ಮ್ಯಾಚ್ ಫಿಕ್ಸಿಂಗ್ ಆರೋಪ; ಲಂಕಾ ಕ್ರಿಕೆಟಿಗನಿಗೆ ನಿಷೇಧ ಹೇರಲು ಮುಂದಾದ ಐಸಿಸಿ
Praveen Jayawickrama: ಶ್ರೀಲಂಕಾದ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘನೆ ಆರೋಪ ಹೊರಿಸಿದೆ. ಐಸಿಸಿ, 25 ವರ್ಷದ ಜಯವಿಕ್ರಮ ವಿರುದ್ಧ ಮೂರು ವಿಭಿನ್ನ ಕೋಡ್‌ಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಜೊತೆಗೆ, 2021 ರ ಲಂಕಾ ಪ್ರೀಮಿಯರ್ ಲೀಗ್ನಲ್ಲೂ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬಆರೋಪವನ್ನು ಹೊರಿಸಲಾಗಿದೆ.
1 / 6
ಟೀಂ ಇಂಡಿಯಾದ ಶ್ರೀಲಂಕಾ ಪ್ರವಾಸ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಈ ಪ್ರವಾಸದಲ್ಲಿ, ಉಭಯ ತಂಡಗಳ ನಡುವೆ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಾಯಿತು. ಟಿ20 ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡರೆ, ಏಕದಿನ ಸರಣಿಯಲ್ಲಿ ಶ್ರೀಲಂಕಾ 27 ವರ್ಷಗಳ ನಂತರ ಭಾರತವನ್ನು ಸೋಲಿಸಿದ ಐತಿಹಾಸಿಕ ಸಾಧನೆ ಮಾಡಿತ್ತು.
2 / 6
ಆದರೆ ಈ ಸಂತಸದ ಕ್ಷಣದ ನಡುವೆ ಶ್ರೀಲಂಕಾ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೊಂದು ಎದುರಾಗಿದೆ. ತಂಡದ ಆಟಗಾರನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ಆರೋಪಕ್ಕೆ ಸಂಬಂಧಿಸಿದಂತೆ ಆ ಆಟಗಾರನಿಗೆ ಪ್ರತಿಕ್ರಿಯಿಸಲು ಕಾಲಾವಕಾಶ ನೀಡಿದೆ.
3 / 6
ಶ್ರೀಲಂಕಾದ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘನೆ ಆರೋಪ ಹೊರಿಸಿದೆ. ಐಸಿಸಿ, 25 ವರ್ಷದ ಜಯವಿಕ್ರಮ ವಿರುದ್ಧ ಮೂರು ವಿಭಿನ್ನ ಕೋಡ್‌ಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಜೊತೆಗೆ, 2021 ರ ಲಂಕಾ ಪ್ರೀಮಿಯರ್ ಲೀಗ್ನಲ್ಲೂ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬಆರೋಪವನ್ನು ಹೊರಿಸಲಾಗಿದೆ.
4 / 6
ಆರ್ಟಿಕಲ್ 2.4.4 ಮತ್ತು ಆರ್ಟಿಕಲ್ 2.4.7 ರ ಅಡಿಯಲ್ಲಿ ಐಸಿಸಿ, ಪ್ರವೀಣ್ ಜಯವಿಕ್ರಮ ಮೇಲೆ ಆರೋಪ ಹೊರಿಸಿದೆ. ಹೀಗಾಗಿ ತನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸಲು ಪ್ರವೀಣ್ ಜಯವಿಕ್ರಮಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಅಂದರೆ ಆಗಸ್ಟ್ 6 ರಿಂದ ಆಗಸ್ಟ್ 20 ರೊಳಗೆ ಜಯವಿಕ್ರಮ ಈ ಆರೋಪಗಳಿಗೆ ಉತ್ತರಿಸಬೇಕಾಗಿದೆ.
5 / 6
ವಾಸ್ತವವಾಗಿ, 2021 ರ ಲಂಕಾ ಪ್ರೀಮಿಯರ್ ಲೀಗ್ ವೇಳೆ ಫಿಕ್ಸಿಂಗ್ ಮಾಡಲು ಇನ್ನೊಬ್ಬ ಆಟಗಾರನನ್ನು ಸಂಪರ್ಕಿಸಲು ಭ್ರಷ್ಟ ವ್ಯಕ್ತಿಯೊಬ್ಬರು ಪ್ರವೀಣ್ ಜಯವಿಕ್ರಮ ಅವರನ್ನು ಕೇಳಿದ್ದರಂತೆ. ಆದರೆ ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಜಯವಿಕ್ರಮ ಯಾವುದೇ ಮಾಹಿತಿ ನೀಡಿಲ್ಲ. ಇದಲ್ಲದೇ ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೂ ಅವರು ಅಡ್ಡಿಪಡಿಸಿದ್ದು, ಈ ಹಿನ್ನೆಲೆಯಲ್ಲಿ ಐಸಿಸಿ ಈ ಕ್ರಮ ಕೈಗೊಂಡಿದೆ.
6 / 6
ಪ್ರವೀಣ್ ಜಯವಿಕ್ರಮ ಶ್ರೀಲಂಕಾ ತಂಡದ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ. ಇಲ್ಲಿಯವರೆಗೆ ಅವರು 5 ಟೆಸ್ಟ್, 5 ಏಕದಿನ ಮತ್ತು 5 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 25 ವಿಕೆಟ್‌ಗಳನ್ನು ಪಡೆದಿರುವ ಅವರು, ಏಕದಿನದಲ್ಲಿ 5 ಮತ್ತು ಟಿ20ಯಲ್ಲಿ 2 ವಿಕೆಟ್ ಪಡೆದಿದ್ದಾರೆ. ಪ್ರವೀಣ್ ಜಯವಿಕ್ರಮ ಭಾರತದ ವಿರುದ್ಧವೂ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 10 ವಿಕೆಟ್ ಪಡೆದಿದ್ದಾರೆ.