ಮತ್ತೊಂದು ಐಸಿಸಿ ಪ್ರಶಸ್ತಿಗೆ ಸ್ಮೃತಿ ಮಂಧಾನ ನಾಮನಿರ್ದೇಶನ

Updated on: Nov 06, 2025 | 9:32 PM

ICC Player of the Month: ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರನ್ನು ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ವಿಶ್ವಕಪ್‌ನಲ್ಲಿ 434 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದ ಮಂಧಾನ, ಈ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ ಮತ್ತು ಆಸ್ಟ್ರೇಲಿಯಾದ ಆಶ್ ಗಾರ್ಡ್ನರ್ ಜೊತೆ ಸ್ಪರ್ಧೆಯಲ್ಲಿದ್ದಾರೆ. ಭಾರತದ ಚೊಚ್ಚಲ ಗೆಲುವಿನಲ್ಲಿ ಮಂಧಾನ ಅವರ ಕೊಡುಗೆ ಪ್ರಮುಖವಾಗಿದೆ.

1 / 6
ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದಿರುವ ಭಾರತ ಮಹಿಳಾ ತಂಡ ಸಂತಸದ ಅಲೆಯಲ್ಲಿ ತೇಲುತ್ತಿದೆ. ತಂಡದ ಈ ಸಾಧನೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ತಂಡದ ಉಪನಾಯಕಿ ಸ್ಮೃತಿ ಮಂಧಾನಗೆ ಮತ್ತೊಂದು ಐಸಿಸಿ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಇಡೀ ವಿಶ್ವಕಪ್​ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಸ್ಮೃತಿ ಮಂಧಾನ ಅವರನ್ನು ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

2 / 6
ವಿಶ್ವಕಪ್​​ನಲ್ಲಿ ಎಲ್ಲಾ ಪಂದ್ಯಗಳನ್ನು ಆಡಿದ ಸ್ಮೃತಿ ಮಂಧಾನ ಒಟ್ಟಾರೇ 434 ರನ್ ಗಳಿಸಿದರು. ಅಲ್ಲದೆ ಫೈನಲ್ ಪಂದ್ಯದಲ್ಲಿ ಸ್ಮೃತಿ ನೀಡಿದ ಉತ್ತಮ ಆರಂಭ ತಂಡವನ್ನು ಬಲಿಷ್ಠ ಸ್ಥಿತಿಗೆ ಕೊಂಡೊಯ್ಯಿತು. ಅಂತಿಮವಾಗಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ಮೊಟ್ಟ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು.

3 / 6
ಅಕ್ಟೋಬರ್ ತಿಂಗಳ ಆಟಗಾರ್ತಿ ಪ್ರಶಸ್ತಿಗೆ  ಸ್ಮೃತಿ ಮಂಧಾನ ಅವರಲ್ಲದೆ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್ ಮತ್ತು ಆಸ್ಟ್ರೇಲಿಯಾದ ಆಶ್ ಗಾರ್ಡ್ನರ್ ಕೂಡ ನಾಮನಿರ್ದೇಶನಗೊಂಡಿದ್ದಾರೆ. ಈ ಮೂವರು ಏಕದಿನ ವಿಶ್ವಕಪ್​ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಹೀಗಾಗಿ ಈ ಮೂವರಲ್ಲಿ ಯಾರಿಗೆ ಈ ಪ್ರಶಸ್ತಿ ಲಭಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

4 / 6
ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಂದಾನ ಆಸ್ಟ್ರೇಲಿಯಾ ವಿರುದ್ಧ 80 ರನ್ ಬಾರಿಸಿದರೆ, ಆ ನಂತರ ಇಂಗ್ಲೆಂಡ್ ವಿರುದ್ಧ 88 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದರು. ಆದಾಗ್ಯೂ, ಭಾರತ ಎರಡೂ ಪಂದ್ಯಗಳಲ್ಲಿ ಸೋತಿತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮಂಧಾನ 109 ರನ್ ಗಳಿಸಿದರು. ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಮಂಧಾನ 45 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು.

5 / 6
ದಕ್ಷಿಣ ಆಫ್ರಿಕಾ ನಾಯಕಿ ಲೌರಾ ವೋಲ್ವಾರ್ಡ್ ತಮ್ಮ ಏಕಾಂಗಿ ಆಟದಿಂದಲೇ ತಂಡವನ್ನು ಫೈನಲ್‌ಗೆ ಕರೆದೊಯ್ದರು. ವೋಲ್ವಾರ್ಡ್ ಲೀಗ್ ಹಂತದಲ್ಲಿ ಭಾರತದ ವಿರುದ್ಧ 70 ರನ್, ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ಅರ್ಧಶತಕಗಳನ್ನು ಗಳಿಸಿ ತಂಡವನ್ನು ನಾಕೌಟ್ ಹಂತಕ್ಕೆ ಕೊಂಡೊಯ್ದರು. ಹಾಗೆಯೇ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 169 ರನ್ ಬಾರಿಸಿದ ಲೌರಾ ವಿಶ್ವದಾಖಲೆ ಕೂಡ ನಿರ್ಮಿಸಿದರು. ಬಳಿಕ ಫೈನಲ್‌ನಲ್ಲಿ ವೋಲ್ವಾರ್ಡ್ 101 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಚಾಂಪಿಯನ್‌ ಮಾಡುವಲ್ಲಿ ವಿಫಲರಾದರು.

6 / 6
ಇವರಿಬ್ಬರ ಜೊತೆ ಆಸ್ಟ್ರೇಲಿಯಾದ ಅನುಭವಿ ಆಟಗಾರ್ತಿ ಆಶ್ ಗಾರ್ಡ್ನರ್ ಕೂಡ ಬಹುತೇಕ ಎಲ್ಲಾ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದರು. ನ್ಯೂಜಿಲೆಂಡ್ (115) ಮತ್ತು ಇಂಗ್ಲೆಂಡ್ (104 ಅಜೇಯ) ವಿರುದ್ಧದ ವಿಜಯಗಳಲ್ಲಿ ಅವರ ಶತಕ ಪ್ರಮುಖ ಪಾತ್ರವಹಿಸಿತು. ಹಾಗೆಯೇ ಬೌಲಿಂಗ್​ನಲ್ಲೂ ಅವರು ಏಳು ವಿಕೆಟ್‌ಗಳನ್ನು ಸಹ ಪಡೆದು ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು.

Published On - 9:31 pm, Thu, 6 November 25