Sunil Gavaskar: ಈ ಎಲ್ಲ ಬೆಳವಣಿಗೆಗೆ ಕೊಹ್ಲಿ ಅಂದು ನೀಡಿದ ಆ ಒಂದು ಹೇಳಿಕೆ ಕಾರಣ ಎಂದ ಸುನೀಲ್ ಗವಾಸ್ಕರ್

| Updated By: Vinay Bhat

Updated on: Dec 16, 2021 | 12:04 PM

Virat Kohli: ಈ ವರ್ಷದ ಸೆಪ್ಟೆಂಬರ್ ನಲ್ಲಿ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದಾಗ ವಿರಾಟ್ ಕೊಹ್ಲಿ ನೀಡಿದ ಹೇಳಿಕೆಯೇ ಇದಕ್ಕೆ ಕಾರಣ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ. ಕೊಹ್ಲಿ ತನ್ನ ವಿದಾಯ ಪತ್ರದಲ್ಲಿ ಬರೆದ ಸಾಲಿನಿಂದ ಬಿಸಿಸಿಐನ ಉನ್ನತ ಅಧಿಕಾರಿಗಳ ಭಾವನೆಗಳಿಗೆ ನೋವುಂಟು ಮಾಡಿರಬಹುದು ಎಂದಿದ್ದಾರೆ.

1 / 7
ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ನಡುವಣ ಮನಸ್ತಾಪ ಇಂದು ಜಗಜ್ಜಾಹೀರಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಕಳೆದೊಂದು ವಾರದಿಂದ ಎದ್ದಿದ್ದ ಗಾಸಿಪ್ಗಳಿಗೆ ತೆರೆಎಳೆದಿದ್ದಾರೆ.

2 / 7
ಪ್ರಮುಖವಾಗಿ ಕೊಹ್ಲಿ ಅವರು ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿಗೆ ಉತ್ತರ ನೀಡಿದ್ದು, ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಬಿಸಿಸಿಐ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.

3 / 7
ಟಿ20 ಕ್ರಿಕೆಟ್ ನಾಯಕತ್ವ ತೊರೆಯುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಸಿಸಿಐ ನನಗೆ ಸೂಚಿಸಿರಲಿಲ್ಲ. ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸುವ ಬಗ್ಗೆಯೂ ಮಂಡಳಿ ಅಥವಾ ಆಯ್ಕೆ ಸಮಿತಿಯಿಂದ ನನಗೆ ಮೊದಲೇ ಮಾಹಿತಿ ಬಂದಿರಲಿಲ್ಲ ಎಂದು ವಿರಾಟ್ ಶಾಕಿಂಗ್ ಹೇಳಿಕೆ ನೀಡಿದರು.

4 / 7
ಸದ್ಯ ಇದೇ ವಿಚಾರವಾಗಿ ಟೀಮ್ ಇಂಡಿಯಾ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಮಾತನಾಡಿದ್ದಾರೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದಾಗ ಕೊಹ್ಲಿ ನೀಡಿದ ಹೇಳಿಕೆಯೇ ಇದಕ್ಕೆ ಕಾರಣ ಎಂದು ಗವಾಸ್ಕರ್ ಹೇಳಿದ್ದಾರೆ.

5 / 7
ಕೊಹ್ಲಿ ತನ್ನ ವಿದಾಯ ಪತ್ರದಲ್ಲಿ ಬರೆದ ಸಾಲಿನಿಂದ ಬಿಸಿಸಿಐನ ಉನ್ನತ ಅಧಿಕಾರಿಗಳ ಭಾವನೆಗಳಿಗೆ ನೋವುಂಟು ಮಾಡಿರಬಹುದು. ವಿದಾಯ ಪತ್ರದಲ್ಲಿ ವಿರಾಟ್, "ಇನ್ನು ಮುಂದೆ ನಾನು ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುತ್ತೇನೆ" ಎಂದು ಬರೆದುಕೊಂಡಿದ್ದರು. ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ಅವರು ನಾಯಕರಾಗುತ್ತಾರೆ ಎಂಬ ಸಾಲುಗಳು ಅವರ ವಿರುದ್ಧ ಈ ಸಣ್ಣ ವಿರೋಧಿ ಭಾವನೆ ಇರಲು ಒಂದು ಕಾರಣವಾಗಿರಬಹುದು ಎಂಬುದು ಗವಾಸ್ಕರ್ ಅಭಿಪ್ರಾಯ.

6 / 7
ಕೊಹ್ಲಿ ಐಸಿಸಿ ಈವೆಂಟ್ಗಳನ್ನು ಗೆದ್ದಿಲ್ಲ ಆದರೆ ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದ್ದಾರೆ. ತವರಿನಲ್ಲಿ ಅಥವಾ ವಿದೇಶದಲ್ಲಿ ಅವರು ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಹಾಗಾಗಿ ಅವರ ನಾಯಕತ್ವದ ಸಾಮರ್ಥ್ಯದ ಬಗ್ಗೆ ಜನರು ಅತೃಪ್ತಿ ಹೊಂದಲು ಯಾವುದೇ ಕಾರಣವಿಲ್ಲ. ಆದರೆ ಈ ಅತೃಪ್ತಿ ಪ್ರಾರಂಭವಾಗಲು ಒಂದು ಸಾಲು ಕಾರಣವಾಗಿರಬಹುದು  - ಗವಾಸ್ಕರ್.

7 / 7
ಏಕದಿನ ನಾಯಕತ್ವದಿಂದ ಕೈಬಿಡುವ ಮುನ್ನ ಸಾರ್ವಜನಿಕವಾಗಿ ಘೋಷಿಸುವ ಮೊದಲೇ ಕೊಹ್ಲಿ ಅವರ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ. ಅಲ್ಲವೆ? ಎಲ್ಲವನ್ನೂ ಘೋಷಿಸಿದ ಬಳಿಕ ಮಾಧ್ಯಮಗಳ ಮೂಲಕ ಅವರಿಗೆ ವಿಚಾರ ತಿಳಿಯಿತೆ? ಇಲ್ಲವಲ್ಲ.. ಘೋಷಣೆಗೂ ಮುನ್ನ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಖುದ್ದಾಗಿ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಇದಕ್ಕಿಂತಲೂ ಹೆಚ್ಚಿನದ್ದೇನು ಬೇಕು ಅವರಿಗೆ? ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.