Suryakumar Yadav: ಹಿಟ್​ಮ್ಯಾನ್ ವಿಶ್ವ ದಾಖಲೆ ಮೇಲೆ ಸೂರ್ಯಕುಮಾರ್ ಕಣ್ಣು..!

| Updated By: ಝಾಹಿರ್ ಯೂಸುಫ್

Updated on: Nov 29, 2022 | 6:30 PM

Suryakumar Yadav: ಈ ಪಂದ್ಯದಲ್ಲಿ ವಿಶೇಷ ವಿಶ್ವ ದಾಖಲೆ ನಿರ್ಮಿಸುವ ಅವಕಾಶ ಕೂಡ ಸೂರ್ಯಕುಮಾರ್ ಯಾದವ್ ಮುಂದಿದೆ. ಅದು ಕೂಡ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

1 / 5
ಭಾರತ-ನ್ಯೂಜಿಲೆಂಡ್ ನಡುವಣ ಏಕದಿನ ಸರಣಿಯ ಮೂರನೇ ಪಂದ್ಯವು ಬುಧವಾರ ಕ್ರೈಸ್ಟ್​​ಚರ್ಚ್​​ನ ಹ್ಯಾಗ್ಲಿ ಓವಲ್​ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಕಿವೀಸ್ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಅಂತಿಮ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸರಣಿ ಸಮಬಲಗೊಳಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ. ಹೀಗಾಗಿ ಈ ಪಂದ್ಯವು ಭಾರತದ ಪಾಲಿಗೆ ನಿರ್ಣಾಯಕ.

2 / 5
ಹಾಗೆಯೇ ಈ ಪಂದ್ಯದಲ್ಲಿ ವಿಶೇಷ ವಿಶ್ವ ದಾಖಲೆ ನಿರ್ಮಿಸುವ ಅವಕಾಶ ಕೂಡ ಸೂರ್ಯಕುಮಾರ್ ಯಾದವ್ ಮುಂದಿದೆ. ಅದು ಕೂಡ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

3 / 5
ಹೌದು, ಒಂದೇ ವರ್ಷದಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹಿಟ್​ಮ್ಯಾನ್ 2019 ರಲ್ಲಿ 78 ಸಿಕ್ಸ್​​ಗಳನ್ನು ಬಾರಿಸುವ ಮೂಲಕ ಈ ದಾಖಲೆ ಬರೆದಿದ್ದರು. ಇದೀಗ ಈ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶ ಸೂರ್ಯನ ಮುಂದಿದೆ.

4 / 5
ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 5 ಸಿಕ್ಸ್​ ಬಾರಿಸಿದ್ದಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ. ಏಕೆಂದರೆ 2022 ರಲ್ಲಿ ಸೂರ್ಯ ಒಟ್ಟು 74 ಸಿಕ್ಸ್​ಗಳನ್ನು ಸಿಡಿಸಿದ್ದಾರೆ. ಇದೀಗ ಹಿಟ್​ಮ್ಯಾನ್ ದಾಖಲೆ ಮುರಿಯುವ ಹೊಸ್ತಿಲಿಗೆ ಬಂದು ನಿಂತಿದ್ದಾರೆ.

5 / 5
ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 5 ಸಿಕ್ಸ್ ಬಾರಿಸಿದ್ದೇ ಆದಲ್ಲಿ, ಹಿಟ್​ಮ್ಯಾನ್ ನಿರ್ಮಿಸಿದ 3 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದು ಸಿಕ್ಸರ್ ಕಿಂಗ್ ಎನಿಸಿಕೊಳ್ಳಬಹುದು.