IPL Incredible Awards: ಐಪಿಎಲ್​ ಅವಾರ್ಡ್ಸ್ ಪ್ರಕಟ: 6 ಆಟಗಾರರಿಗೆ ಒಲಿದ ಪ್ರಶಸ್ತಿ

|

Updated on: Feb 20, 2023 | 7:26 PM

Star Sports IPL Incredible Awards: ಸ್ಟಾರ್ ಸ್ಪೋರ್ಟ್ಸ್ ಚಾನೆಲ್​ ಪ್ರಸ್ತುತ ಪಡಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಇನ್​ಕ್ರೆಡಿಬಲ್ ಅವಾರ್ಡ್ ಈ ಬಾರಿ 6 ಆಟಗಾರರಿಗೆ ಲಭಿಸಿದೆ.

1 / 7
Star Sports IPL Incredible Awards: ಜನಪ್ರಿಯ ಕ್ರೀಡಾ ಚಾನೆಲ್​​ ನೆಟ್​ವರ್ಕ್​ ಸ್ಟಾರ್ ಸ್ಪೋರ್ಟ್ಸ್​ ಇದೇ ಮೊದಲ ಬಾರಿಗೆ ಐಪಿಎಲ್​ ಪ್ರಶಸ್ತಿಗಳನ್ನು ಪ್ರಕಟಿಸಿದೆ. 2008 ರಲ್ಲಿ ಶುರುವಾದ ಇಂಡಿಯನ್ ಪ್ರೀಮಿಯರ್ ಲೀಗ್​ ಇದೀಗ 15 ವರ್ಷಗಳನ್ನು ಪೂರ್ಣಗೊಳಿಸಿದೆ. ಈ 15 ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಸ್ಟಾರ್ ಸ್ಪೋರ್ಟ್ಸ್ ಐಪಿಎಲ್ ಇನ್‌ಕ್ರೆಡಿಬಲ್ ಅವಾರ್ಡ್​ಗಳನ್ನು ಘೋಷಿಸಿದೆ. ಈ ಪ್ರಶಸ್ತಿಗಳನ್ನು ಪಡೆದಿರುವ ಆಟಗಾರರ ಸಂಪೂರ್ಣ ವಿವರಗಳು ಈ ಕೆಳಗಿನಂತಿದೆ.

2 / 7
ಅತ್ಯುತ್ತಮ ನಾಯಕ ಪ್ರಶಸ್ತಿ: ಇಂಡಿಯನ್ ಪ್ರೀಮಿಯರ್​ ಲೀಗ್​ನ ಅತ್ಯುತ್ತಮ ನಾಯಕ ಪ್ರಶಸ್ತಿಯು ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ಲಭಿಸಿದೆ. ಕಳೆದ 15 ವರ್ಷಗಳಲ್ಲಿ ಮುಂಬೈ ತಂಡವನ್ನು ಹಿಟ್​ಮ್ಯಾನ್ 5 ಬಾರಿ ಚಾಂಪಿಯನ್​ ಪಟ್ಟಕ್ಕೇರಿಸಿದ್ದರು. ಹೀಗಾಗಿ ಐಪಿಎಲ್​ನ ಅತ್ಯುತ್ತಮ ನಾಯಕನ ಪ್ರಶಸ್ತಿಯು ರೋಹಿತ್ ಶರ್ಮಾ ಪಾಲಾಗಿದೆ.

3 / 7
ಅತ್ಯುತ್ತಮ ಬ್ಯಾಟರ್ ಪ್ರಶಸ್ತಿ: ಐಪಿಎಲ್​ ಇತಿಹಾಸದ ಅತ್ಯುತ್ತಮ ಬ್ಯಾಟ್ಸ್​ಮನ್ ಪ್ರಶಸ್ತಿಯು ಆರ್​ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಪಾಲಾಗಿದೆ. ಐಪಿಎಲ್​ನ 170 ಇನಿಂಗ್ಸ್​ನಲ್ಲಿ ಬ್ಯಾಟ್ ಬೀಸಿರುವ ಎಬಿಡಿ 151.69 ಸ್ಟ್ರೈಕ್​ ರೇಟ್​ನಲ್ಲಿ 5162 ರನ್​ ಕಲೆಹಾಕಿದ್ದಾರೆ. ಈ ವೇಳೆ 3 ಶತಕ ಹಾಗೂ 40 ಅರ್ಧಶತಕಗಳನ್ನು ಬಾರಿಸಿದ್ದರು. ಅದರಲ್ಲೂ ಹಲವು ಪಂದ್ಯಗಳಿಗೆ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಹೀಗಾಗಿಯೇ ಐಪಿಎಲ್​ನ ಅತ್ಯುತ್ತಮ ಬ್ಯಾಟರ್ ಪ್ರಶಸ್ತಿಯು ಎಬಿಡಿಗೆ ಒಲಿದಿದೆ.

