Don Bradman: 1934 ರ ಆಶಸ್ ಸರಣಿಯಲ್ಲಿ ಡಾನ್ ಬ್ರಾಡ್ಮನ್ ಬಳಸಿದ್ದ ಬ್ಯಾಟ್ ಹರಾಜಿಗಿದೆ! ಬೆಲೆ ಎಷ್ಟು ಗೊತ್ತಾ?
TV9 Web | Updated By: ಪೃಥ್ವಿಶಂಕರ
Updated on:
Dec 08, 2021 | 6:27 PM
Don Bradman: ಆ ಬ್ಯಾಟ್ನಲ್ಲಿ ಅವರು ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ 304 ರನ್ ಗಳಿಸಿದರು. ಈ ಮೂಲಕ ಟೆಸ್ಟ್‌ನಲ್ಲಿ ಎರಡು ತ್ರಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.
1 / 4
ಆಶಸ್ 2021 ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಪ್ರಾರಂಭವಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಈ ಟೆಸ್ಟ್ ಸರಣಿಯು ಸರ್ ಡಾನ್ ಬ್ರಾಡ್ಮನ್ ಅವರ ಚರ್ಚೆ ಮತ್ತು ಸುದ್ದಿಯಿಲ್ಲದೆ ಅಪೂರ್ಣವಾಗಿ ಉಳಿಯುತ್ತದೆ. ಈ ಬಾರಿ ಬ್ರಾಡ್ಮನ್ ಅವರ ಒಂದು ಬ್ಯಾಟ್ ಬಗ್ಗೆ ಚರ್ಚೆಯಿದೆ. ಅವರು 87 ವರ್ಷಗಳ ಹಿಂದೆ ಆಶಸ್ನಲ್ಲಿ ತಮ್ಮ ಬ್ಯಾಟ್ನಿಂದ ದಾಖಲೆಯನ್ನು ಮಾಡಿದರು. ಈಗ ಈ ಐತಿಹಾಸಿಕ ಬ್ಯಾಟ್ ಅನ್ನು ಈಗ ಹರಾಜಿಗೆ ಇಡಲಾಗಿದೆ.
2 / 4
ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಬ್ರಾಡ್‌ಮನ್ 1934 ರ ಆಶಸ್ ಸರಣಿಯ ಸಮಯದಲ್ಲಿ ಈ ಬ್ಯಾಟ್ ಅನ್ನು ಬಳಸಿದರು. ಆ ಬ್ಯಾಟ್ನಲ್ಲಿ ಅವರು ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ 304 ರನ್ ಗಳಿಸಿದರು. ಈ ಮೂಲಕ ಟೆಸ್ಟ್‌ನಲ್ಲಿ ಎರಡು ತ್ರಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. 4 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ 334 ರನ್‌ಗಳ ಇನಿಂಗ್ಸ್ ಆಡಿದ್ದರು. ಆರಂಭಿಕ ಬಿಲ್ ಪೊನ್ಸ್‌ಫೋರ್ಡ್ ಜೊತೆಗಿನ 451 ರನ್ ಜೊತೆಯಾಟದಲ್ಲಿ ಬ್ರಾಡ್‌ಮನ್ ಕೂಡ ಇದೇ ಬ್ಯಾಟ್ ಅನ್ನು ಬಳಸಿದರು.
3 / 4
1934 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಎಲ್ಲಾ ಐದು ಟೆಸ್ಟ್ ಪಂದ್ಯಗಳಲ್ಲಿ ಬ್ರಾಡ್‌ಮನ್ ಈ ಬ್ಯಾಟ್ ಅನ್ನು ಬಳಸಿದರು. ಈ ಸರಣಿಯಲ್ಲಿ ಅವರು 758 ರನ್ ಗಳಿಸಿದರು. ಈ ಬ್ಯಾಟ್ ಬಳಸಿ, ಹೆಡಿಂಗ್ಲಿಯಲ್ಲಿ 304 ಮತ್ತು ಓವಲ್‌ನಲ್ಲಿ 244 ರನ್ ಗಳಿಸಲಾಯಿತು. ಬ್ರಾಡ್ಮನ್ ತಮ್ಮ ವೃತ್ತಿಜೀವನದಲ್ಲಿ 52 ಟೆಸ್ಟ್ ಪಂದ್ಯಗಳಲ್ಲಿ 99.94 ರ ಸರಾಸರಿಯಲ್ಲಿ 6996 ರನ್ ಗಳಿಸಿದರು.
4 / 4
ಬ್ಯಾಟ್ ಅನ್ನು 1999 ರಿಂದ NSW ಸದರ್ನ್ ಹೈಲ್ಯಾಂಡ್ಸ್‌ನ ಬೋರಾಲ್‌ನಲ್ಲಿರುವ ಬ್ರಾಡ್‌ಮನ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ. ABC.net.au ವರದಿಯ ಪ್ರಕಾರ, ಬ್ಯಾಟ್‌ಗೆ ಯಾವುದೇ ಮೀಸಲು ಬೆಲೆಯನ್ನು ಇರಿಸಲಾಗಿಲ್ಲ. ಮತ್ತೊಂದು ಬ್ರಾಡ್‌ಮನ್ ಬ್ಯಾಟ್ ಅನ್ನು 2018 ರಲ್ಲಿ 110,000 ಆಸ್ಟ್ರೇಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಲಾಯಿತು.