Sign In

By signing in or creating an account, you agree with Associated Broadcasting Company's Terms & Conditions and Privacy Policy.

KL Rahul: ಅಂಕಿ ಅಂಶಗಳ ಮೂಲಕ ಕೆಎಲ್ ರಾಹುಲ್ ಬಂಡವಾಳ ಬಿಚ್ಚಿಟ್ಟ ವೆಂಕಟೇಶ್ ಪ್ರಸಾದ್

Venkatesh Prasad - KL Rahul: 10 ಇನಿಂಗ್ಸ್​ಗಳಲ್ಲಿ ರಾಹುಲ್ ಏಕೈಕ ಅರ್ಧಶತಕ ಮಾತ್ರ ಬಾರಿಸಿದ್ದರು. ಇದಾಗ್ಯೂ ಅವರನ್ನು ಸತತವಾಗಿ ತಂಡಕ್ಕೆ ಆಯ್ಕೆ ಮಾಡುತ್ತಿರುವ ಬಗ್ಗೆ ಇದೀಗ ಟೀಕೆಗಳು ವ್ಯಕ್ತವಾಗುತ್ತಿದೆ.

ಝಾಹಿರ್ ಯೂಸುಫ್
|

Updated on: Feb 20, 2023 | 3:59 PM

ಭಾರತ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ಅವರ ಆಯ್ಕೆಯನ್ನು ಟೀಮ್ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಮತ್ತೊಮ್ಮೆ ಪ್ರಶ್ನಿಸಿದ್ದಾರೆ. ರಾಹುಲ್ ಅವರ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ನನಗೆ ಸಾಕಷ್ಟು ಗೌರವವಿದೆ. ಆದರೆ ದುಃಖಕರ ವಿಷಯ ಎಂದರೆ ಅವರು ನೀಡುತ್ತಿರುವುದು ಸಾಮಾನ್ಯ ಪ್ರದರ್ಶನ. 46 ಟೆಸ್ಟ್‌ಗಳ ನಂತರ 34 ರ ಸರಾಸರಿಯಲ್ಲಿ ಮಾತ್ರ ರನ್​ ಕಲೆಹಾಕಿದ್ದಾರೆ. ಇದಾಗ್ಯೂ ಸತತ ಅವಕಾಶಗಳನ್ನು ನೀಡುತ್ತಿರುವುದೇಕೆ ಎಂದು ವೆಂಕಿ ಪ್ರಶ್ನಿಸಿದ್ದಾರೆ.

1 / 9
ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಕೆಎಲ್​ ರಾಹುಲ್ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೆ ಆತ ಅತ್ಯುತ್ತಮ ಇನಿಂಗ್ಸ್ ಆಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾನೆ. ವಿದೇಶಗಳಲ್ಲಿ ಅತ್ಯಂತ ಯಶಸ್ವಿ ಆರಂಭಿಕನಾಗಿ ಗುರುತಿಸಿಕೊಂಡ ಆಟಗಾರ. ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್​ ಪಿಚ್​ಗಳಲ್ಲೂ ಶತಕ ಬಾರಿಸಿದ್ದಾರೆ. ಹೀಗಾಗಿ ರಾಹುಲ್ ಅವರನ್ನು ಕೈ ಬಿಡುವ ಪ್ರಶ್ನೆಯಿಲ್ಲ ಎಂದು ದ್ರಾವಿಡ್ ಉತ್ತರಿಸಿದ್ದರು.

2 / 9
ಇದೀಗ ಮೂರನೇ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಅಚ್ಚರಿಯೆಂಬಂತೆ ಕೆಎಲ್ ರಾಹುಲ್​ಗೆ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಇದರ ಬೆನ್ನಲ್ಲೇ ವೆಂಕಟೇಶ್ ಪ್ರಸಾದ್ ಅಂಕಿ ಅಂಶಗಳ ಮೂಲಕ ಕೆಎಲ್ ರಾಹುಲ್ ಅವರ ಪ್ರದರ್ಶನದ ಮುಖ್ಯಾಂಶಗಳನ್ನು ಬಿಚ್ಚಿಟ್ಟಿದ್ದಾರೆ.

3 / 9
ಕೆಎಲ್ ರಾಹುಲ್ ಅತ್ಯುತ್ತಮ ವಿದೇಶಿ ಟೆಸ್ಟ್ ದಾಖಲೆ ಹೊಂದಿದ್ದಾರೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಆದರೆ ಅಂಕಿಅಂಶಗಳು ಬೇರೆಯದನ್ನೇ ಹೇಳುತ್ತಿದೆ. ಅವರು ವಿದೇಶದಲ್ಲಿ 56 ಟೆಸ್ಟ್​ ಇನ್ನಿಂಗ್ಸ್‌ ಆಡಿದ್ದು, ಈ ವೇಳೆ 30 ಸರಾಸರಿಯಲ್ಲಿ ಮಾತ್ರ ರನ್​ ಕಲೆಹಾಕಿದ್ದಾರೆ. ಇನ್ನು 6 ವಿದೇಶಿ ಶತಕಗಳನ್ನು ಬಾರಿಸಿದ್ದಾರೆ. ಆದರೆ ಒಟ್ಟಾರೆ ರನ್​ ಸರಾಸರಿ ಕಡಿಮೆ ಇದೆಯಲ್ಲ? ಎಂದು ವೆಂಕಿ ಪ್ರಶ್ನಿಸಿದ್ದಾರೆ. ಅಂದರೆ ಇಲ್ಲಿ 6 ಶತಕ ಬಾರಿಸಿದರೂ ಉಳಿದ ಇನಿಂಗ್ಸ್​ಗಳಲ್ಲಿ ಕೆಎಲ್ ರಾಹುಲ್ ವಿಫಲರಾಗಿದ್ದರು ಎಂಬುದನ್ನು ವೆಂಕಟೇಶ್ ಪ್ರಸಾದ್ ಬಿಚ್ಚಿಟ್ಟಿದ್ದಾರೆ.

