Suryakumar Yadav Record: ಒಂದಲ್ಲ ಎರಡಲ್ಲ, ಸೂರ್ಯಕುಮಾರ್ ಆರ್ಭಟಕ್ಕೆ ಸೃಷ್ಟಿಯಾದ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ

| Updated By: Vinay Bhat

Updated on: Nov 21, 2022 | 8:14 AM

India vs New Zealand: ನ್ಯೂಜಿಲೆಂಡ್​ ಬೌಲರ್​ಗಳ ಬೆಂಡೆತ್ತಿದ ಸೂರ್ಯಕುಮಾರ್ ಯಾದವ್ ಕೇವಲ 51 ಎಸೆತಗಳಲ್ಲಿ ಬರೋಬ್ಬರಿ 11 ಫೋರ್ ಹಾಗೂ 7 ಮನಮೋಹಕ ಸಿಕ್ಸರ್ ಸಿಡಿಸಿ ಅಜೇಯ 111 ರನ್ ಚಚ್ಚಿದರು. ಇದರ ಜೊತೆಗೆ ದಿಗ್ಗಜ ಬ್ಯಾಟರ್​ಗಳ ದಾಖಲೆಗಳನ್ನು ಪುಡಿ ಪುಡಿ ಮಾಡಿದ್ದಾರೆ.

1 / 9
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20  ಪಂದ್ಯ ಮಳೆಗೆ ಆಹುತಿಯಾದ ಕಾರಣ ದ್ವಿತೀಯ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು. ಅದರಂತೆ ಮೌಂಟ್ ಮೌಂಗನುನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ 65 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಉಳಿದಿರುವ ಒಂದು ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಸೋತರೆ ಸಮಬಲ ಆಗಲಿದೆ. ಟೀಮ್ ಇಂಡಿಯಾ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದು ಸೂರ್ಯಕುಮಾರ್ ಯಾದವ್.

2 / 9
ಕಿವೀಸ್​ ಬೌಲರ್​ಗಳ ಬೆಂಡೆತ್ತಿದ ಸೂರ್ಯಕುಮಾರ್ ಕೇವಲ 51 ಎಸೆತಗಳಲ್ಲಿ ಬರೋಬ್ಬರಿ 11 ಫೋರ್ ಹಾಗೂ 7 ಮನಮೋಹಕ ಸಿಕ್ಸರ್ ಸಿಡಿಸಿ ಅಜೇಯ 111 ರನ್ ಚಚ್ಚಿದರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು. ಇದರ ಜೊತೆಗೆ ದಾಖಲೆಗಳ ಮೇಲೆ ದಾಖಲೆ ಕೂಡ ಬರೆದಿದ್ದಾರೆ. ಟಿ20 ಕ್ರಿಕೆಟ್​ನ ನಂಬರ್ ಒನ್ ಬ್ಯಾಟರ್ ದಿಗ್ಗಜ ಬ್ಯಾಟರ್​ಗಳ ದಾಖಲೆಗಳನ್ನು ಪುಡಿ ಪುಡಿ ಮಾಡಿದ್ದಾರೆ.

3 / 9
ಸೂರ್ಯಕುಮಾರ್ ಯಾದವ್ ಕ್ಯಾಲೆಂಡರ್ ವರ್ಷದಲ್ಲಿ ಎರಡು ಟಿ20 ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿದ ಎರಡನೇ ಸಾಧನೆ ಮಾಡಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಭಾರತದ ಪರ ಎರಡು ಟಿ20-ಐ ಶತಕ ಬಾರಿಸಿದ ಎರಡನೇ ಬ್ಯಾಟರ್ ಎನಿಸಿದ್ದಾರೆ. ಇದಕ್ಕೂ ಮುನ್ನ 2018ರಲ್ಲಿ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದರು.

4 / 9
ಸೂರ್ಯಕುಮಾರ್ ಈ ವರ್ಷ ಭರ್ಜರಿ ಫಾರ್ಮ್​ನಲ್ಲಿದ್ದು, 11ನೇ ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದು ಭಾರತೀಯ ಆಟಗಾರನ ಅತ್ಯುತ್ತಮ ಪ್ರದರ್ಶನ ಎಂಬುದು ಗಮನಾರ್ಹ. ಈ ಹಿಂದೆ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್ ಒಂದು ವರ್ಷದಲ್ಲಿ 10 ಅರ್ಧಶತಕ ಬಾರಿಸಿದ್ದರು.

