ಸ್ಪೋಟಕ ಡಬಲ್ ಸೆಂಚುರಿ ಸಿಡಿಸಿದ ಶ್ರೇಯಸ್ ಅಯ್ಯರ್

|

Updated on: Nov 07, 2024 | 11:11 AM

Shreyas Iyer: ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ರಣಜಿ ಟೂರ್ನಿಯಲ್ಲಿ ಭರ್ಜರಿ ಡಬಲ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಇದು ಅಯ್ಯರ್ ಅವರ ಮೂರನೇ ಪ್ರಥಮ ದರ್ಜೆ ದ್ವಿಶತಕ ಎಂಬುದು ವಿಶೇಷ. ಈ ದ್ವಿಶತಕದೊಂದಿಗೆ ಅಯ್ಯರ್ ಮತ್ತೆ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

1 / 5
ಮುಂಬೈನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮುಂಬೈ ಮತ್ತು ಒಡಿಶಾ ತಂಡಗಳು ಮುಖಾಮುಖಿಯಾಗಿವೆ.

2 / 5
ಈ ಪಂದ್ಯದಲ್ಲಿ ಟಾಸ್ ಗೆದ್ದ ಒಡಿಶಾ ತಂಡವು ಮುಂಬೈ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದೆ. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡಕ್ಕೆ ಅಂಗ್​ಕ್ರಿಶ್ ರಘುವಂಶಿ (92) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಿದ್ಧೇಶ್ ಲಾಡ್ ಶತಕ ಸಿಡಿಸಿದರೆ, 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ ಸ್ಪೋಟಕ ಇನಿಂಗ್ಸ್ ಆಡಿದರು.

3 / 5
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಅಯ್ಯರ್ ಒಡಿಶಾ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಈ ಮೂಲಕ ಮೊದಲ ದಿನದಾಟದಲ್ಲೇ ಶತಕ ಬಾರಿಸಿದ್ದರು. 152 ರನ್​ಗಳೊಂದಿಗೆ ದ್ವಿತೀಯ ದಿನದಾಟ ಆರಂಭಿಸಿದ ಶ್ರೇಯಸ್ ಅಯ್ಯರ್ ಕೇವಲ 200 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು.

4 / 5
ಇದೀಗ ಡಬಲ್ ಸೆಂಚುರಿಯೊಂದಿಗೆ ಬ್ಯಾಟಿಂಗ್ ಮುಂದುವರೆಸಿರುವ ಅಯ್ಯರ್ 209 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 22 ಫೋರ್​ಗಳೊಂದಿಗೆ ಅಜೇಯ 207 ರನ್​ ಗಳಿಸಿದ್ದಾರೆ. ಅತ್ತ ಮುಂಬೈ ತಂಡವು 107 ಓವರ್​ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 464 ರನ್​ಗಳೊಂದಿಗೆ ಇನಿಂಗ್ಸ್ ಮುಂದುವರೆಸಿದೆ.

5 / 5
ಟೀಮ್ ಇಂಡಿಯಾ ಪರ 14 ಟೆಸ್ಟ್ ಪಂದ್ಯಗಳನ್ನಾಡಿರುವ ಶ್ರೇಯಸ್ ಅಯ್ಯರ್ ಒಂದು ಶತಕದೊಂದಿಗೆ ಒಟ್ಟು 811 ರನ್ ಕಲೆಹಾಕಿದ್ದಾರೆ. ಇದೀಗ ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಅಯ್ಯರ್ ದೇಶೀಯ ಅಂಗಳದಲ್ಲಿ ಡಬಲ್ ಸೆಂಚುರಿ ಸಿಡಿಸಿ ಮತ್ತೆ ಟೀಮ್ ಇಂಡಿಯಾದ ಕದ ತಟ್ಟಿದ್ದಾರೆ. ಇದೇ ಫಾರ್ಮ್​ ಮುಂದುವರೆಸಿದರೆ ಭಾರತ ತಂಡಕ್ಕೆ ಅಯ್ಯರ್​ಗೆ ಮತ್ತೆ ಚಾನ್ಸ್ ಸಿಗಬಹುದು.