Ajinkya Rahane: ರಹಾನೆಗೆ ಉಪ ನಾಯಕತ್ವ ನೀಡಬಾರದಿತ್ತು: ಅಜಿಂಕ್ಯೆಗೆ ವೈಸ್ ಕ್ಯಾಪ್ಟನ್ಸಿ ನೀಡಿದ್ದಕ್ಕೆ ಗರಂ ಆದ ಗಂಗೂಲಿ
Sourav Ganguly: ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿರುವ 16 ಮಂದಿ ಸದಸ್ಯರಲ್ಲಿ ರೋಹಿತ್ ಶರ್ಮಾ ನಾಯಕನಾದರೆ ಅಜಿಂಕ್ಯಾ ರಹಾನೆಗೆ ಉಪ ನಾಯಕತ್ವ ನೀಡಲಾಗಿದೆ. ಇದೀಗ ಈ ಬಗ್ಗೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
1 / 8
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಎರಡು ದಿನಗಳಲ್ಲಿ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಟೀಮ್ ಇಂಡಿಯಾದ ಮೊದಲ ಬ್ಯಾಚ್ ಕೆರಿಬಿಯನ್ ನಾಡಿಗೆ ಪ್ರವಾಸ ಬೆಳೆಸಲಿದೆ. ಜುಲೈ 12 ರಿಂದ ಸರಣಿ ಆರಂಭವಾಗಲಿದೆ.
2 / 8
ವಿಂಡೀಸ್ ವಿರುದ್ಧ ಭಾರತ ಮೊದಲು ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದು ಜುಲೈ 12 ರಿಂದ ಪ್ರಾರಂಭವಾಗಲಿದೆ. ಈಗಾಗಲೇ ಬಿಸಿಸಿಐ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಕೂಡ ಪ್ರಕಟ ಮಾಡಿದೆ.
3 / 8
ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿರುವ 16 ಮಂದಿ ಸದಸ್ಯರಲ್ಲಿ ರೋಹಿತ್ ಶರ್ಮಾ ನಾಯಕನಾದರೆ ಅಜಿಂಕ್ಯಾ ರಹಾನೆಗೆ ಉಪ ನಾಯಕತ್ವ ನೀಡಲಾಗಿದೆ. ಇದೀಗ ಈ ಬಗ್ಗೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
4 / 8
ರಹಾನೆಗೂ ಮುನ್ನ ಭಾರತ ಟೆಸ್ಟ್ ತಂಡದ ಉಪ ನಾಯಕತ್ವದ ಚೇತೇಶ್ವರ್ ಪೂಜಾರ ಹೆಗಲಲ್ಲಿತ್ತು. ಆದರೆ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಕಳಪೆ ಫಾರ್ಮ್ನಲ್ಲಿರುವ ಪೂಜಾರ ಅವರನ್ನು ಕೈಬಿಡಲಾಗಿದೆ. ಹೀಗಾಗಿ ರಹಾನೆಗೆ ಈ ಜವಾಬ್ದಾರಿ ನೀಡಲಾಗಿದೆ.
5 / 8
ಇದೀಗ ಈ ಬಗ್ಗೆ ಗರಂ ಆಗಿರುವ ಗಂಗೂಲಿ, ಸುಮಾರು 18 ತಿಂಗಳುಗಳ ಕಾಲ ತಂಡದಿಂದ ಹೊರಗುಳಿದಿದ್ದ ರಹಾನೆಯನ್ನು ಕೇವಲ ಒಂದು ಪಂದ್ಯ ಆಡಿದ ಕೂಡಲೇ ಮತ್ತೆ ಉಪನಾಯಕನನ್ನಾಗಿ ಆಯ್ಕೆ ಮಾಡಿರುವುದು ಸರಿಯಲ್ಲ. ಇದನ್ನು ಕಂಡು ನನಗೆ ಆಶ್ಚರ್ಯವಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.
6 / 8
ಭಾರತ ತಂಡದಲ್ಲಿ ಹಲವು ವರ್ಷಗಳಿಂದ ಸತತವಾಗಿ ಕ್ರಿಕೆಟ್ ಆಡುತ್ತಿರುವ ರವಿಚಂದ್ರನ್ ಅಶ್ವಿನ್ ಆಗಿರಬಹುದು ಅಥವಾ ರವೀಂದ್ರ ಜಡೇಜಾ ಆಗಿರಬಹುದು, ಇವರಿಗೆ ಉಪ ನಾಯಕತ್ವ ನೀಡುತ್ತಿದ್ದರೆ ಉತ್ತಮವಾಗಿರುತ್ತಿತ್ತು ಎಂಬುದು ಗಂಗೂಲಿ ಅಭಿಪ್ರಾಯ.
7 / 8
ನನ್ನ ಪ್ರಕಾರ ಜಡೇಜಾ ಮತ್ತು ಅಶ್ವಿನ್ ಇವರಿಬ್ಬರಲ್ಲಿ ಒಬ್ಬರು ಉಪ ನಾಯಕತ್ವ ಸ್ಥಾನಕ್ಕೆ ಸೂಕ್ತರಾದವರು. ಅವರು ಹಲವು ವರ್ಷಗಳಿಂದ ಭಾರತ ಟೆಸ್ಟ್ ತಂಡದ ಭಾಗವಾಗಿದ್ದು ಬಹುತೇಕ ಎಲ್ಲ ಪಂದ್ಯಗಳಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರು ಈ ಸ್ಥಾನಕ್ಕೆ ಸೂಕ್ತ ಆಟಗಾರರು- ಗಂಗೂಲಿ.
8 / 8
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಶಾರ್ದೂಲ್ ಠಾಕೂರ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯಶಸ್ವಿ ಜೈಸ್ವಾಲ್.