4 / 7
ಅತ್ಯುತ್ತಮ ಬೌಲರ್ ಪ್ರಶಸ್ತಿ: ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇದೇ ಕಾರಣದಿಂದಾಗಿ ಐಪಿಎಲ್​ನ ಅತ್ಯುತ್ತಮ ಬೌಲರ್ ಪ್ರಶಸ್ತಿ ಕೂಡ ಬುಮ್ರಾಗೆ ಒಲಿದಿದೆ. 2013 ರಲ್ಲಿ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿದಿದ್ದ ಜಸ್​ಪ್ರೀತ್ ಬುಮ್ರಾ ಇದುವರೆಗೆ ಒಟ್ಟು 145 ವಿಕೆಟ್‌ಗಳನ್ನು ಉರುಳಿಸಿ ಮಿಂಚಿದ್ದಾರೆ.

5 / 7
ಇಂಪ್ಯಾಕ್ಟ್​ ಪ್ಲೇಯರ್ ಪ್ರಶಸ್ತಿ: 15 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ ಪ್ರಭಾವ ಬೀರಿದ ಆಟಗಾರರಿಗೆ ನೀಡಲಾಗುವ ಇಂಪ್ಯಾಕ್ಟ್ ಪ್ಲೇಯರ್ ಪ್ರಶಸ್ತಿಯು ಕೆಕೆಆರ್​ ತಂಡದ ಆಲ್​ರೌಂಡರ್ ಆಟಗಾರ ಆ್ಯಂಡ್ರೆ ರಸೆಲ್ ಪಾಲಾಗಿದೆ. ರಸೆಲ್ ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಮಿಂಚುವ ಮೂಲಕ ಐಪಿಎಲ್​ನ ಅತ್ಯುತ್ತಮ ಇಂಪ್ಯಾಕ್ಟ್ ಪ್ಲೇಯರ್ ಎನಿಸಿಕೊಂಡಿದ್ದಾರೆ.

6 / 7
ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಪ್ರಶಸ್ತಿ: ಐಪಿಎಲ್ ಇತಿಹಾಸದಲ್ಲೇ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಬೌಲರ್​ಗೆ ನೀಡಲಾಗುವ ಪ್ರಶಸ್ತಿಯು ಕೆಕೆಆರ್​ ತಂಡದ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್ ಪಾಲಾಗಿದೆ. 2012 ರಲ್ಲಿ ನರೈನ್ 5.5 ಸರಾಸರಿಯಲ್ಲಿ ರನ್ ನೀಡಿ ಮೂಲಕ 24 ವಿಕೆಟ್ ಕಬಳಿಸಿದ್ದರು. ಈ ಪ್ರದರ್ಶನಕ್ಕೆ ಇದೀಗ ಪ್ರಶಸ್ತಿ ಒಲಿದಿದೆ.

7 / 7
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಪ್ರಶಸ್ತಿ: ಕಳೆದ 15 ವರ್ಷಗಳಲ್ಲಿ ಸೀಸನ್​ವೊಂದರಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರರಿಗೆ ನೀಡಲಾಗುವ ಪ್ರಶಸ್ತಿಯು ಆರ್​ಸಿಬಿ ಬ್ಯಾಟರ್​ ವಿರಾಟ್ ಕೊಹ್ಲಿಯ ಪಾಲಾಗಿದೆ. 2016 ರ ಐಪಿಎಲ್ ಸೀಸನ್​ನಲ್ಲಿ ಕಿಂಗ್ ಕೊಹ್ಲಿಯು 4 ಶತಕಗಳೊಂದಿಗೆ 973 ರನ್​ ಕಲೆಹಾಕಿದ್ದರು. ಈ ಅದ್ಭುತ ಪ್ರದರ್ಶನಕ್ಕೆ ಇದೀಗ ಸ್ಟಾರ್ ಸ್ಪೋರ್ಟ್ಸ್ ಪ್ರಶಸ್ತಿ ಒಲಿದಿದೆ.

Published On - 7:23 pm, Mon, 20 February 23