4 / 9
ಇನ್ನು ಭಾರತದಲ್ಲಿ ಆಡಿದ 25 ಟೆಸ್ಟ್ ಇನಿಂಗ್ಸ್​ನಲ್ಲಿ ಕೆಎಲ್ ರಾಹುಲ್ ಬಾರಿಸಿರುವುದು ಕೇವಲ 1 ಶತಕ ಮಾತ್ರ. ಇನ್ನು ಒಟ್ಟಾರೆ ಅಂಕಿ ಅಂಶಗಳನ್ನು ನೋಡಿದರೆ 81 ಇನಿಂಗ್ಸ್ ಮೂಲಕ ರಾಹುಲ್ 2642 ರನ್​ ಕಲೆಹಾಕಿದ್ದಾರೆ. ಅಂದರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಕೇವಲ 33 ರ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ.

5 / 9
ಹಾಗೆಯೇ ಮಯಾಂಕ್ ಅಗರ್ವಾಲ್ ಅವರ ಟೆಸ್ಟ್ ದಾಖಲೆಯನ್ನು ಕೂಡ ವೆಂಕಟೇಶ್ ಪ್ರಸಾದ್ ಇಲ್ಲಿ ಪ್ರಸ್ತಾಪಿಸಿದ್ದಾರೆ. ಮಯಾಂಕ್ ಭಾರತೀಯ ಪಿಚ್​ಗಳಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. 13 ಇನ್ನಿಂಗ್ಸ್‌ಗಳಲ್ಲಿ ಸುಮಾರು 70 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. 2 ದ್ವಿಶತಕವನ್ನೂ ಸಹ ಬಾರಿಸಿದ್ದಾರೆ. ಹಾಗೆಯೇ ವಾಂಖೆಡೆ ಪಿಚ್​ನಲ್ಲಿ 150 ರನ್​ ಕೂಡ ಬಾರಿಸಿದ್ದರು. ಪ್ರಸ್ತುತ ದೇಶೀಯ ಟೂರ್ನಿಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದಾಗ್ಯೂ ಅವರ ಆಯ್ಕೆ ಯಾಕಿಲ್ಲ ಎಂಬ ಪ್ರಶ್ನೆಯನ್ನು ವೆಂಕಟೇಶ್ ಪ್ರಸಾದ್ ಹುಟ್ಟುಹಾಕಿದ್ದಾರೆ.

6 / 9
ಇದೇ ವೇಳೆ ಶಿಖರ್ ಧವನ್ ಅವರ ಟೆಸ್ಟ್ ಅಂಕಿ ಅಂಶಗಳನ್ನು ಕೂಡ ವೆಂಕಟೇಶ್ ಪ್ರಸಾದ್ ಮುಂದಿಟ್ಟಿದ್ದಾರೆ. ಟೀಮ್ ಇಂಡಿಯಾ ಪರ 58 ಟೆಸ್ಟ್ ಇನಿಂಗ್ಸ್ ಆಡಿರುವ ಧವನ್ 7 ಶತಕಗಳೊಂದಿಗೆ 2315 ರನ್​ ಕಲೆಹಾಕಿದ್ದಾರೆ. ಅಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಶಿಖರ್ ಧವನ್ 40 ರ ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ.

7 / 9
ಈ ಎರಡು ಅಂಕಿ ಅಂಶಗಳ ಮೂಲಕ ಕೆಎಲ್ ರಾಹುಲ್ ಅವರ ಆಯ್ಕೆಯನ್ನು ಸಮರ್ಥಿಸುವವರನ್ನು ವೆಂಕಟೇಶ್ ಪ್ರಸಾದ್ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ ಕಳೆದ 20 ವರ್ಷಗಳ ಭಾರತೀಯ ಕ್ರಿಕೆಟ್‌ನಲ್ಲಿ ಯಾವುದೇ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಇಷ್ಟು ಕಡಿಮೆ ಸರಾಸರಿಯಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ ಎಂದು ವೆಂಕಟೇಶ್ ಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ.

8 / 9
ಇನ್ನು 2022 ರಿಂದ ಕೆಎಲ್​ ರಾಹುಲ್​ ಆಡಿದ ಟೆಸ್ಟ್ ಪಂದ್ಯಗಳ ಸ್ಕೋರ್​ಗಳನ್ನು ನೋಡುವುದಾದರೆ...50, 8, 12, 10, 22, 23, 10, 2, 20 ಮತ್ತು 17 ರನ್​ಗಳಿಸಿದ್ದಾರೆ. ಅಂದರೆ ಕಳೆದ 10 ಇನಿಂಗ್ಸ್​ಗಳಲ್ಲಿ ರಾಹುಲ್ ಏಕೈಕ ಅರ್ಧಶತಕ ಮಾತ್ರ ಬಾರಿಸಿದ್ದರು. ಇದಾಗ್ಯೂ ಅವರನ್ನು ಸತತವಾಗಿ ತಂಡಕ್ಕೆ ಆಯ್ಕೆ ಮಾಡುತ್ತಿರುವ ಬಗ್ಗೆ ಇದೀಗ ಟೀಕೆಗಳು ವ್ಯಕ್ತವಾಗುತ್ತಿದೆ.

9 / 9
Follow us
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ

Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?

Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ

ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ

ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ

ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