South Africa vs India: 3ನೇ ಟೆಸ್ಟ್ನಲ್ಲಿ ಕಮ್ಬ್ಯಾಕ್ ಮತ್ತಷ್ಟು ಕಠಿಣ: ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಮತ್ತೊಂದು ದೊಡ್ಡ ಶಾಕ್
TV9 Web | Updated By: Vinay Bhat
Updated on:
Jan 07, 2022 | 8:50 AM
India vs South Africa Test: ಭಾರತ - ದಕ್ಷಿಣ ಆಫ್ರಿಕಾ ಮೂರನೇ ಟೆಸ್ಟ್ ಪಂದ್ಯದ ಮೇಲೆ ಸರಣಿ ಗೆಲುವಿನ ಲೆಕ್ಕಾಚಾರ ನಿಂತಿದೆ. ಅಂತಿಮ ನಿರ್ಣಾಯಕ ಕದನ ಜನವರಿ 11 ರಿಂದ ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯಲಿದೆ. ಆದರೆ, ಇದಕ್ಕೂ ಮುನ್ನ ಟೀಮ್ ಇಂಡಿಯಕ್ಕೆಚ ಆಘಾತಕಾರಿ ಸುದ್ದಿಯೊಂದು ಸಿಕ್ಕಿದೆ.
1 / 9
ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿ ಮುಖಭಂಗಕ್ಕೆ ಒಳಗಾಗಿದ್ದ ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿತು. ನಾಯಕ ಡೀನ್ ಎಲ್ಗರ್ ಅವರ ಜವಾಬ್ದಾರಿಯುತ ನಿರ್ವಹಣೆ ಫಲವಾಗಿ ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧ 7 ವಿಕೆಟುಗಳಿಂದ ಗೆಲುವಿನ ನಗೆ ಬೀರಿತು. ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ವಾಂಡರರ್ಸ್ ಗ್ರೌಂಡ್ನಲ್ಲಿ ಸೋಲುಂಡಿತು. ಸದ್ಯ ಮೂರು ಪಂದ್ಯಗಳ ಟೆಸ್ಟ್ ಸರಣಿ 1-1ರ ಸಮಬಲದಿಂದ ಕೂಡಿದೆ.
2 / 9
ಮೂರನೇ ಟೆಸ್ಟ್ ಪಂದ್ಯದ ಮೇಲೆ ಉಭಯ ತಂಡಗಳ ಸರಣಿ ಗೆಲುವಿನ ಲೆಕ್ಕಾಚಾರ ನಿಂತಿದೆ. ಅಂತಿಮ ನಿರ್ಣಾಯಕ ಕದನ ಜನವರಿ 11 ರಿಂದ ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯಲಿದೆ. ಆದರೆ, ಇದಕ್ಕೂ ಮುನ್ನ ಭಾರತಕ್ಕೆ ಕಹಿ ಸುದ್ದಿಯೊಂದು ಸಿಕ್ಕಿದೆ.
3 / 9
3ನೇ ಟೆಸ್ಟ್ ಪಂದ್ಯ ನಡೆಯಲಿರುವ ಕೇಪ್ ಟೌನ್ ಭಾರತಕ್ಕೆ ಇದುವರೆಗೆ ಅದೃಷ್ಟವಾಗಿ ಪರಿಣಮಿಸಿಲ್ಲ. ಈ ಗ್ರೌಂಡ್ ನಲ್ಲಿ ಟೀಮ್ ಇಂಡಿಯಾ ಒಟ್ಟು ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಸೋಲು ಕಂಡಿದೆ. ಉಳಿದ ಎರಡು ಟೆಸ್ಟ್ ಮ್ಯಾಚ್ ಡ್ರಾನಲ್ಲಿ ಅಂತ್ಯಕಂಡಿದೆ.
