Smriti Mandhana: ಹರ್ಮನ್ಪ್ರೀತ್ ರನೌಟ್ ಆದಾಗ ಡಗೌಟ್ನಲ್ಲಿದ್ದ ಸ್ಮೃತಿ ಮಂಧಾನ ಏನು ಮಾಡಿದ್ರು ನೋಡಿ
Harmanpreet Kaur Run Out: ಐಸಿಸಿ ಟಿ20 ವಿಶ್ವಕಪ್ನ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಸೆಮಿ ಫೈನಲ್ ಮ್ಯಾಚ್ನಲ್ಲಿ ಹರ್ಮನ್ಪ್ರೀತ್ ಕೌರ್ ರನೌಟ್ಗೆ ಬಲಿಯಾದರು. ಈ ಸಂದರ್ಭ ಡಗೌಟ್ನಲ್ಲಿದ್ದ ಸ್ಮೃತಿ ಮಂಧಾನ ಏನು ಮಾಡಿದರು ನೋಡಿ.
1 / 8
ಐಸಿಸಿ ಟಿ20 ವಿಶ್ವಕಪ್ನಲ್ಲಿ ಫೈನಲ್ಗೇರುವ ಅವಕಾಶವನ್ನು ಭಾರತ ಮಹಿಳಾ ಕ್ರಿಕೆಟ್ ತಂಡ ತನ್ನ ಕೈಯಾರೆ ಕಳೆದುಕೊಂಡಿತು. ಕೇಪ್ಟೌನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ 5 ರನ್ಗಳಿಂದ ಸೋಲು ಕಾಣುವ ಮೂಲಕ ಟ್ರೋಫಿ ಗೆಲ್ಲುವ ಕನಸು ನುಚ್ಚುನೂರಾಯಿತು.
2 / 8
ಒಂದು ಹಂತದಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದಿದ್ದ ಹರ್ಮನ್ ಪಡೆ ಅಂತಿಮ ಹಂತದಲ್ಲಿ ಮಾಡಿದ ಕೆಲ ಎಡವಟ್ಟಿನಿಂದ ಸೋಲುಂಡಿತು. ತಂಡದ ಗೆಲುವಿಗೆ ಹರ್ಮನ್ಪ್ರೀತ್ ಕೌರ್ ಹಾಗೂ ಜೆಮಿಮ ರೋಡ್ರಿಗಸ್ ಕಠಿಣ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ.
3 / 8
28 ರನ್ಗೆ 3 ವಿಕೆಟ್ ಕಳೆದುಕೊಂಡ ಸಂದರ್ಭ ಕ್ರೀಸ್ಗೆ ಬಂದ ಇವರಿಬ್ಬರು ರನ್ರೇಟ್ ಕುಗ್ಗದಂತೆ ಬ್ಯಾಟ್ ಬೀಸಿ 69 ರನ್ಗಳ ಜೊತೆಯಾಟ ಆಡಿದರು. ತಂಡಕ್ಕೆ ಗೆಲುವನ್ನೂ ಹತ್ತಿರ ಮಾಡಿದರು. ಆದರೆ, ಇವರಿಬ್ಬರು ನಿರ್ಗಮನವಾಗಿದ್ದೇ ತಡ ಪಂದ್ಯ ಭಾರತದಿಂದ ಕೈ ಜಾರುತ್ತಾ ಹೋಯಿತು.
4 / 8
ಅದರಲ್ಲೂ 15ನೇ ಓವರ್ನಲ್ಲಿ ಹರ್ಮನ್ಪ್ರೀತ್ ಕೌರ್ ರನೌಟ್ ಆಗಿದ್ದು ದೊಡ್ಡ ಹೊಡೆತ ಬಿದ್ದಿತು. ಎರಡನೇ ರನ್ ಕಂಪ್ಲೀಟ್ ಮಾಡಲು ಗೆರೆ ಮುಟ್ಟುವ ಸಂದರ್ಭ ಕೌರ್ ಅವರ ಬ್ಯಾಟ್ ನೆಲದಲ್ಲಿ ಸ್ಟ್ರಕ್ ಆದ ಕಾರಣ ಕಾಲನ್ನು ಕ್ರೀಸ್ ಒಳಗೆ ಇಡಲು ಕೊಂಚ ತಡವಾಯಿತು. ಈ ಸಂದರ್ಭ ವಿಕೆಟ್ ಕೀಪರ್ ಚೆಂಡನ್ನು ವಿಕೆಟ್ಗೆ ಬಡಿದಾಗಿತ್ತು. ಹೀಗೆ ದುರದೃಷ್ಟಕರವಾಗಿ ಹರ್ಮನ್ ಔಟಾದರು.
5 / 8
ರನೌಟ್ ಆಗಿ ಪೆವಿಲಿಯನ್ ಕಡೆ ಸಾಗುವಾಗ ಹರ್ಮನ್ ಮೈದಾನದಲ್ಲೇ ಕೋಪಗೊಂಡ ಘಟನೆ ಕೂಡ ನಡೆಯಿತು. ಬ್ಯಾಟ್ ಅನ್ನು ಎಸೆದು ಕೋಪ ಹೊರಹಾಕಿದರು. ಅತ್ತ ಡಗೌಟ್ನಲ್ಲಿದ್ದ ಭಾರತೀಯ ಆಟಗಾರರು ಕೂಡ ಬೇಸರಗೊಂಡರು. ಮುಖ್ಯವಾಗಿ ಸ್ಮೃತಿ ಮಂಧಾನ ಬೇಸರದಿಂದ ತಲೆಗೆ ಕೈಹಿಡಿದುಕೊಂಡು ಭಾವುಕರಾಗಿರುವುದು ಕಂಡುಬಂತು.
6 / 8
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ಪರ ಓಪನರ್ಗಳಾದ ಬೆತ್ ಮೂನಿ (54) ಮತ್ತು ಅಲಿಸ್ಸಾ ಹೀಲಿ (25) ಭರ್ಜರಿ ಆರಂಭ ಒದಗಿಸಿದರು. ನಾಯಕಿ ಮೆಗ್ ಲ್ಯಾನಿಂಗ್ (49) ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.
7 / 8
ಆಶ್ಲೀಗ್ ಗಾರ್ಡ್ನರ್ ಕೇವಲ 18 ಎಸೆತಗಳಲ್ಲಿ 31 ರನ್ ಕಲೆಹಾಕಿದರುಆಸ್ಟ್ರೇಲಿಯಾ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ.
8 / 8
ಮೂರನೇ ವಿಕೆಟ್ಗೆ ಹರ್ಮನ್ (54) ಹಾಗೂ ಜೆಮಿಮಾ (43) ಜೊತೆಯಾಗಿ ಗೆಲುವಿಗೆ ಹೋರಾಡಿದರು. ಆದರೆ, ಭಾರತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. 5 ರನ್ಗಳ ಜಯದೊಂದಿಗೆ ಆಸ್ಟ್ರೇಲಿಯಾ ಮಹಿಳೆಯರು ಸೆಮಿ ಫೈನಲ್ ತಲುಪಿದ್ದಾರೆ.
Published On - 10:20 am, Fri, 24 February 23