ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸೌತ್ ಆಫ್ರಿಕಾ ಕ್ರಿಕೆಟಿಗ..!

| Updated By: ಝಾಹಿರ್ ಯೂಸುಫ್

Updated on: Sep 26, 2022 | 6:55 PM

Keshav Maharaj: ಸೌತ್ ಆಫ್ರಿಕಾ ಪರ 18 ಟಿ20 ಪಂದ್ಯಗಳನ್ನು ಆಡಿರುವ ಸ್ಪಿನ್ನರ್ ಕೇಶವ್ ಮಹಾರಾಜ್ 15 ವಿಕೆಟ್​ಗಳನ್ನು ಕಬಳಿಸಿ ಮಿಂಚಿದ್ದಾರೆ.

1 / 5
ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾ ವಿರುದ್ಧದ ಸೀಮಿತ ಓವರ್​ಗಳ ಸರಣಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಸೆಪ್ಟೆಂಬರ್ 28 ರಂದು ಶುರುವಾಗಲಿರುವ ಈ ಸರಣಿಯ ಮೊದಲ ಪಂದ್ಯವು ಕೇರಳ ರಾಜಧಾನಿ ತಿರುವನಂತಪುರದಲ್ಲಿ ನಡೆಯಲಿದೆ. ಈಗಾಗಲೇ ಸೌತ್ ಆಫ್ರಿಕಾ ಆಟಗಾರರು ತಿರುವನಂತಪುರಕ್ಕೆ ಬಂದಿಳಿದಿದ್ದಾರೆ. ವಿಶೇಷ ಎಂದರೆ ದೇವರ ನಾಡಿಗೆ ಆಗಮಿಸುತ್ತಿದ್ದಂತೆ ಸೌತ್ ಆಫ್ರಿಕಾ ಕ್ರಿಕೆಟಿಗರೊಬ್ಬರು ಪ್ರಸಿದ್ಧ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

2 / 5
ದೇಶದಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಇದರ ಬೆನ್ನಲ್ಲೇ ಸೌತ್ ಆಫ್ರಿಕಾ ತಂಡವು ಭಾರತಕ್ಕೆ ಆಗಮಿಸಿದೆ. ಅತ್ತ ಹಿಂದೂ ಧರ್ಮೀಯರಾಗಿರುವ ಕೇಶವ್ ಮಹಾರಾಜ್ ಕೂಡ ಸೌತ್ ಆಫ್ರಿಕಾ ತಂಡದಲ್ಲಿದ್ದಾರೆ. ಹೀಗಾಗಿ ನವರಾತ್ರಿ ಸಂದರ್ಭದಲ್ಲಿ  ತಿರುವನಂತಪುರದ ಪ್ರಸಿದ್ಧ ದೇವಾಲಯ ಪದ್ಮನಾಭಸ್ವಾಮಿ ಮಂದಿರಕ್ಕೆ ತೆರಳಿ ಕೇಶವ್ ಮಹರಾಜ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.

3 / 5
ಸಾಂಪ್ರದಾಯಿಕ ಧೋತಿಯನ್ನು ಧರಿಸಿ ದೇವಸ್ಥಾನಕ್ಕೆ ಆಗಮಿಸಿದ ಕ್ರಿಕೆಟಿಗನನ್ನು ಯಾರು ಕೂಡ ಗುರುತಿಸಿರಲಿಲ್ಲ. ಇದೀಗ ವಿಶೇಷ ಪೂಜೆಯ ಬಳಿಕ ತೆಗೆದುಕೊಂಡ ಫೋಟೋವನ್ನು ಕೇಶವ್ ಮಹಾರಾಜ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಎಲ್ಲರಿಗೂ ನವರಾತ್ರಿ ಶುಭಕೋರಿದ್ದಾರೆ.

4 / 5
ಉತ್ತರ ಪ್ರದೇಶದ ಮೂಲದವರಾಗಿರುವ ಕೇಶವ್ ಮಹಾರಾಜ್ ಪೂರ್ವಜರು ಕಳೆದ 1 ಶತಮಾನಗಳಿಂದ ಸೌತ್ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಇದಾಗ್ಯೂ ಕೇಶವ್ ಮಹಾರಾಜ್ ಕುಟಂಬಸ್ಥರು ತಮ್ಮ ಸಂಪ್ರದಾಯಗಳನ್ನು ಹಾಗೆ ಮುಂದುವರೆಸಿರುವುದು ವಿಶೇಷ.

5 / 5