T20 World Cup 2024: ಟಿ20 ವಿಶ್ವಕಪ್ ಆಡುವ ಬಯಕೆ ವ್ಯಕ್ತಪಡಿಸಿದ ದಿನೇಶ್ ಕಾರ್ತಿಕ್..!

Updated on: Apr 20, 2024 | 6:24 PM

T20 World Cup 2024 Dinesh Karthik: ಐಪಿಎಲ್ ಆರಂಭಕ್ಕೂ ಮುನ್ನ ಇದು ನನ್ನ ಕೊನೆಯ ಐಪಿಎಲ್ ಎಂಬ ಸುಳಿವು ನೀಡಿದ್ದ ಕಾರ್ತಿಕ್, ನಿವೃತ್ತಿಯ ಬದುಕಿಗೆ ಅಡಿಗಾಲಿಟ್ಟಿದ್ದರು. ಅಲ್ಲದೆ 2024 ರ ಟಿ20 ವಿಶ್ವಕಪ್ ಆಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಆದರೆ ಈಗ ಯು-ಟರ್ನ್ ತೆಗೆದುಕೊಂಡಿರುವ ಕಾರ್ತಿಕ್, ಆಯ್ಕೆಗಾರರು ಅವಕಾಶ ನೀಡಿದರೆ ವಿಶ್ವಕಪ್ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

1 / 6
17ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ. ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 6 ರಲ್ಲಿ ಸೋತು ಲೀಗ್​ನಿಂದ ಹೊರಬೀಳುವ ಆತಂಕದಲ್ಲಿದೆ. ಆದರೆ ತಂಡದ ಪರ ಕೆಳಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

17ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ. ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 6 ರಲ್ಲಿ ಸೋತು ಲೀಗ್​ನಿಂದ ಹೊರಬೀಳುವ ಆತಂಕದಲ್ಲಿದೆ. ಆದರೆ ತಂಡದ ಪರ ಕೆಳಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

2 / 6

ಆರ್​ಸಿಬಿ ಗೆದ್ದಿರುವ ಏಕೈಕ ಪಂದ್ಯದಲ್ಲೂ ಕಾರ್ತಿಕ್ ಆಟವೇ ನಿರ್ಣಾಯಕವಾಗಿತ್ತು. ಹೀಗೆ ತಂಡದ ಪರ ಗೇಮ್ ಫಿನಿಶರ್ ಪಾತ್ರವನ್ನು ನಿರ್ವಹಿಸುತ್ತಿರುವ ದಿನೇಶ್​ಗೆ ಮುಂಬರುವ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಬೇಕು ಎಂಬ ಕೂಗು ಜೋರಾಗಿದೆ. ಆದರೆ ಅದರ ಸಾಧ್ಯತೆಗಳು ತೀರ ಕಡಿಮೆ ಇವೆ.

3 / 6

ಇದೆಲ್ಲದರ ನಡುವೆ ಸ್ವತಃ ದಿನೇಶ್ ಕಾರ್ತಿಕ್ ಅವರೇ ಟಿ20 ವಿಶ್ವಕಪ್ ಆಡುವ ಆಸೆ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಇದು ನನ್ನ ಕೊನೆಯ ಐಪಿಎಲ್ ಎಂಬ ಸುಳಿವು ನೀಡಿದ್ದ ಕಾರ್ತಿಕ್, ನಿವೃತ್ತಿಯ ಬದುಕಿಗೆ ಅಡಿಗಾಲಿಟ್ಟಿದ್ದರು.

4 / 6

ಅಲ್ಲದೆ 2024 ರ ಟಿ20 ವಿಶ್ವಕಪ್ ಆಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಆದರೆ ಈಗ ಯು-ಟರ್ನ್ ತೆಗೆದುಕೊಂಡಿರುವ ಕಾರ್ತಿಕ್, ಆಯ್ಕೆಗಾರರು ಅವಕಾಶ ನೀಡಿದರೆ ವಿಶ್ವಕಪ್ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

5 / 6

ಈ ಬಗ್ಗೆ ಮಾತನಾಡಿರುವ ದಿನೇಶ್ ಕಾರ್ತಿಕ್, ‘ನನ್ನ ಜೀವನದ ಈ ಹಂತದಲ್ಲಿ ಭಾರತವನ್ನು ಪ್ರತಿನಿಧಿಸುವುದು ಶ್ರೇಷ್ಠ ಭಾವನೆಯಾಗಿದೆ. ನಾನು ಅದಕ್ಕೆ 100 ಪ್ರತಿಶತ ಸಿದ್ಧನಿದ್ದೇನೆ. ಟಿ20 ವಿಶ್ವಕಪ್‌ಗಾಗಿ ಆ ವಿಮಾನದಲ್ಲಿ ಹೋಗಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ ಎಂದಿದ್ದಾರೆ.

6 / 6

ಇನ್ನು ಈ ಆವೃತ್ತಿಯಲ್ಲಿ ಕಾರ್ತಿಕ್ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಆಡಿರುವ 7 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 75.33 ಸರಾಸರಿ ಮತ್ತು 205.45 ಸ್ಟ್ರೈಕ್ ರೇಟ್‌ನಲ್ಲಿ 226 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕಗಳೂ ಸೇರಿವೆ.

Loading...
Unable to load recommendations.
Follow Us