Suresh Raina: ಸುರೇಶ್ ರೈನಾಗೆ ಸ್ಪೋಟ್ಸ್​ ಐಕಾನ್ ಪ್ರಶಸ್ತಿ: CSK ನ ಟ್ರೋಲ್ ಮಾಡಿದ ಫ್ಯಾನ್ಸ್

Edited By:

Updated on: Mar 20, 2022 | 4:44 PM

Suresh Raina: ಸುರೇಶ್ ರೈನಾ ಇದುವರೆಗೆ 205 ಐಪಿಎಲ್ ಪಂದ್ಯಗಳನ್ನು ಆಡಿದ್ದು, 5528 ರನ್ ಗಳಿಸಿದ್ದಾರೆ. ಈ ವೇಳೆ ರೈನಾ 39 ಅರ್ಧಶತಕಗಳನ್ನು ಹಾಗೂ ಒಂದು ಶತಕವನ್ನು ಗಳಿಸಿದ್ದಾರೆ. ಅಲ್ಲದೆ ಬೌಲಿಂಗ್‌ನಲ್ಲೂ 25 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

1 / 6
ಸುರೇಶ್ ರೈನಾ ಅವರು ವರ್ಷದ ಕ್ರೀಡಾ ಐಕಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಪಿಎಲ್ 2022 ರ ಹರಾಜಿನಲ್ಲಿ ಮಾರಾಟವಾಗದೆ ಉಳಿದಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ಸ್ಟಾರ್ ಆಟಗಾರ ರೈನಾಗೆ ಮಾಲ್ಡೀವ್ಸ್ ಸರ್ಕಾರ ಈ ಪ್ರಶಸ್ತಿ ನೀಡಿ ಗೌರವಿಸಿದೆ.

ಸುರೇಶ್ ರೈನಾ ಅವರು ವರ್ಷದ ಕ್ರೀಡಾ ಐಕಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಪಿಎಲ್ 2022 ರ ಹರಾಜಿನಲ್ಲಿ ಮಾರಾಟವಾಗದೆ ಉಳಿದಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ಸ್ಟಾರ್ ಆಟಗಾರ ರೈನಾಗೆ ಮಾಲ್ಡೀವ್ಸ್ ಸರ್ಕಾರ ಈ ಪ್ರಶಸ್ತಿ ನೀಡಿ ಗೌರವಿಸಿದೆ.

2 / 6

ವಿಶೇಷ ಎಂದರೆ ಈ ಬಾರಿ ಸುರೇಶ್ ರೈನಾ ಅವರನ್ನು ಐಪಿಎಲ್​ನಲ್ಲಿ ಯಾವುದೇ ತಂಡ ಖರೀದಿಸಿರಲಿಲ್ಲ. ಇದೀಗ ರೈನಾ ಅವರಿಗೆ ಸ್ಪೋರ್ಟ್ಸ್ ಐಕಾನ್ ಪ್ರಶಸ್ತಿ ಲಭಿಸುತ್ತಿದ್ದಂತೆ ಇತ್ತ ಅಭಿಮಾನಿಗಳು ಸಿಎಸ್​ಕೆ ತಂಡವನ್ನು ಟ್ರೋಲ್ ಮಾಡಿದ್ದಾರೆ. ಏಕೆಂದರೆ ಸಿಎಸ್​ಕೆ ಪರ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ರೈನಾ ಹೆಸರಿನಲ್ಲಿದೆ. ಇದಾಗ್ಯೂ ಸಿಎಸ್​ಕೆ ತಂಡವು ರೈನಾ ಅವರ ಖರೀದಿಗೆ ಯಾವುದೇ ಆಸಕ್ತಿ ತೋರಲಿಲ್ಲ. ಹೀಗಾಗಿ ನೆಚ್ಚಿನ ಆಟಗಾರನಿಗೆ ಪ್ರಶಸ್ತಿ ಲಭಿಸುತ್ತಿದ್ದಂತೆ ಅಭಿಮಾನಿಗಳು ಸಿಎಸ್​ಕೆ ತಂಡವನ್ನು ಟ್ರೋಲ್ ಮಾಡಲಾರಂಭಿಸಿದರು.

3 / 6

ಈ ಪ್ರಶಸ್ತಿ ಸುತ್ತಿನಲ್ಲಿ ಅನೇಕ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದರು. ಬ್ರೆಜಿಲ್ ಫುಟ್ಬಾಲ್ ಆಟಗಾರ ರಾಬರ್ಟೊ ಕಾರ್ಲೋಸ್, ಜಮೈಕಾದ ಸ್ಪ್ರಿಂಟರ್ ಅಸಫಾ ಪೊವೆಲ್, ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರಂತಹ ಅನೇಕ ದೊಡ್ಡ ಹೆಸರುಗಳು ಈ ಪ್ರಶಸ್ತಿಯ ರೇಸ್‌ನಲ್ಲಿದ್ದವು. ಇವರೆಲ್ಲರನ್ನೂ ಹಿಂದಿಕ್ಕಿ ಸುರೇಶ್ ರೈನಾ ಅವರಿಗೆ ಈ ಅವಾರ್ಡ್ ಒಲಿದಿರುವುದು ವಿಶೇಷ.

4 / 6

ಬಾಂಗ್ಲಾದೇಶ, ಸೌದಿ ಅರೇಬಿಯಾ, ಮಾಲ್ಡೀವ್ಸ್‌ನ ಹಲವಾರು ಸಚಿವರು ಮತ್ತು ಅಧಿಕಾರಿಗಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸಲೇಹ್ ಕೂಡ ಉಪಸ್ಥಿತರಿದ್ದರು.

5 / 6

ಈ ಗೌರವಕ್ಕಾಗಿ ಮಾಲ್ಡೀವ್ಸ್ ಅಧ್ಯಕ್ಷರಿಗೆ ರೈನಾ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಎಲ್ಲಾ ವಿಶ್ವ ಚಾಂಪಿಯನ್‌ಗಳ ನಡುವೆ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಭಾವನೆ ಅದ್ಭುತವಾಗಿದೆ ಎಂದು ಹೇಳಿದ್ದಾರೆ.

6 / 6

ಸುರೇಶ್ ರೈನಾ ಇದುವರೆಗೆ 205 ಐಪಿಎಲ್ ಪಂದ್ಯಗಳನ್ನು ಆಡಿದ್ದು, 5528 ರನ್ ಗಳಿಸಿದ್ದಾರೆ. ಈ ವೇಳೆ ರೈನಾ 39 ಅರ್ಧಶತಕಗಳನ್ನು ಹಾಗೂ ಒಂದು ಶತಕವನ್ನು ಗಳಿಸಿದ್ದಾರೆ. ಅಲ್ಲದೆ ಬೌಲಿಂಗ್‌ನಲ್ಲೂ 25 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

Loading...
Unable to load recommendations.
Follow Us