4 / 9
ಹೌದು, ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನಲ್ಲಿ ಭಾರತ ತಂಡ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿಲ್ಲ. ಆಡಿದ ಎಲ್ಲ ಪಂದ್ಯ ಡ್ರಾ ಮತ್ತು ಸೋಲು ಕಂಡಿದೆ. ಹೀಗಾಗಿ ಮೂರನೇ ಟೆಸ್ಟ್ನಲ್ಲಿ ಭಾರತಕ್ಕೆ ಕಮ್ಬ್ಯಾಕ್ ಮಾಡಲು ತುಂಬಾನೆ ಕಷ್ಟವಿದೆ.
5 / 9
ವಿರಾಟ್ ಕೊಹ್ಲಿ ಲಭ್ಯ: ಕೊನೇ ಟೆಸ್ಟ್ಗೆ ವಿರಾಟ್ ಕೊಹ್ಲಿ ಲಭ್ಯರಿರುತ್ತಾರೆ ಎಂದು ಕೆಎಲ್ ರಾಹುಲ್ ಎರಡನೇ ಟೆಸ್ಟ್ ಪಂದ್ಯದ ಬಳಿಕ ತಿಳಿಸಿದ್ದಾರೆ. ಇಂಜುರಿಗೆ ತುತ್ತಾಗಿದ್ದ ಕೊಹ್ಲಿ ಈಗಾಗಲೇ ಅಭ್ಯಾಸ ಶುರು ಮಾಡಿದ್ದಾರಂತೆ.
6 / 9
ವಾಂಡರರ್ಸ್ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 2 ವಿಕೆಟ್ಗೆ 118 ರನ್ಗಳಿಂದ 4ನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 122 ರನ್ ಬಾಕಿ ಇದ್ದರೆ, ಭಾರತಕ್ಕೆ 8 ವಿಕೆಟುಗಳ ಅವಶ್ಯಕತೆಯಿತ್ತು.
7 / 9
ವಾನ್ ಡರ್ ಡುಸೆನ್ ಮತ್ತು ಡೀನ್ ಎಲ್ಗರ್ ಜೊತೆಯಾಟ ಸರಾಗವಾಗಿ ಮುಂದುವರಿಯಿತು. ಇಬ್ಬರೂ 3ನೇ ವಿಕೆಟಿಗೆ 82 ರನ್ ಜೊತೆಯಾಟ ಆಡಿದರು. ಡುಸೆನ್ ನಿರ್ಗಮನದ ಬಳಿಕ ಡೀನ್ ಎಲ್ಗರ್ಗೆ ಟೆಂಬ ಬವುಮ ಜೊತೆಯಾದರು.
8 / 9
71ನೇ ಟೆಸ್ಟ್ ಪಂದ್ಯ ಆಡಿದ 34 ವರ್ಷದ ಡೀನ್ ಎಲ್ಗಾರ್ ತಮ್ಮ 14ನೇ ಶತಕದಿಂದ ಸ್ವಲ್ಪದರಲ್ಲಿ ವಂಚಿತರಾದರು. ಎಲ್ಗರ್ 96 ರನ್ ಗಳಿಸಿ ಅಜೇಯರಾಗಿ ಉಳಿದರು.
9 / 9
ದಕ್ಷಿಣ ಆಫ್ರಿಕಾ ತಂಡ 67.4 ಓವರುಗಳಲ್ಲಿ 3 ವಿಕೆಟಿಗೆ 243 ರನ್ ಪೇರಿಸಿ ಜಯಿಸಿತು. ಸೆಂಚುರಿಯನ್ನಲ್ಲಿ ಅನುಭವಿಸಿದ ಸೋಲಿಗೂ ಪ್ರವಾಸಿ ತಂಡದ ಎದುರು ಸೇಡು ತೀರಿಸಿಕೊಳ್ಳುವುದರ ಜತೆಗೆ ಸರಣಿಯಲ್ಲಿ ಕುತೂಹಲ ಕಾಯ್ದುಕೊಂಡಿತು.