ಶ್ರೀಲಂಕಾ ವಿರುದ್ಧದ ಈ ಮಹತ್ವದ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್ ಬದಲು ಭಾರತದ ಆಡುವ ಬಳಗಕ್ಕೆ ಬಂದ ಮೊಹಮ್ಮದ್ ಶಮಿ ಮತ್ತು ಸೂರ್ಯಕುಮಾರ್ ಯಾದವ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇವರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಖಚಿತವಾಗಿದೆ.
3 / 7
ಆದಾಗ್ಯೂ, ಶ್ರೇಯಸ್ ಅಯ್ಯರ್ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟಬರುತ್ತಿಲ್ಲ. ಬಹುಮುಖ್ಯವಾಗಿರುವ ನಂಬರ್ 4 ಕ್ರಮಾಂಕದಲ್ಲಿ ಅಯ್ಯರ್ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಇವರನ್ನು ಕೈಬಿಡುವ ಸಂಭವವಿದೆ. ಇವರ ಜಾಗಕ್ಕೆ ಇಶಾನ್ ಕಿಶನ್ ಬಂದರೆ ಅಚ್ಚರಿ ಪಡಬೇಕಿಲ್ಲ.
4 / 7
ಅಂತೆಯೆ ವಾಂಖೆಡೆ ಪಿಚ್ ಪಂದ್ಯದ ಆರಂಭದಲ್ಲಿ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಮತ್ತೊಬ್ಬ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಕರೆತರುವ ಸಾಧ್ಯತೆ. ಆದರೆ, ಇವರು ಯಾರ ಜಾಗದಲ್ಲಿ ಆಡುತ್ತಾರೆ ಎಂಬುದು ಕುತೂಹಲ.
5 / 7
ಉಳಿದಂತೆ ಗಿಲ್ ಅವರು ರೋಹಿತ್ ಶರ್ಮಾ ಅವರೊಂದಿಗೆ ಓಪನಿಂಗ್ ಮಾಡಲಿದ್ದಾರೆ. ವಿರಾಟ್ ಕೊಹ್ಲಿ 3 ನೇ ಸ್ಥಾನದಲ್ಲಿದ್ದಾರೆ. ಕಿಶನ್ ಅವರನ್ನು ಸೇರಿಸಿಕೊಂಡರೆ, ಕೆಎಲ್ ರಾಹುಲ್ 4 ನೇ ಸ್ಥಾನದಲ್ಲಿ ಆಡಬಹುದು. ಸೂರ್ಯಕುಮಾರ್ ಯಾದವ್ 6 ನೇ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ವೇಗಿಗಳಾಗಿ ಬುಮ್ರಾ, ಸಿರಾಜ್, ಸ್ಪಿನ್ನರ್ ಕುಲ್ದೀಪ್ ಯಾದವ್ ಹಾಗೂ ಜಡೇಜಾ ಉತ್ತಮ ಫಾರ್ಮ್ನಲ್ಲಿದ್ದಾರೆ.
6 / 7
ವಾಂಖೆಡೆ ಕ್ರೀಡಾಂಗಣದಲ್ಲಿ ಪುರುಷರ ODIಗಳಲ್ಲಿ ತಂಡವೊಂದು ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 245 ಆಗಿದೆ. ಇಲ್ಲಿ ಆಡಿದ 30 ODI ಪಂದ್ಯಗಳಲ್ಲಿ 16 ಬಾರಿ ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ಗೆದ್ದಿವೆ. ಆದ್ದರಿಂದ ಟಾಸ್ ದೊಡ್ಡ ವ್ಯತ್ಯಾಸ ಉಂಟುಮಾಡುವ ಸಾಧ್ಯತೆಯಿಲ್ಲ.
7 / 7
ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್/ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್/ಆರ್. ಅಶ್ವಿನ್.