WTC final: ಒಂದು ಪಂದ್ಯ ಗೆದ್ದರೆ ಸೌತ್ ಆಫ್ರಿಕಾ ಫೈನಲ್ಗೆ
South Africa vs Sri Lanka: ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಸೌತ್ ಆಫ್ರಿಕಾ ತಂಡವು 2-0 ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸುವ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.
1 / 5
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಫೈನಲ್ನಲ್ಲಿ ಸೌತ್ ಆಫ್ರಿಕಾ ತಂಡ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಮ್ಯಾಚ್ ಗೆದ್ದರೆ ಆಫ್ರಿಕನ್ನರು WTC ಫೈನಲ್ ಆಡುವುದು ಕನ್ಫರ್ಮ್ ಆಗಲಿದೆ.
2 / 5
ಸೌತ್ ಅಫ್ರಿಕಾ ತಂಡವು ತನ್ನ ಮುಂದಿನ ಟೆಸ್ಟ್ ಸರಣಿಯನ್ನು ಪಾಕಿಸ್ತಾನ್ ವಿರುದ್ಧ ಆಡಲಿದ್ದು, 2 ಪಂದ್ಯಗಳ ಸರಣಿಯಲ್ಲಿ ಒಂದು ಮ್ಯಾಚ್ ಗೆದ್ದರೆ ಫೈನಲ್ ಪ್ರವೇಶಿಸಲಿದೆ. ಒಂದು ವೇಳೆ ಎರಡೂ ಟೆಸ್ಟ್‌ಗಳು ಡ್ರಾಗೊಂಡರೆ ಸೌತ್ ಆಫ್ರಿಕಾ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.
3 / 5
ಇತ್ತ ಭಾರತ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸಬೇಕಿದ್ದರೆ ಉಳಿದಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಬೇಕು. ಈ ಮೂಲಕ 4-1 ಅಂತರದಿಂದ ಗೆದ್ದು ಆಸ್ಟ್ರೇಲಿಯಾ ತಂಡವನ್ನು ಫೈನಲ್ನಿಂದ ಹೊರಗಿಡಬಹುದು. ಹೀಗಾದಲ್ಲಿ ಫೈನಲ್ನಲ್ಲಿ ಸೌತ್ ಆಫ್ರಿಕಾ ಮತ್ತು ಭಾರತ ಮುಖಾಮುಖಿಯಾಗಲಿದೆ.
4 / 5
ಸದ್ಯ ಮೂರು ತಂಡಗಳು ಫೈನಲ್ ರೇಸ್ನಲ್ಲಿದ್ದು, ಅದರಂತೆ ಸೌತ್ ಆಫ್ರಿಕಾ ತಂಡಕ್ಕೆ ಒಂದು ಗೆಲುವಿನ ಅಗತ್ಯವಿದ್ದರೆ, ಆಸ್ಟ್ರೇಲಿಯಾ ತಂಡಕ್ಕೆ 2 ಗೆಲುವುಗಳ ಅಗತ್ಯತೆಯಿದೆ. ಅತ್ತ ಟೀಮ್ ಇಂಡಿಯಾ ಮೂರು ಜಯ ಸಾಧಿಸಿದರೆ ಮಾತ್ರ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಬಹುದು.
5 / 5
ಪ್ರಸ್ತುತ ಅಂಕ ಪಟ್ಟಿಯಲ್ಲಿ ಸೌತ್ ಆಫ್ರಿಕಾ ತಂಡವು 63.33% ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 60.71% ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಇನ್ನು 57.29%ಅಂಕಗಳೊಂದಿಗೆ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ಹಾಗೆಯೇ 45.45% ಅಂಕಗಳನ್ನು ಹೊಂದಿರುವ ಶ್ರೀಲಂಕಾ ತಂಡವು ನಾಲ್ಕನೇ ಸ್ಥಾನದಲ್ಲಿದ್ದು, ಮೂರು ತಂಡಗಳ ಫಲಿತಾಂಶಗಳಲ್ಲಿ ಮಹತ್ವದ ಬದಲಾವಣೆಯಾದರೆ ಮಾತ್ರ ಲಂಕಾ ತಂಡಕ್ಕೆ ಫೈನಲ್ಗೆ ಪ್ರವೇಶಿಸಲು ಅವಕಾಶ ದೊರೆಯಲಿದೆ.
Published On - 8:54 am, Tue, 10 December 24