T20I World Cup 2024: ಟಿ20 ವಿಶ್ವಕಪ್​ಗೆ ಸೌತ್ ಆಫ್ರಿಕಾ ತಂಡ ಪ್ರಕಟ

Edited By:

Updated on: Apr 30, 2024 | 3:11 PM

South Africa T20 Squad: ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್​ಗಾಗಿ ಸೌತ್ ಆಫ್ರಿಕಾ ತಂಡವನ್ನು ಘೋಷಿಸಲಾಗಿದೆ. 15 ಸದಸ್ಯರ ಈ ತಂಡದಲ್ಲಿ ಮಾಜಿ ನಾಯಕ ಟೆಂಬಾ ಬವುಮಾ ಹಾಗೂ ರೈಲಿ ರೊಸ್ಸೊ ಸ್ಥಾನ ಪಡೆದಿಲ್ಲ. ಇನ್ನು ವೇಗಿಗಳಾದ ಲುಂಗಿ ಎನ್​ಗಿಡಿ ಹಾಗೂ ನಾಂಡ್ರೆ ಬರ್ಗರ್ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ.

1 / 5
T20I World Cup 2024: ಈ ಬಾರಿಯ ಟಿ20 ವಿಶ್ವಕಪ್​ಗಾಗಿ ಸೌತ್ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಐಡೆನ್ ಮಾರ್ಕ್ರಾಮ್ ಮುನ್ನಡೆಸಲಿದ್ದಾರೆ. ಈ ಹದಿನೈದು ಸದಸ್ಯರ ಬಳಗದಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟರ್​ ರಿಯಾನ್ ರಿಕೆಲ್ಟನ್​ಗೆ ಸ್ಥಾನ ಲಭಿಸಿರುವುದು ವಿಶೇಷ.

T20I World Cup 2024: ಈ ಬಾರಿಯ ಟಿ20 ವಿಶ್ವಕಪ್​ಗಾಗಿ ಸೌತ್ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಐಡೆನ್ ಮಾರ್ಕ್ರಾಮ್ ಮುನ್ನಡೆಸಲಿದ್ದಾರೆ. ಈ ಹದಿನೈದು ಸದಸ್ಯರ ಬಳಗದಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟರ್​ ರಿಯಾನ್ ರಿಕೆಲ್ಟನ್​ಗೆ ಸ್ಥಾನ ಲಭಿಸಿರುವುದು ವಿಶೇಷ.

2 / 5

ಈವರೆಗೆ ಸೌತ್ ಆಫ್ರಿಕಾ ಪರ ಯಾವುದೇ ಪಂದ್ಯವಾಡದ ರಿಯಾನ್ ಈ ಬಾರಿಯ ಎಸ್​ಎ ಟಿ20 ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರಿಯಾನ್ ರಿಕೆಲ್ಟನ್ 530 ರನ್ ಬಾರಿಸಿ ಮಿಂಚಿದ್ದರು. ಈ ಅತ್ಯುತ್ತಮ ಪ್ರದರ್ಶನದ ಫಲವಾಗಿ ಇದೀಗ ಸೌತ್ ಆಫ್ರಿಕಾ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

3 / 5

ಹಾಗೆಯೇ ನಿರಂತರ ಗಾಯಗಳಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸೌತ್ ಆಫ್ರಿಕಾ ಟಿ20 ತಂಡದಿಂದ ಹೊರಗುಳಿದಿದ್ದ ಅನ್ರಿಕ್ ನೋಕಿಯಾ ವಿಶ್ವಕಪ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ನೋಕಿಯಾ ಕಳಪೆ ಪ್ರದರ್ಶನ ನೀಡಿದ್ದಾರೆ. ಇದಾಗ್ಯೂ 30 ವರ್ಷದ ವೇಗಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

4 / 5

ಇನ್ನು ತಂಡದಲ್ಲಿ ಸ್ಟಾರ್ ಬ್ಯಾಟರ್​ಗಳಾಗಿ ಕ್ವಿಂಟನ್ ಡಿಕಾಕ್, ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್ ಕಾಣಿಸಿಕೊಂಡರೆ, ಬೌಲರ್​ಗಳಾಗಿ ಜೆರಾಲ್ಡ್ ಕೊಟ್ಝಿಯ, ಕಗಿಸೊ ರಬಾಡ, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ತಬ್ರೇಝ್ ಶಮ್ಸಿ ತಂಡದಲ್ಲಿದ್ದಾರೆ. ಅದರಂತೆ ಸೌತ್ ಆಫ್ರಿಕಾ ಟಿ20 ವಿಶ್ವಕಪ್ ತಂಡ ಈ ಕೆಳಗಿನಂತಿದೆ.

5 / 5

ಟಿ20 ವಿಶ್ವಕಪ್‌ಗೆ ಸೌತ್ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ , ರೀಝ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್ , ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ರಿಯಾನ್ ರಿಕೆಲ್ಟನ್, ಕಗಿಸೊ ರಬಾಡ , ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್ , ಜಾರ್ನ್ ಫೋರ್ಚುಯಿನ್, ಜೆರಾಲ್ಡ್ ಕೊಟ್ಝಿಯ, ಅನ್ರಿಕ್ ನೋಕಿಯಾ, ತಬ್ರೇಝ್ ಶಮ್ಸಿ , ಒಟ್ನಿಯೆಲ್ ಬಾರ್ಟ್‌ಮ್ಯಾನ್.

Loading...
Unable to load recommendations.
Follow Us