5 / 9
ಈ ಪಂದ್ಯದಲ್ಲಿ ಸೆಂಚುರಿ ಸಿಡಿಸಲು ಸೂರ್ಯ ತೆಗೆದುಕೊಂಡಿದ್ದು 49 ಎಸೆತಗಳನ್ನು. ಈ ಮೂಲಕ ಭಾರತ ಪರ ಟಿ20 ಯಲ್ಲಿ ಅತ್ಯಂತ ವೇಗವಾಗಿ ಶತಕ ಬಾರಿಸಿದ ಮೂರನೇ ಬ್ಯಾಟರ್ ಎಂಬ ಸಾಧನೆ ಮಾಡಿದರು. ಇದಕ್ಕೂ ಮೊದಲು ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು. ನಂತರದ ಸ್ಥಾನದಲ್ಲಿ ಕೆಎಲ್ ರಾಹುಲ್ ಇದ್ದು, ಇವರು ವೆಸ್ಟ್ ಇಂಡೀಸ್ ವಿರುದ್ಧ 46 ಎಸೆತಗಳಲ್ಲಿ ಮೂರಂಕಿ ತಲುಪಿದ್ದರು.

6 / 9
ಇದಿಷ್ಟೇ ಅಲ್ಲದೆ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ 6ನೇ ಫೋರ್​ ಬಾರಿಸುವ ಮೂಲಕ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸೂರ್ಯ ಸದ್ಯ 30 ಟಿ20 ಪಂದ್ಯಗಳಲ್ಲಿ 105 ಬೌಂಡರಿ ಗಳಿಸಿದ್ದಾರೆ. ಈಗಾಗಲೇ 60 ಸಿಕ್ಸರ್ ಸಿಡಿಸುವ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎಂಬ ಸಾಧನೆ ಮಾಡಿದ್ದಾರೆ.

7 / 9
ಇನ್ನು ಈ ಶತಕದೊಂದಿಗೆ ಸೂರ್ಯ 2022ರಲ್ಲಿ ತಮ್ಮ ಒಟ್ಟು ಟಿ20 ಅಂತರರಾಷ್ಟ್ರೀಯ ರನ್‌ಗಳ ಗಳಿಕೆಯನ್ನು 1151ಕ್ಕೆ ಹೆಚ್ಚಿಸಿಕೊಂಡಿದ್ದಾರೆ. 30 ಪಂದ್ಯಗಳಲ್ಲಿ ಈ ಸಾಧನೆ ಮೆರೆದಿರುವ ಸೂರ್ಯ, ವರ್ಷವೊಂದರಲ್ಲಿ ಅತಿ ಹೆಚ್ಚು ಟಿ20I ರನ್‌ಗಳಿಸಿದ ಬ್ಯಾಟರ್‌ ಆಗಿ ಪಾಕಿಸ್ತಾನದ ಮೊಹಮ್ಮದ್‌ ರಿಝ್ವಾನ್‌ ಅವರ ದಾಖಲೆಯನ್ನು ಮುರಿಯಲು ಇನ್ನು 177 ರನ್‌ಗಳ ಅಗತ್ಯವಿದೆಯಷ್ಟೆ.

8 / 9
ಪಂದ್ಯ  ಮುಗಿದ ಬಳಿಕ ಮಾತನಾಡಿದ ಸೂರ್ಯಕುಮಾರ್, ತಮ್ಮ ಆಟದ ಹಿಂದಿರುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ''ಬ್ಯಾಟಿಂಗ್ ಮಾಡುವಾಗ ಒಂದು ಉದ್ದೇಶವಿಟ್ಟುಕೊಂಡು ಬ್ಯಾಟ್ ಮಾಡುತ್ತೇನೆ. ಮತ್ತು ಅದನ್ನು ನಾನು ತುಂಬಾ ಆನಂದಿಸುತ್ತೇನೆ. ಅಭ್ಯಾಸದ ವೇಳೆ ಮಾಡಿದ್ದನ್ನು ಇಲ್ಲಿ ಪ್ರಯೋಗಿಸುತ್ತೇನೆ. ಇದರ ಫಲಿತಾಂಶವೇ ಈ ಇನಿಂಗ್ಸ್,'' ಎಂಬುದು ಸೂರ್ಯ ಮಾತು.

9 / 9
ದ್ವಿತೀಯ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸೂರ್ಯಕುಮಾರ್ ಅವರ ಶತಕದ ನೆರವಿನಿಂದ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿತು. ನ್ಯೂಜಿಲೆಂಡ್ ಪರ ಟಿಮ್ ಸೌದೀ ಹ್ಯಾಟ್ರಿಕ್ ವಿಕೆಟ್ ಪಡೆದರು. ಟಾರ್ಗೆಟ್ ಬೆನ್ನಟ್ಟಿದ  ಕಿವೀಸ್ ಪಡೆ 18.5 ಓವರ್​​ನಲ್ಲಿ 126 ರನ್​ಗೆ ಆಲೌಟ್ ಆಗುವ ಮೂಲಕ ಸೊಲು ಕಂಡಿತು. ಭಾರತ ಪರ ದೀಪಕ್ ಹೂಡ 4 ವಿಕೆಟ್ ಕಿತ್ತು ಮಿಂಚಿದರು.

Published On - 8:12 am, Mon, 21 November 22