Updated on: Oct 18, 2022 | 9:23 PM
ಕ್ರಿಕೆಟ್ ಅಂಗಳದ ಚುಟುಕು ಮಹಾಸಮರ ಟಿ20 ವಿಶ್ವಕಪ್ ಶುರುವಾಗಿದೆ. ಮೊದಲ ಸುತ್ತಿನ ಅರ್ಹತಾ ಪಂದ್ಯಗಳು ನಡೆಯುತ್ತಿದ್ದು, ಇದಾದ ಬಳಿಕ ಅಕ್ಟೋಬರ್ 22 ರಿಂದ 12 ತಂಡಗಳ ನಡುವಿನ ಅಸಲಿ ಕದನ ಶುರುವಾಗಲಿದೆ.
ಇದರ ನಡುವೆ ಈ ಬಾರಿ ಟಿ20 ವಿಶ್ವಕಪ್ ಎತ್ತಿ ಹಿಡಿಯಲಿರುವ ತಂಡ ಯಾವುದೆಂಬ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಈ ಸಲ ಸೆಮಿಫೈನಲ್ಗೇರುವ ನಾಲ್ಕು ಬಲಿಷ್ಠ ತಂಡಗಳು ಯಾವುವು ಎಂಬ ಪ್ರಶ್ನೆಯನ್ನು ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮುಂದಿಡಲಾಗಿದೆ.
ಈ ಕುತೂಹಲಕಾರಿ ಪ್ರಶ್ನೆಗೆ ಸಚಿನ್ ತೆಂಡೂಲ್ಕರ್ ಉತ್ತರಿಸಿದ್ದಾರೆ. ಹಾಗಿದ್ರೆ ಕ್ರಿಕೆಟ್ ದೇವರು ಹೆಸರಿಸಿದ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಆಡಲಿರುವ 4 ತಂಡಗಳು ಯಾವುವು ಎಂದು ನೋಡೋಣ..
ಭಾರತ: ಈ ಬಾರಿ ಭಾರತ ತಂಡವು ಸೆಮಿಫೈನಲ್ಗೇರುವುದು ಖಚಿತ ಎಂದಿದ್ದಾರೆ ಸಚಿನ್ ತೆಂಡೂಲ್ಕರ್.
ಪಾಕಿಸ್ತಾನ್: ಪಾಕ್ ತಂಡವು ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಸೆಮಿಫೈನಲ್ ಹಂತಕ್ಕೇರಲಿದೆ ಎಂದು ತಿಳಿಸಿದ್ದಾರೆ. ಇದಾಗ್ಯೂ ಸೌತ್ ಆಫ್ರಿಕಾ ತಂಡವನ್ನು ಡಾರ್ಕ್ ಹಾರ್ಸ್ ಎಂದು ಹೆಸರಿಸಿದ್ದಾರೆ. ಅಂದರೆ ಪಾಕ್ ತಂಡ ಬ್ಯಾಟಿಂಗ್ನಲ್ಲಿ ವಿಫಲವಾದರೆ ಸೌತ್ ಆಫ್ರಿಕಾ ಸೆಮಿಫೈನಲ್ಗೇರಬಹುದು.
ಆಸ್ಟ್ರೇಲಿಯಾ: ತವರು ಮೈದಾನದ ಸಂಪೂರ್ಣ ಲಾಭ ಪಡೆಯಲಿರುವ ಆಸ್ಟ್ರೇಲಿಯಾ ತಂಡ ಕೂಡ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಆಡಲಿದೆ ಎಂದು ಸಚಿನ್ ಭವಿಷ್ಯ ನುಡಿದಿದ್ದಾರೆ.
ಇಂಗ್ಲೆಂಡ್: ಇನ್ನು ಸೆಮಿಫೈನಲ್ಗೇರುವ ನಾಲ್ಕನೇ ತಂಡವಾಗಿ ಇಂಗ್ಲೆಂಡ್ ಅನ್ನು ಹೆಸರಿಸಿದ್ದಾರೆ. ಇದಾಗ್ಯೂ ಐಸಿಸಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನ್ಯೂಜಿಲೆಂಡ್ ಅಂತಿಮ ಹಂತದಲ್ಲಿ ಫಲಿತಾಂಶವನ್ನು ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ತಂಡ ಎಂದು ಸಚಿನ್ ಉಲ್ಲೇಖಿಸಿದ್ದಾರೆ.
ಅಂದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪ್ರಕಾರ ಈ ಬಾರಿ ಭಾರತ, ಪಾಕಿಸ್ತಾನ್, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಪಂದ್ಯಗಳನ್ನಾಡುವ ಸಾಧ್ಯತೆ ಹೆಚ್ಚಿದೆ. ಕ್ರಿಕೆಟ್ ದೇವರು ಹೇಳಿರುವ ಈ ಭವಿಷ್ಯ ನಿಜವಾಗಲಿದೆಯಾ ಕಾದು ನೋಡಬೇಕಿದೆ.
ಸಚಿನ್ ತೆಂಡೂಲ್ಕರ್